ಬುಧವಾರ, ಜೂನ್ 29, 2022
24 °C
ಕಾಫಿನಾಡಿನ ವಿವಿಧ ಆಸ್ಪತ್ರೆಗಳ ಕೋವಿಡ್‌ ವಾರ್ಡ್‌

ಹಾಸಿಗೆ ಲಭ್ಯತೆ; ಆನ್‌ಲೈನ್‌ನಲ್ಲಿ ಮಾಹಿತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಮಗಳೂರು: ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಕೋವಿಡ್‌ ವಾರ್ಡ್‌ಗಳಲ್ಲಿ ಹಾಸಿಗೆ ಲಭ್ಯತೆ (ಖಾಲಿ, ಭರ್ತಿ) ಮಾಹಿತಿಗೆ ಆನ್‌ಲೈನ್‌ ವ್ಯವಸ್ಥೆ ಕಲ್ಪಿಸಲಾಗಿದೆ. www.surakshackm.com ವೆಬ್‌ನಲ್ಲಿ ಮಾಹಿತಿ ಪಡೆಯಬಹುದಾಗಿದೆ.
ವೆಬ್‌ಸೈಟ್‌ಗೆ ಗುರುವಾರ ಚಾಲನೆ ನೀಡಲಾಗಿದೆ. ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ಹಾಸಿಗೆಗಳ ಮಾಹಿತಿ ಲಭ್ಯ ಇದೆ.

ಹಿಂದುಳಿದ ವರ್ಗಗಳ ಅಭಿವೃದ್ಧಿ ಅಧಿಕಾರಿ ಸೋಮಶೇಖರ ಅವರು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ, ‘ತೀವ್ರ ನಿಗಾ ಘಟಕ (ಐಸಿಯು), ವೆಂಟಿಲೇಟರ್‌, ಆಮ್ಲಜನಕ ವ್ಯವಸ್ಥೆ ವಾರ್ಡ್‌ಗಳಲ್ಲಿನ ಹಾಸಿಗೆಗಳ ಲಭ್ಯತೆ ಸಮಗ್ರ ಮಾಹಿತಿ ಪೋರ್ಟ್‌ನಲ್ಲಿ ಲಭ್ಯ ಇದೆ. ಹಾಸಿಗೆ ವ್ಯವಸ್ಥೆ ಸಹಾಯವಾಣಿ, ತಾಲ್ಲೂಕು ಆಸ್ಪತ್ರೆಗಳ ಸಹಾಯವಣಿ, ಕೋವಿಡ್‌ ಆರೈಕೆ ಕೇಂದ್ರಗಳ ಸಹಾಯವಾಣಿ ಸಂಖ್ಯೆಗಳು ಅದರಲ್ಲಿವೆ’ ಎಂದು ತಿಳಿಸಿದರು.

‘ಸಾರ್ವಜನಿಕರು ಈ ಫೋನ್‌ ನಂಬರ್‌ಗಳಿಗೆ ಸಂಪರ್ಕಿಸಿ ಮಾಹಿತಿ ಪಡೆಯಬಹುದು. ದಿನದ ಯಾವುದೇ ಸಮಯದಲ್ಲೂ ಕರೆ ಮಾಡಿ ಮಾಹಿತಿ ಪಡೆಯಬಹುದು’ ಎಂದು ಅವರು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು