ಕೊಪ್ಪ: ಪಟ್ಟಣದಲ್ಲಿರುವ ಎಂ.ಎಸ್.ದ್ಯಾವೇಗೌಡ ಸ್ಮಾರಕ ಸಾರ್ವಜನಿಕ ಆಸ್ಪತ್ರೆಯು ಜಿಲ್ಲೆಯ ಅತ್ಯುತ್ತಮ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ ಪ್ರಶಸ್ತಿಗೆ ಭಾಜನವಾಗಿದ್ದು, ಚಿಕ್ಕಮಗಳೂರು ಜಿಲ್ಲಾ ಉತ್ಸವ 2023ರ ಜ್ಞಾನ ವೈಭವ ಕಾರ್ಯಕ್ರಮದಲ್ಲಿ ವೈದ್ಯರು ಪ್ರಶಸ್ತಿ ಸ್ವೀಕರಿಸಿದರು.

ಆಸ್ಪತ್ರೆಯಲ್ಲಿ ಸ್ವಚ್ಚತೆಗೆ ಪ್ರಥಮ ಆದ್ಯತೆ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯಗಳ ಸಮರ್ಪಕ ನಿರ್ವಹಣೆ, ಶಿಥಿಲಗೊಂಡಿದ್ದ ಕೊಠಡಿಗಳ ದುರಸ್ತಿ ಹಾಗೂ ಆಸ್ಪತ್ರೆಯ ಕಟ್ಟಡಕ್ಕೆ ಸುಣ್ಣ ಬಣ್ಣ ಮುಂತಾದ ಅಭಿವೃದ್ಧಿ ಕೆಲಸಗಳು ನಡೆದಿವೆ.

ಆಸ್ಪತ್ರೆ ಆವರಣದಲ್ಲಿ ನೂತನವಾಗಿ ನಿರ್ಮಾಣಗೊಂಡ ಬಯೋ ಮೆಡಿಕಲ್ ತ್ಯಾಜ್ಯ ನಿರ್ವಹಣಾ ಕೊಠಡಿ, ಫಿಸಿಯೋಥೆರಪಿ ಕೊಠಡಿ, ಆಂಬುಲೆನ್ಸ್ ಶೆಡ್, ಆಡಳಿತಾಧಿಕಾರಿಗಳ ಕೊಠಡಿ, ರೋಗಿಗಳ ಅನುಕೂಲಕ್ಕಾಗಿ ರ‍್ಯಾಂಪ್ ನಿರ್ಮಾಣ, ಧ್ವಜ ಸ್ತಂಭ, ಪಾರ್ಕಿಂಗ್ ಶೆಡ್ ಕಾಮಗಾರಿಗಳು ನಡೆದಿವೆ.

ಲಕ್ಷ್ಯ ಕಾರ್ಯಕ್ರಮದಡಿಯಲ್ಲಿ ಹೆರಿಗೆ ಕೊಠಡಿ, ಹೆರಿಗೆ ವಾರ್ಡ್‌ಗಳಲ್ಲಿ ಬೆಡ್‌ಗಳ ಮಧ್ಯೆ ವಿಭಜನೆ, ತುರ್ತು ಚಿಕಿತ್ಸಾ ವಿಭಾಗ, ಪ್ರವೇಶ ಧ್ವಾರ, ಕಚೇರಿ, ದಂತ ಚಿಕಿತ್ಸಾ ವಿಭಾಗ ಮುಂತಾ ದವುಗಳ ನವೀಕರಣ ಕೆಲಸಗಳಾಗಿವೆ.

ನಿರ್ಮಾಣ ಹಂತದಲ್ಲಿರುವ 60 ಹಾಸಿಗೆಗಳ ‘ತಾಯಿ ಮತ್ತು ಮಗು ಆಸ್ಪತ್ರೆ’, ಲಕ್ಷ್ಯ ಕಾರ್ಯಕ್ರಮದಡಿಯಲ್ಲಿ ರಾಜ್ಯ ಮಟ್ಟದಲ್ಲಿ ಮನ್ನಣೆ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆ(ಗರ್ಭಿಣಿ ಆರೋಗ್ಯ ಸೇವೆಗಳ ಕುರಿತು), ಸಕಾಲ ಸೇವೆಯಲ್ಲಿ ಜಿಲ್ಲೆಗೆ ಪ್ರಥಮ, ಎಲ್ಲ ಸರ್ಕಾರಿ ಯೋಜನೆಗಳ ಸಮರ್ಪಕ ನಿರ್ವಹಣೆ ಮುಂತಾದವುಗಳಿಂದ ಪ್ರಶಸ್ತಿಗೆ ಆಯ್ಕೆಗೊಂಡಿತ್ತು.

‘ಈ ಪ್ರಶಸ್ತಿ ಆಸ್ಪತ್ರೆ ಸಿಬ್ಬಂದಿ ಹಾಗೂ ವೈದ್ಯರಿಗೆ ಇನ್ನಷ್ಟು ಸೇವೆ ಸಲ್ಲಿಸಲು ಹುರುಪು ನೀಡಿದೆ. ಅಭಿವೃದ್ಧಿ ಕೆಲಸಕ್ಕೆ ಬೆನ್ನೆಲುಬಾಗಿ ನಿಂತ ತಾಲ್ಲೂಕು ವೈದ್ಯಾಧಿಕಾರಿ ಡಾ.ಮಹೇಂದ್ರ ಕಿರೀಟಿ ಹಾಗೂ ಆರೋಗ್ಯ ಇಲಾಖೆ ಅಧಿಕಾರಿ, ಸಿಬ್ಬಂದಿಗೆ ನಾವು ಧನ್ಯವಾದ ತಿಳಿಸುತ್ತಿದ್ದೇನೆ’ ಎಂದು ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಗಾನವಿ ಬಿ.ಎಸ್. ಅವರು ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.