ಬಾಗೇಪಲ್ಲಿ: ಉದ್ಯೋಗ ಖಾತರಿ ಹಣ ಸಮರ್ಪಕವಾಗಿ ವಿತರಿಸಿಲ್ಲ ಎಂದು ಆರೋಪಿಸಿ ಘಂಟಂವಾರಿಪಲ್ಲಿ ಗ್ರಾಮಸ್ಥರು ಶುಕ್ರವಾರ ರಾತ್ರಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅಧಿಕಾರಿಗಳಿಗೆ ದಿಗ್ಬಂಧನ ಹಾಕಿರುವ ಘಟನೆ ನಡೆದಿದೆ.

ಗ್ರಾಮದಲ್ಲಿ ಕುಡಿಯುವ ನೀರು, ರಸ್ತೆ, ಬೀದಿ ದೀಪ, ನಿವೇಶನ ಹಾಗೂ ಮನೆ ಇಲ್ಲದೆ ಜನತೆ ಪರದಾಡುವ ಪರಿಸ್ಥಿತಿ ಎದುರಾಗಿದೆ.

ಕನಿಷ್ಠ ಮೂಲ ಸೌಕರ್ಯ ಸಮಸ್ಯೆ ಬಗ್ಗೆ ಹೇಳಿಕೊಳ್ಳಲು ಕಚೇರಿ ಅವಧಿಯಲ್ಲಿ ಕಾಣಿಸದ ಅಧಿಕಾರಿಗಳು, ರಾತ್ರಿ ಸಮಯದಲ್ಲಿ ಕಾರ್ಯ ನಿರ್ವಹಿಸು ತ್ತಿದ್ದಾರೆ ಎಂದು ಘಂಟಂವಾರಿಪಲ್ಲಿ ಗ್ರಾಮ ಪಂಚಾಯಿತಿ ಸುತ್ತಮುತ್ತ ಮುತ್ತಲಿನ ಗ್ರಾಮಸ್ಥರು ಗ್ರಾಮ ಪಂಚಾಯಿತಿ ಕಚೇರಿ ಎದುರು ಪ್ರತಿಭ ಟನೆ ನಡೆಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳಕ್ಕೆ ಸಬ್ ಇನ್ಸ್‌ಪೆ ಕ್ಟರ್ ಜೆ.ಎನ್.ಆನಂದ್‌ಕುಮಾರ್ ಆಗಮಿಸಿ ಪ್ರತಿಭಟನಾ ನಿರತರ ಜೊತೆಯಲ್ಲಿ ಮಾತನಾಡಿದರು. ಮೂಲ ಸೌಕರ್ಯ ಹಾಗೂ ಉದ್ಯೋಗ ಖಾತರಿ ಯೋಜನೆ ಹಣದ ವಿತರಣೆ ಬಗ್ಗೆ ಶನಿವಾರ ಅಧಿಕಾರಿಗಳ ಸಮ್ಮುಖದಲ್ಲಿ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನಾಕಾರರು ಧರಣಿ ವಾಪಸ್ ಪಡೆದರು.

ಪ್ರತಿಭಟನಾ ನಿರತರದಲ್ಲಿ ಘಂಟಂವಾರಿಪಲ್ಲಿ ಗ್ರಾ.ಪಂ.ಸದಸ್ಯ ನರಸಿಂಹಮೂರ್ತಿ, ಗಂಗರಾಜು, ಗಂಗಪ್ಪ, ಶ್ರೀನಾಥ, ಮಂಜುನಾಥ, ಗಂಗಾಧರ ಹಾಗೂ ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.