ಚಿಕ್ಕಮಗಳೂರು: ಮೇ ತಿಂಗಳ ಆರಂಭದಲ್ಲಿ ಹಾಸನ ಜಿಲ್ಲೆಯ ಕಡೆಯಿಂದ ಬಂದು ಆತಂಕ ಹುಟ್ಟಿಸಿದ್ದ 55 ಕಾಡಾನೆಗಳ ಮೂರು ಗುಂಪು ಈಗ ಮತ್ತೆ ಗಡಿ ದಾಟಿದ್ದು, ಜಿಲ್ಲೆಯ ರೈತರು ಮತ್ತು ಅರಣ್ಯ ಸಿಬ್ಬಂದಿಯಲ್ಲಿ ಕೊಂಚ ನೆಮ್ಮದಿಗೆ ಕಾರಣವಾಗಿದೆ.

ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಅರೇಹಳ್ಳಿ ಸುತ್ತಮುತ್ತ ಇದ್ದ ಆನೆಗಳು ಮೂಡಿಗೆರೆ ತಾಲ್ಲೂಕಿನ ವ್ಯಾಪ್ತಿಗೆ ಬಂದಿದ್ದವು. ಭುವನೇಶ್ವರಿ ಮತ್ತು ಬೀಟಮ್ಮ ಗುಂಪುಗಳಲ್ಲದೇ ಈ ಎರಡು ಗುಂಪಿನಿಂದ ಬೇರ್ಪಟ್ಟಿರುವ ಆನೆಗಳು ಮತ್ತೊಂದು ತಂಡ ಮಾಡಿಕೊಂಡು ತಿರುಗಾಡುತ್ತಿವೆ.

ಬೇಲೂರು–ಮೂಡಿಗೆರೆ ರಸ್ತೆ, ಮೂಡಿಗೆರೆ–ಕನ್ನಾಪುರ ರಸ್ತೆ, ಮೂಡಿಗೆರೆ–ಆಲ್ದೂರು ರಸ್ತೆ ದಾಟಿ ಮುಂದೆ ಸಾಗಿದ್ದವು. ಸಾರಗೋಡು ಮೀಸಲು ಅರಣ್ಯ 15 ಸಾವಿರ ಎಕರೆಯಷ್ಟಿದ್ದು, ಈಗಿರುವ 25 ಆನೆಗಳ ಜತೆಗೆ ಈ ಆನೆಗಳು ಸೇರಿಕೊಂಡರೆ ಸಮಸ್ಯೆ ಆಗುವುದಿಲ್ಲ ಎಂದು ಅರಣ್ಯ ಇಲಾಖೆ ಅಂದಾಜಿಸಿತ್ತು. ಆದರೆ, ಒಂದೇ ದಿನದಲ್ಲಿ ಈ ಆನೆಗಳು ಹಿಂದಕ್ಕೆ ಮುಖ ಮಾಡಿದ್ದು, ಎರಡೇ ದಿನದಲ್ಲಿ ಜಿಲ್ಲೆಯ ಗಡಿ ದಾಟಿಕೊಂಡಿವೆ. ಮಂಗಳವಾರ ಬೇಲೂರು ತಾಲ್ಲೂಕಿನ ಚೀಕನಹಳ್ಳಿ ಕಡೆ ಕಾಣಿಸಿಕೊಂಡಿವೆ.

ಮತ್ತೊಂದೆಡೆ ಬೀಟಮ್ಮ ಗುಂಪು ಅರೇನೂರು ತನಕ ಹೋಗಿದ್ದು, ಬಾಳೆಹೊನ್ನುರು–ಆಲ್ದೂರು ರಸ್ತೆ ದಾಟಿಕೊಂಡು ಸಾಗಿದರೆ ಭದ್ರಾ ಅಭಯಾರಣ್ಯ ತಲುಪಲಿವೆ ಎಂದು ಅಂದಾಜಿಸಲಾಗಿತ್ತು. ಆದರೆ, ಅರೇನೂರು ಬಳಿಯಿಂದ ಅವು ಕೂಡ ಹಿಂದಕ್ಕೆ ಮುಖ ಮಾಡಿದ್ದು, ಎರಡೇ ದಿನದಲ್ಲಿ ಬೇಲೂರು ತಾಲ್ಲೂಕಿನ ಅರೇಹಳ್ಳಿ ತಲುಪಿವೆ.

ಭೀಮ ಆನೆಯು ಎರಡು ಗುಂಪುನಿಂದ ಬೇರ್ಪಟ್ಟು ಮತ್ತೊಂದು ಗುಂಪನ್ನು ಮುನ್ನಡೆಸುತ್ತಿದೆ. ಆಗಾಗ ಗುಂಪು ಬದಲಿಸಿ ಅವುಗಳನ್ನು ಮುನ್ನಡೆಸುತ್ತಿದೆ. ಎಲ್ಲವೂ ವಾಪಸ್ ಮುಖ ಮಾಡಿರುವುದರಿಂದ ಸದ್ಯದ ಮಟ್ಟಿಗೆ ಕೊಂಚ ನೆಮ್ಮದಿ ತಂದಿದೆ. ಒಂದು ಗುಂಪು ಸಾರಗೋಡು ಅರಣ್ಯ, ಮತ್ತೊಂದು ಗುಂಪು ಭದ್ರಾ ಅಭಯಾರಣ್ಯ ಸೇರಿಕೊಂಡಿದ್ದರೆ ಶಾಶ್ವತ ಪರಿಹಾರ ದೊರಕುತ್ತಿತ್ತು. ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಆನೆ ಸಮಸ್ಯೆಗೂ ಪರಿಹಾರ ದೊರಕಿದಂತೆ ಆಗುತ್ತಿತ್ತು. ಆದರೆ, ಅವು ಹಿಮ್ಮುಖವಾಗಿವೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

ಜಿಲ್ಲೆಯ ವ್ಯಾಪ್ತಿಗೆ ಬಂದ 10 ದಿನದಲ್ಲೇ 55 ಆನೆಗಳು ವಾಪಸ್ ಹೋಗಿವೆ. ಇದರ ಹೊರತಾಗಿ ಸಾರಗೋಡು ಅರಣ್ಯದಲ್ಲಿ 25, ಮಧುಗುಂಡಿ, ಮಸ್ಕಲಿ, ಕಾಮೇನಹಳ್ಳಿ ಅರಣ್ಯದಲ್ಲಿ ತಲಾ 5 ಆನೆಗಳು ಸೇರಿ ಅಂದಾಜು 40 ಆನೆಗಳಿವೆ. ಈ ಆನೆಗಳು ಬೇರಡೆ ಹೋಗುವುದಿಲ್ಲ, ಸ್ಥಳೀಯರಿಗೆ ತೊಂದರೆಯನ್ನೂ ನೀಡುವುದಿಲ್ಲ. ಆದ್ದರಿಂದ ಇವುಗಳಿಂದ ತೊಂದರೆ ಇಲ್ಲ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.