‘ಅಧಿಕಾರಿಗಳು ಎಚ್ಚೆತ್ತು ನೀರುಣಿಸಿ’
ನಾನು ಅಧ್ಯಕ್ಷನಾಗಿದ್ದ ವೇಳೆ ಗಿಡಗಳನ್ನು ನಾಟಿ ಮಾಡಲಾಗಿತ್ತು. ಸದಾ ವಾಹನಗಳಿಂದ ಗಿಜಿಗುಡುವ ರಸ್ತೆಯಲ್ಲಿ ಹಸಿರು ಕಾಣಲಿ ಎಂದು ಗಿಡಗಳನ್ನು ಹಾಕಲಾಗಿತ್ತು. ಹಸಿರೀಕರಣದಿಂದ ನಗರದ ಸೌಂದರ್ಯ ಸಹ ಹೆಚ್ಚಲಿ ಎನ್ನುವ ಆಶಯವಿತ್ತು. ಆದರೆ ಈಗ ನಿರ್ವಹಣೆ ಇಲ್ಲದೆ ಗಿಡಗಳು ನಾಶವಾಗುತ್ತಿವೆ ಎಂದು ನಗರಸಭೆ ಮಾಜಿ ಅಧ್ಯಕ್ಷ ಡಿ.ಎಸ್.ಆನಂದರೆಡ್ಡಿ ಬಾಬು ಬೇಸರ ವ್ಯಕ್ತಪಡಿಸುವರು. ನಾವು ಅಧಿಕಾರದಲ್ಲಿ ಇರುವವರೆಗೂ ಇವುಗಳ ನಿರ್ವಹಣೆ ಸಮರ್ಪಕವಾಗಿತ್ತು. ಸಸಿಗಳು ಬಾಡುತ್ತಿವೆ. ಕೆಲವು ಕಡೆಗಳಲ್ಲಿ ತೀರ ನಾಶವಾಗುವ ಹಂತದಲ್ಲಿವೆ. ಅಧಿಕಾರಿಗಳು ಪೂರ್ಣವಾಗಿ ನಾಶವಾಗುವಷ್ಟರಲ್ಲಿ ಎಚ್ಚೆತ್ತು ಇವುಗಳ ಆರೈಕೆ ಮಾಡಬೇಕು. ಸಮಯಕ್ಕೆ ಸರಿಯಾಗಿ ನೀರುಣಿಸಬೇಕು ಎನ್ನುತ್ತಾರೆ.