ಆಲ್ದೂರು: ಯಾರೋ ಕೆಲವರು ರಾಜ್ಯದ ಕಾಂಗ್ರೆಸ್ ಸರ್ಕಾರಕ್ಕೆ ದತ್ತಪೀಠದ ಕುರಿತು ತನಿಖೆ ನಡೆಸಲು ಮನವಿ ನೀಡಿದರೆ, ಅವರಿಗಾಗಿ ಪ್ರತ್ಯೇಕ ಎಸ್ಐಟಿ ರಚನೆ ಮಾಡಿದ ಸರ್ಕಾರ, ಹಿಂದೂಗಳಾದ ನಾವು ಅಕ್ರಮ ಗೋರಿಗಳ ವಿರುದ್ಧ ದೂರು ನೀಡಿದರೆ ಎಸ್ಐಟಿ ರಚನೆ ಮಾಡುತ್ತದೆಯೇ ಎಂದು ಮುಖಂಡ ಪ್ರಭಂಜನ್ ಸೂರ್ಯ ಹೇಳಿದರು.

ದತ್ತ ಜಯಂತಿ ಮತ್ತು ಸಂಕೀರ್ತನ ಯಾತ್ರೆ ಪ್ರಯುಕ್ತ ವಿಶ್ವ ಹಿಂದೂ ಪರಿಷತ್ ಬಜರಂಗದಳದ ಆಲ್ದೂರು ಹೋಬಳಿ ಸಂಘಟನೆ ವತಿಯಿಂದ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.

ಬಜರಂಗದಳದ ಹಿಂದೂ ಧಾರ್ಮಿಕ ಹೋರಾಟಗಳಿಗೆ ಆಲ್ದೂರು ಪುಣ್ಯಭೂಮಿಯಾಗಿದೆ. ದತ್ತಪೀಠಕ್ಕೆ ಅದರದ್ದೇ ಆದ ಇತಿಹಾಸ ಇದೆ. ಇನಾಮ್ ಭೂಮಿಯಾಗಿ ನೀಡಿದ್ದ ಜಮೀನನ್ನು ಹೈದರಾಲಿ ದುರುಪಯೋಗ ಪಡಿಸಿಕೊಂಡಿದ್ದನ್ನು ಮರೆಯುವಂತಿಲ್ಲ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಹಿಂದುತ್ವವಾದಿ ಮುಖಂಡ ತುಡುಕೂರು ಮಂಜು, ದತ್ತಪೀಠದ ಹಿನ್ನೆಲೆ, ಅಕ್ರಮ ಗೋರಿಗಳು ನಿರ್ಮಾಣವಾಗಿರುವ ಸರ್ವೆ ನಂಬರ್, ಸೂಚಿಸಿರುವ ಬೇರೆ ಜಾಗದ ಮಾಹಿತಿ ಹಂಚಿಕೊಂಡರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭವಾನಿ ಶಂಕರ್ ವಹಿಸಿದ್ದರು. ಆತ್ಮಿಕ್ ಗೌಡ ದೊಡ್ಡ ಮಾಗರವಳ್ಳಿ, ವಂದಿಸಿದರು. ವಿಶ್ವ ಹಿಂದೂ ಪರಿಷತ್ ಬಜರಂಗದಳ ಹೋಬಳಿ ಮುಖಂಡರಾದ ಸಂದೀಪ್, ಶಿವಕುಮಾರ್, ವಿಷ್ಣು, ಶಶಿ, ಸಿಂಧು ಕುಮಾರ್, ಮಹೇಶ್ ಕೆರೆಮಕ್ಕಿ, ರಾಕೇಶ್ ಹಳಿಯೂರು, ಮಿಥುನ್, ಮಹೇಂದ್ರ, ನವೀನ್ ಬಿಟಿ, ನಾಗೇಶ್, ನಾಗೇಂದ್ರ ಭಾಗವಹಿಸಿದ್ದರು. ಆಲ್ದೂರು, ಆವತಿ, ವಸ್ತಾರೆ ಹೋಬಳಿಗಳ ಕಾರ್ಯಕರ್ತರು ಭಾಗವಹಿಸಿದ್ದರು.

ಆಯೋಜಕರಾದ ಹೆಡದಾಳು ಸಂಪತ್, ಜಿಲ್ಲಾ ಮುಖಂಡರಾದ ಸಿಡಿ ಶಿವಕುಮಾರ್ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.