ದೊಡ್ಡಬಳ್ಳಾಪುರದ ಲಕ್ಕೇನಹಳ್ಳಿ ಬಳಿ ಜಲಾಶಯ
ಈ ಹಿಂದೆ ಕೊರಟಗೆರೆ ಮತ್ತು ದೊಡ್ಡಬಳ್ಳಾಪುರ ಗಡಿಭಾಗದ ಬೈರಗೊಂಡ್ಲು ಬಳಿ ಜಲಾಶಯ ನಿರ್ಮಿಸಲು ಕ್ರಮವಹಿಸಲಾಗಿತ್ತು. ಆದರೆ ಪರಿಹಾರದ ವಿಚಾರವಾಗಿ ಹಗ್ಗಜಗ್ಗಾಟವಿತ್ತು. ದೊಡ್ಡಬಳ್ಳಾಪುರ ತಾಲ್ಲೂಕಿನ ರೈತರಿಗೆ ನೀಡಿರುವ ಪರಿಹಾರವನ್ನೇ ನಮಗೂ ನೀಡಬೇಕು ಎಂದು ಕೊರಟಗೆರೆ ತಾಲ್ಲೂಕಿನಲ್ಲಿ ಜಲಾಶಯ ನಿರ್ಮಾಣಕ್ಕೆ ಜಮೀನು ಕಳೆದುಕೊಳ್ಳುವ ರೈತರು ಆಗ್ರಹಿಸಿದ್ದರು. ಹೋರಾಟಗಳನ್ನು ನಡೆಸಿದ್ದರು. ಈಗ ಪರಿಷ್ಕೃತ ಯೋಜನಾ ವರದಿಯಂತೆ ಬೈರಗೊಂಡ್ಲು ಗ್ರಾಮದ ಸಮೀಪದ ಬದಲಾಗಿ ದೊಡ್ಡಬಳ್ಳಾಪುರ ತಾಲ್ಲೂಕಿನ ಲಕ್ಕೇನಹಳ್ಳಿ ಗ್ರಾಮದ ಸಮೀಪ ಜಲಾಶಯ ನಿರ್ಮಿಸಲು ಅನುಮೋದನೆ ಡೆದು ಗುತ್ತಿಗೆದಾರರಿಗೆ ಕರಾರು ವಹಿಸಲು ಕ್ರಮಕೈಗೊಳ್ಳಲಾಗುತ್ತಿದೆ.