ಚಿಕ್ಕಮಗಳೂರು: ಜಿಲ್ಲೆಯಲ್ಲಿ ವಿವಿಧ ವಸತಿ ಯೋಜನೆಗಳ ಅಡಿ ಕಳೆದ 15 ವರ್ಷಗಳ ಅವಧಿಯಲ್ಲಿ 50 ಸಾವಿರಕ್ಕೂ ಹೆಚ್ಚು ಮನೆಗಳಿಗೆ ಮಂಜೂರಾತಿ ದೊರೆತಿದ್ದರೆ, 4,735 ಮನೆಗಳ ಕಾಮಗಾರಿ ಅಪೂರ್ಣವಾಗಿಯೇ ಉಳಿದಿದೆ. ಮನೆ ಕಟ್ಟಿಕೊಳ್ಳಲು ಆಸಕ್ತಿ ವಹಿಸದ 7,570 ಫಲಾನುಭವಿಗಳು ಕಪ್ಪು ಪಟ್ಟಿಯನ್ನೂ ಸೇರಿದ್ದಾರೆ.

2010–11ನೇ ಸಾಲಿನಿಂದ ಈವರೆಗೆ 50 ಸಾವಿರಕ್ಕೂ ಫಲಾನುಭವಿಗಳನ್ನು ಆಶ್ರಯ ಯೋಜನೆಗಳಿಗೆ ಗ್ರಾಮ ಪಂಚಾಯಿತಿಗಳ ಮೂಲಕ ಆಯ್ಕೆ ಮಾಡಲಾಗಿದೆ. ಈ ಪೈಕಿ 40 ಸಾವಿರಕ್ಕೂ ಹೆಚ್ಚು ಫಲಾನುಭವಿಗಳನ್ನು ಬಸವ ವಸತಿ ಯೋಜನೆಯಡಿ ಆಯ್ಕೆ ಮಾಡಲಾಗಿದೆ. ಅಂಬೇಡ್ಕರ್ ವಸತಿ ಯೋಜನೆಯಡಿ 6,217 ಮತ್ತು ಪಿಎಂಎವೈ ಯೋಜನೆಯಡಿ 2,839 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ.

36,255 ಫಲಾನುಭವಿಗಳು ಮನೆಗಳನ್ನು ನಿರ್ಮಾಣ ಮಾಡಿಕೊಂಡಿದ್ದರೆ, 1,494 ಫಲಾನುಭವಿಗಳು ಕಾಮಗಾರಿಯನ್ನೇ ಆರಂಭಿಸಿಲ್ಲ. 2,729 ಮನೆಗಳು ತಳಪಾಯದ ಹಂತ, 954 ಗೋಡೆಗಳ ಹಂತ, 1,052 ಚಾವಣಿ ಹಂತದಲ್ಲಿವೆ.

ಮನೆ ನಿರ್ಮಾಣದ ಕಚ್ಚಾ ಸಾಮಾಗ್ರಿಗಳ ಬೆಲೆ ಗಗನಮುಖಿಯಾಗಿದ್ದು, ಸರ್ಕಾರ ನೀಡುತ್ತಿರುವ ಅನುದಾನವು ಅಲ್ಪ ಪ್ರಮಾಣದಾಗಿದೆ. ಕೂಲಿ ಕಾರ್ಮಿಕರು, ಬಡವರು ಹೆಚ್ಚುವರಿ ಹಣ ಹೊಂದಿಸಲಾಗದೆ ಮನೆಗಳು ಅಪೂರ್ಣವಾಗಿ ಉಳಿಯುವಂತಾಗಿದೆ.

ಮಲೆನಾಡಿನಲ್ಲಿ ಅರಣ್ಯ ಭೂಮಿ, ಕಂದಾಯ ಭೂಮಿ ಗೊಂದಲ ಸ್ಪಷ್ಟವಾಗಿದೆ ಇರುವುದು ಕೂಡ ಬಡವರ ಮನೆ ನಿರ್ಮಾಣಕ್ಕೆ ಅಡ್ಡಿಯಾಗುತ್ತಿದೆ. ಮನೆಯ ಅಡಿಪಾಯ ನಿರ್ಮಾಣಕ್ಕೆ ಮುಂದಾಗುತ್ತಿದ್ದಂತೆ ಅರಣ್ಯ ಇಲಾಖೆ ಆಕ್ಷೇಪಣೆ ವ್ಯಕ್ತಪಡಿಸುತ್ತಿದೆ. ದಾಖಲೆಗಳು ಇಲ್ಲದ ಕಾರಣ ಫಲಾನುಭವಿಗಳು ಮನೆ ಮಂಜೂರಾಗಿದ್ದರೂ ನಿರ್ಮಾಣ ಸಾಧ್ಯವಾಗದೆ ತೊಂದರೆಗೆ ಸಿಲುಕುತ್ತಿದ್ದಾರೆ.

ವಸತಿ ಯೋಜನೆಯಡಿ ಮನೆ ನಿರ್ಮಾಣಕ್ಕೆ 6 ತಿಂಗಳಿಂದ ಅನುದಾನ ಬಿಡುಗಡೆಯಾಗಿಲ್ಲ. ಇದು ಕೂಡ ಮನೆಗಳ ನಿರ್ಮಾಣಕ್ಕೆ ತೊಡಕಾಗಿದೆ. ಇನ್ನು ಬಸವ ವಸತಿ ಯೋಜನೆಯಡಿ ಮೂರು ವರ್ಷಗಳಿಂದ ಮನೆಗಳ ಮಂಜೂರಾತಿಯನ್ನೇ ನೀಡಿಲ್ಲ.

ಪೂರಕ ಮಾಹಿತಿ: ಕೆ.ನಾಗರಾಜ್, ಕೆ.ವಿ.ನಾಗರಾಜ್, ರವಿ ಕೆಳಂಗಡಿ, ಕೆ.ಎನ್.ರಾಘವೇಂದ್ರ

ಮೂಡಿಗೆರೆ: 439 ಮನೆಗಳು ಅಪೂರ್ಣ

ಮೂಡಿಗೆರೆ: ತಾಲ್ಲೂಕಿನಲ್ಲಿ ಫಲಾನುಭವಿಗಳಿಗೆ ಹಂಚಿಕೆ ಮಾಡಿದ್ದ 439 ಮನೆಗಳು ಅಪೂರ್ಣವಾಗಿಯೇ ಉಳಿದಿವೆ.2010-11ನೇ ಸಾಲಿನಿಂದ 2024-25ನೇ ಸಾಲಿನವರೆಗೂ ತಾಲ್ಲೂಕಿನಲ್ಲಿ 1959 ಮನೆಗಳನ್ನು ವಿವಿಧ ವಸತಿ ಯೋಜನೆಗಳಡಿ ಹಂಚಿಕೆ ಮಾಡಲಾಗಿದೆ. ಅವುಗಳಲ್ಲಿ ಇದುವರೆಗೂ 439 ಮನೆಗಳು ಪೂರ್ಣವಾಗದೇ ಫಲಾನುಭವಿಗಳು ಗುಡಿಸಲು ಟೆಂಟ್ ಅಥವಾ ಬಾಡಿಗೆ ಮನೆಗಳಲ್ಲಿಯೇ ವಾಸಿಸುವಂತಾಗಿದೆ.

ತಾಲ್ಲೂಕಿನಲ್ಲಿ ಮರಳು ಪೂರೈಕೆ ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ಇದರಿಂದ ಎಂ. ಸ್ಯಾಂಡ್ ಬಳಸಿ ಮನೆ ನಿರ್ಮಾಣ ಮಾಡಬೇಕಿದೆ. ಎಂ.ಸ್ಯಾಂಡ್ ಚಿಲ್ಲರೆಯಾಗಿ ಖರೀದಿಸಲು ದುಬಾರಿ ಬೆಲೆ ನೀಡಬೇಕಿದೆ. ಇದರಿಂದ ಖರ್ಚು ಹೆಚ್ಚಾಗುತ್ತಿದ್ದು ಮನೆಗಳು ಅಪೂರ್ಣವಾಗಲು ಕಾರಣವಾಗಿದೆ. ಮನೆ ನಿರ್ಮಾಣ ಬಾಕಿಯಾಗಲು ಅನುದಾನದ ಕೊರತೆ ಪ್ರಮುಖ ಕಾರಣವಾಗಿದೆ. ಆರು ತಿಂಗಳಿನಿಂದ ವಿವಿಧ ವಸತಿ ಯೋಜನೆಗಳಿಗೆ ಅನುದಾನವೇ ಬಿಡುಗಡೆಯಾಗಿಲ್ಲ. ಸಾಲ ಮಾಡಿ ಮನೆ ನಿರ್ಮಾಣ ಮಾಡಿಕೊಂಡಿರುವ ಫಲಾನುಭವಿಗಳು ಅನುದಾನಕ್ಕಾಗಿ ಕಾಯುವಂತಾಗಿದೆ. ಮನೆ ನಿರ್ಮಾಣದ ಕಾಮಗಾರಿ ಮುಂದುವರೆಯಲು ಅಡ್ಡಿಯಾಗುತ್ತಿದೆ.

‘ಸರ್ಕಾರವು ವಸತಿ ಯೋಜನೆಯನ್ನು ಸಂಪೂರ್ಣವಾಗಿ ಕಡೆಗಣಿಸಿದೆ. ಸರ್ಕಾರಕ್ಕೆ ಬಡವರ ಮೇಲೆ ವಸತಿ ರಹಿತರ ಮೇಲೆ ಕಾಳಜಿ ಇಲ್ಲದಿರುವುದೇ ಇದಕ್ಕೆ ಕಾರಣವಾಗಿದೆ. ಐದು ವರ್ಷಗಳಿಂದ ಸಮರ್ಪಕವಾಗಿ ಮನೆಗಳನ್ನೇ ಮಂಜೂರು ಮಾಡಿಲ್ಲ. ಹಳೆ ಮನೆಗಳಿಗೂ ಅನುದಾನ ನೀಡುತ್ತಿಲ್ಲ. ವಸತಿ ಯೋಜನೆಗೆ ಕೂಡಲೇ ಅನುದಾನ ಬಿಡುಗಡೆಗೊಳಿಸಬೇಕು. ಹೊಸ ಮನೆಗಳನ್ನು ಕೂಡಲೇ ಮಂಜೂರು ಮಾಡಬೇಕು. ರಾಜ್ಯದಲ್ಲಿ ನಿವೇಶನ ರಹಿತರು ಇರದಂತೆ ಎಲ್ಲಾ ನಿವೇಶನ ರಹಿತರಿಗೂ ನಿವೇಶನ ಹಂಚಿಕೆ ಮಾಡಿ ಸೂರು ಕಲ್ಪಿಸಿ ಕೊಡಬೇಕು’ ಎನ್ನುತ್ತಾರೆ ವಸತಿಗಾಗಿ ಹೋರಾಟ ವೇದಿಕೆಯ ಗೌರವಧ್ಯಕ್ಷ ಬಿ. ರುದ್ರಯ್ಯ.

ಮನೆ ನಿರ್ಮಾಣ ಮಂದಗತಿ

ತರೀಕೆರೆ: ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ಸರ್ಕಾರದ ವತಿಯಿಂದ ಬಸವ ಅಂಬೇಡ್ಕರ್ ಆಶ್ರಯ ಇನ್ನಿತರೆ ವಸತಿ ಯೋಜನೆಗಳಲ್ಲಿ ಬಡವರಿಗೆ ಮನೆಗಳು ಮಂಜೂರಾಗುತ್ತಿವೆ. ಆದರೆ ಇತ್ತೀಚಿನ ದಿನಗಳಲ್ಲಿ ಈ ಪ್ರಕ್ರಿಯೆ ಮಂದಗತಿಯಲ್ಲಿ ಸಾಗುತ್ತಿದೆ ಎಂಬ ಆರೋಪವಿದೆ.

ಇದಕ್ಕೆ ತಾಲ್ಲೂಕಿನಲ್ಲಿ ಹಲವು ಕಾರಣಗಳಿವೆ. ಮೊದಲನೆಯಾಗಿ ಮನೆ ನಿರ್ಮಾಣಕ್ಕಾಗಿ ಸರ್ಕಾರ ಸುಮಾರು ಹತ್ತು ವರ್ಷಗಳ ಹಿಂದೆ ಕಲ್ಲು ಇಟ್ಟಿಗೆ ಸಿಮೆಂಟ್ ಮರಳು ಕಬ್ಬಿಣ ಸೇರಿ ಸಾಮಗ್ರಿಗಳ ಮಾರುಕಟ್ಟೆ ದರಗಳನ್ನು ಪರಿಗಣಿಸಿ ಸಹಾಯಧನವನ್ನು ಸಾಮಾನ್ಯ ವರ್ಗಕ್ಕೆ ₹1.20 ಲಕ್ಷ ಹಾಗೂ ಪರಿಶಿಷ್ಟ ಜಾತಿಯವರಿಗೆ ₹1.70 ನಿಗದಿ ಮಾಡಿತ್ತು. ಆದರೀಗ ಎಲ್ಲಾ ಸಾಮಗ್ರಿಗಳ ಬೆಲೆ ಮೂರು ಪಟ್ಟು ಏರಿಕೆಯಾಗಿವೆ. ಇಂದು ಒಂದು ಪುಟ್ಟ ಸಂಸಾರಕ್ಕೆ ಹೆಂಚು ಅಥವಾ ತಗಡಿನ ಶೀಟ್ ಮನೆ ನಿರ್ಮಾಣಕ್ಕೆ ಕನಿಷ್ಠ ₹10 ಲಕ್ಷ ಬೇಕಾಗಬಹುದು. ಆರ್ಥಿಕವಾಗಿ ಹಿಂದುಳಿದ ಬಡವರು ಮನೆ ನಿರ್ಮಿಸಿಕೊಳ್ಳುವಲ್ಲಿ ಆಸಕ್ತಿ ತೋರುತ್ತಿಲ್ಲ. ಈ ಹಿಂದೆ ಮನೆ ಮಂಜೂರು ಮಾಡಿಸಿಕೊಂಡಿರುವ ಹೆಚ್ಚಿನವರು ತಳಪಾಯ ಗೋಡೆ ಛಾವಣಿ ಹಂತದಲ್ಲಿಯೇ ನಿಂತಿವೆ.

ಮನೆ ನಿರ್ಮಿಸಿಕೊಂಡವರಿಗೆ ಸರಿಯಾದ ಸಮಯಕ್ಕೆ ಅನುದಾನ ಬಿಡುಗಡೆಯಾಗುತ್ತಿಲ್ಲ. ಈಗ ಮನೆಗಳು ಸಹ ಸರ್ಕಾರದಿಂದ ಮಂಜೂರಾಗುತ್ತಿಲ್ಲ. ಇದರಿಂದ ವಸತಿ ರಹಿತರು ಸೂರು ಕಟ್ಟಿಕೊಳ್ಳುವ ಕನಸು ಕನಸಾಗಿಯೇ ಉಳಿಯುತ್ತಿದೆ. ಮನೆ ನಿರ್ಮಾಣದ ಕಚ್ಚಾ ಸಾಮಗ್ರಿಗಳ ಇಂದಿನ ಮಾರುಕಟ್ಟೆ ಬೆಲೆ ಪರಿಗಣಿಸಿ ಸಹಾಯಧನವನ್ನು ಕನಿಷ್ಠ ₹5 ಲಕ್ಷ ಹೆಚ್ಚಿಸಿದರೆ ವಸತಿ ರಹಿತ ಬಡವರು ಸೂರು ಕಟ್ಟಿಕೊಳ್ಳಲು ಅನುಕೂಲ ಆಗಲಿದೆ ಎಂಬುದು ವಸತಿ ರಹಿತರ ಅಳಲು.

ಮೂರು ವರ್ಷಗಳಿಂದ ಮಂಜೂರಾಗದ ಮನೆ

ನರಸಿಂಹರಾಜಪುರ: ತಾಲ್ಲೂಕಿನ ವ್ಯಾಪ್ತಿಯಲ್ಲಿ 14 ಗ್ರಾಮ ಪಂಚಾಯಿತಿಗಳಿದ್ದು ಕಳೆದ ಮೂರು ವರ್ಷಗಳಿಂದ ಆಶ್ರಯ ಮನೆಗಳು ಮಂಜೂರಾಗಿಲ್ಲ. ಪ್ರಸ್ತುತ ಪ್ರಧಾನಮಂತ್ರಿ ಅವಾಸ್ ಯೋಜನೆಯಡಿ ಮನೆಗಳು ಮಂಜೂರಾಗುತ್ತಿವೆ.

ಲಭ್ಯವಿರುವ ಅಂಕಿ– ಅಂಶಗಳ ಪ್ರಕಾರ ತಾಲ್ಲೂಕಿನ 14 ಗ್ರಾಮ ಪಂಚಾಯಿತಿಗಳಲ್ಲಿ 1231 ವಸತಿ ರಹಿತ ಕುಟುಂಬಗಳು ಹಾಗೂ 2201 ನಿವೇಶನ ರಹಿತ ಕುಟುಂಬಗಳಿವೆ. ಆಶ್ರಯ ಯೋಜನೆಯಡಿ ಮಂಜೂರಾದ ಮನೆಗಳು 2020–2021ರಿಂದಲೂ ನಿರ್ಮಾಣ ಹಂತದಲ್ಲಿದೆ. ಮನೆ ಮಂಜೂರಾಗಿ ನಿರ್ಮಾಣ ಮಾಡದೆ ಇರುವ ಬಹುತೇಕ ಫಲಾನುಭವಿ ರಾಜೀವ್ ಗಾಂಧಿ ವಸತಿ ನಿಗಮದಿಂದ ಬ್ಲಾಕ್ ಮಾಡಲಾಗಿದೆ. ನಿವೇಶನ ರಹಿತರಿಗೆ ಹಾಗೂ ವಸತಿ ರಹಿತರಿಗೆ ಮನೆ ನಿರ್ಮಿಸಿಕೊಡಲು ನಿವೇಶನದ ಕೊರತೆಯಿದೆ. ಬಹುತೇಕ ಗ್ರಾಮಗಳಲ್ಲಿ ನಿವೇಶನ ಲಭ್ಯವಿದ್ದರೂ ಅರಣ್ಯ ಇಲಾಖೆ ತಮಗೆ ಸೇರಿದ ಜಾಗ ಎಂದು ತಕಾರಾರು ಮಾಡುವುದರಿಂದ ನಿವೇಶನ ನೀಡಲು ಅಡ್ಡಿ ಉಂಟು ಮಾಡಿದೆ.

ತಾಲ್ಲೂಕಿನ ಸೀತೂರು ಗ್ರಾಮ ಪಂಚಾಯಿತಿಯಲ್ಲಿ 100 ನಿವೇಶನಗಳು ಆಡುವಳ್ಳಿ ಗ್ರಾಮ ಪಂಚಾಯಿತಿ 125 ನಿವೇಶನ ಕಡಹಿನಬೈಲು ಗ್ರಾಮ ಪಂಚಾಯಿತಿ 18 ನಿವೇಶನ ಬಂಡಿಮಠದಲ್ಲಿ 15 ನಿವೇಶನ ಗುಬ್ಬಿಗಾ ಗ್ರಾಮ ಪಂಚಾಯಿತಿಯಲ್ಲಿ 21 ನಿವೇಶನಗಳು ಮಂಜೂರಾಗಿದೆ. ಪ್ರಧಾನ ಮಂತ್ರಿ ಅವಾಸ್ ಯೋಜನೆಯಡಿ ಪ್ರಸ್ತುತ ವಸತಿ ರಹಿತರು ಮತ್ತು ನಿವೇಶನ ರಹಿತರ ಸಮೀಕ್ಷೆ ನಡೆಸಲಾಗುತ್ತಿದೆ. ಇದರ ಪಟ್ಟಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ. ನಿವೇಶನ ಲಭ್ಯವಾದ ಮೇಲೆ ಫಲಾನುಭವಿಗಳನ್ನು ಆಯ್ಕೆ ಮಾಡಿ ಮನೆ ನಿರ್ಮಾಣಕ್ಕೆ ಅನುದಾನ ನೀಡಲಾಗುತ್ತದೆ. ನಿವೇಶನ ಇದ್ದವರಿಗೆ ಪ್ರಧಾನ ಮಂತ್ರಿ ಅವಾಸ್ ಯೋಜನೆಯಡಿ ಅನುದಾನ ನೀಡಲಾಗುವುದು ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಚ್.ಡಿ.ನವೀನ್ ಕುಮಾರ್ ತಿಳಿಸಿದರು.

ಸಕಾಲಕ್ಕೆ ಪಾವತಿಯಾಗದ ಹಣ

ಕಳಸ: ಇಲ್ಲಿನ ಗ್ರಾಮ ಪಂಚಾಯಿತಿಯಲ್ಲಿ 180 ವಸತಿ ರಹಿತರು ಇದ್ದರೂ ಕಳೆದ 2 ವರ್ಷದಿಂದ ಯಾರಿಗೂ ಮನೆ ಅನುದಾನ ಮಂಜೂರಾಗಿಲ್ಲ. ಇದಕ್ಕೂ ಮುನ್ನ ಮನೆ ಮಂಜೂರು ಆದವರಿಗೂ ರಾಜೀವ್ ಗಾಂಧಿ ವಸತಿ ನಿಗಮ ಮತ್ತು ಅಂಬೇಡ್ಕರ್ ವಸತಿ ನಿಗಮದ ಮೂಲಕ ಸಕಾಲಕ್ಕೆ ಹಣ ಪಾವತಿ ಆಗುತ್ತಿಲ್ಲ ಪರಿಶಿಷ್ಟ ಜಾತಿ ಮತ್ತು ವರ್ಗದವರಿಗೆ ಮನೆ ನಿರ್ಮಾಣಕ್ಕೆ ₹1.82 ಮತ್ತು ಇತರರಿಗೆ ₹1.20 ಲಕ್ಷ ಮಾತ್ರ.

ಈ ಅಲ್ಪ ಪ್ರಮಾಣದ ಅನುದಾನವನ್ನು ಅಡಿಪಾಯ ಗೋಡೆ ಚಾವಣಿ ನಿರ್ಮಾಣ ಹಾಗೂ ಮನೆ ಪೂರ್ಣಗೊಂಡ ನಂತರ ಒಟ್ಟು 4 ಭಾಗಗಳಲ್ಲಿ ಬಿಡುಗಡೆ ಮಾಡಲಾಗುತ್ತದೆ. ಆದರೆ ಮೊದಲ ಕಂತು ಬಿಡುಗಡೆಗೆ 6ರಿಂದ 8 ತಿಂಗಳು ಕಳೆದರೂ ಎರಡನೇ ಕಂತು ಬಿಡುಗಡೆ ಆಗುತ್ತಿಲ್ಲ ಎಂದು ಮನೆ ನಿರ್ಮಾಣ ಮಾಡುತ್ತಿರುವ ಫಲಾನುಭವಿಗಳು ಹೇಳುತ್ತಾರೆ.

ಎಲ್ಲ ಜಾತಿಯ ಮನೆ ಫಲಾನುಭವಿಗಳಿಗೆ ಗ್ರಾಮೀಣ ಉದ್ಯೋಗ ಖಾತರಿ ಯೋಜೆನಯ ಮೂಲಕ ದಿನವೊಂದಕ್ಕೆ ₹370ರಂತೆ 90 ಮಾನವ ದಿನಗಳಿಗೆ ಸುಮಾರು ₹33 ಸಾವಿರ ರೂಪಾಯಿ ಕೂಡ ಪಾವತಿ ಮಾಡಲಾಗುತ್ತದೆ. 2 ವರ್ಷಗಳಿಂದ ಅನುದಾನ ಬಿಡುಗಡೆಯಾಗದೆ ಇರುವುದರಿಂದ ಕೆಲ ವಸತಿ ರಹಿತರು ಅಲ್ಲಿಲ್ಲಿ ಸಾಲ ಮಾಡಿ ಹಣ ಹೊಂದಿಸಿಕೊಂಡು ಮನೆ ನಿರ್ಮಾಣ ಆರಂಭಿಸಿದ್ದಾರೆ.

ನಿವೇಶನ ರಹಿತರ ನಿರಂತರ ಸಮಸ್ಯೆ

ಶೃಂಗೇರಿ: ಬಡವರ ಸ್ವಂತ ಮನೆಯ ಕನಸು ಕನಸಾಗಿಯೇ ಉಳಿದಿದ್ದು ನಿವೇಶನಕ್ಕಾಗಿ ಹೋರಾಟ ನಿರಂತರವಾಗಿ ನಡೆದಿದೆ. ನಿವೇಶನ ರಹಿತರ ಸಮಸ್ಯೆ ಮಾತ್ರ ಬೆಳೆದು ನಿಂತಿದೆ. ತಾಲ್ಲೂಕಿನಾದ್ಯಾಂತ ನಿವೇಶನ ಸರ್ಕಾರದಿಂದ ನೀಡದೆ ದಶಕಗಳೇ ಕಳೆದಿದ್ದು ಇದರಿಂದ ನಿವೇಶನ ರಹಿತರು ಸರ್ಕಾರಿ ಜಾಗದಲ್ಲಿ ನಿವೇಶನ ನಿರ್ಮಿಸುತ್ತಲೇ ಇದ್ದಾರೆ. ತಾಲ್ಲೂಕಿನ ಕಸಬಾ ಕಿಗ್ಗಾ ಹಾಗೂ ಪಟ್ಟಣ ಪಂಚಾಯಿತಿ ಪ್ರದೇಶಗಳಲ್ಲಿ ಕಳೆದ 2 ದಶಕಗಳಿಂದ ಬಡವರಿಗೆ ನಿವೇಶನ ನೀಡದಿರುವುದರಿಂದ ಸಾಕಷ್ಟು ಸಮಸ್ಯೆಗಳು ತಲೆ ಎತ್ತಿದೆ.

ಸ್ವಂತ ಸೂರಿನ ಆಸೆ ಹೊಂದಿರುವವರಿಗೆ ಮನೆಯ ಕನಸು ನನಸಾಗದೆ ಪರಿತಪಿಸುವಂತಾಗಿದೆ. ತಾಲ್ಲೂಕಿನ 9 ಗ್ರಾಮ ಪಂಚಾಯಿತಿಗಳಲ್ಲಿ 7 ಸಾವಿರಕ್ಕೂ ಹೆಚ್ಚು ನಿವೇಶನಗಳ ಬೇಡಿಕೆ ಇದ್ದು ಪಟ್ಟಣ ಪಂಚಾಯಿತಿಯಲ್ಲಿ 2 ಸಾವಿರಕ್ಕೂ ಹೆಚ್ಚು ಅರ್ಜಿಗಳು ವಿಲೇವಾರಿಯಾಗದೆ ಹಾಗೇಯೇ ಉಳಿದಿದೆ. ಈಗಾಗಲೇ ತಾಲ್ಲೂಕು ಕಚೇರಿಯಲ್ಲಿ 7 ಸಾವಿರಕ್ಕೂ ಹೆಚ್ಚು ಅರ್ಜಿಗಳು ವಿಲೇವಾರಿಯಾಗದೆ ಬಾಕಿ ಇದೆ. ನಿವೇಶನ ರಹಿತರಿಗೆ ನಿವೇಶನವಿಲ್ಲದೆ ಸ್ವಂತ ಮನೆಯ ಕನಸು ಮಾತ್ರ ಇನ್ನೂ ನನಸಾಗಿಲ್ಲ.

ಗ್ರಾಮ ಪಂಚಾಯಿತಿಗಳಿಗೆ ಅರ್ಹ ಫಲಾನುಭವಿಗಳನ್ನು ಗುರುತಿಸಿ ಸರ್ಕಾರದ ವಿವಿಧ ಯೋಜನೆಯಡಿ ಬಡವರಿಗೆ ಮನೆ ನಿರ್ಮಿಸಲು ಅನುದಾನ ಹಂಚಿಕೆಗೂ ಇದು ಅಡ್ಡಿಯಾಗಿದೆ. ಕಸ್ತೂರಿರಂಗನ್ ವರದಿ ಹಿಂದಿನ ಜಿಲ್ಲಾಧಿಕಾರಿಗಳು ತಾಲ್ಲೂಕಿನ ಬಹುತೇಕ ಜಾಗವನ್ನು ಅರಣ್ಯ ಭೂಮಿಗೆ ವರ್ಗಾಯಿಸಿರುವುದರಿಂದ ನಿವೇಶನ ನೀಡಲು ಅಡ್ಡಿಯಾಗಿದೆ ರೈತ ಸಂಘದ ಅಧ್ಯಕ್ಷ ಕಾನೋಳ್ಳಿ ಚಂದ್ರಶೇಖರ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.