ಬಾಳೆಹೊನ್ನೂರು: ಚಿಕ್ಕಮಗಳೂರು, ಕೊಡಗು ಹಾಗೂ ಹಾಸನ ಜಿಲ್ಲೆಗಳಲ್ಲಿ ಉತ್ಕೃಷ್ಟ ದರ್ಜೆಯ ಕಾಫಿ ಬೆಳೆಯಲಾಗುತ್ತಿದ್ದು, ಕಾಫಿಯಲ್ಲಿರುವ ಕೆಫಿನ್ ಅಂಶ ಮಿದುಳಿನ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ ಎಂದು ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು.

ಪಟ್ಟಣದ ಸಹ್ಯಾದ್ರಿ ಕಾಫಿ ಬೆಳೆಗಾರರ ಸಂಘ, ಖಾಂಡ್ಯ ಕಾಫಿ ಬೆಳೆಗಾರರ ಸಂಘ ಹಾಗೂ ಕಳಸ-ಬಾಳೂರು ಕಾಫಿ ಬೆಳೆಗಾರರ ಸಂಘದ ಸಹಯೋಗದಲ್ಲಿ ಭದ್ರಾ ಕಾಫಿ ಶಾಪ್ನಿಂದ ಜೆಸಿ ವೃತ್ತದವರಗೆ ಆಯೋಜಿಸಿದ್ದ ‘ವಾಕ್ ವಿತ್ ಕಾಫಿ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮಲೆನಾಡಿನ ಜೀವಂತಿಕೆ ಕಾಫಿ ಬೆಳೆಯ ಮೇಲೆ ನಿಂತಿದ್ದು, ಧರ ಕುಸಿದ ಸಂದರ್ಭದಲ್ಲಿ ಹುಟ್ಟಿಕೊಂಡ ಕಾಫಿ ಡೇ, ಕೋಥಾಸ್ನಂಥ ಉದ್ಯಮಗಳು ಮರು ಜೀವ ನೀಡಿವೆ. ಲಕ್ಷಾಂತರ ಕಾರ್ಮಿಕರಿಗೆ ಕಾಫಿ ಉದ್ಯಮ ಉದ್ಯೋಗ ನೀಡಿದ್ದು, ಬೆಳೆದ ಬಹುಪಾಲು ಕಾಫಿ ರಪ್ತಾಗುತ್ತಿದೆ ಎಂದರು.

ಕಾಫಿ ಮಂಡಳಿ ಸದಸ್ಯ ಮಹಾಬಲ ಮಾತನಾಡಿ, 2030ಕ್ಕೆ ದೇಶದಲ್ಲಿ 7 ಲಕ್ಷ ಟನ್ ಕಾಫಿ ಉತ್ಪಾಧನೆಯ ಗುರಿಯನ್ನು ಕಾಫಿ ಮಂಡಳಿ ಹೊಂದಿದೆ. ಸೀಗೋಡಿನಲ್ಲಿರುವ ಕಾಫಿ ಸಂಶೋಧನಾ ಕೇಂದ್ರ ಆರಂಭಗೊಂಡು 100 ವರ್ಷ ಪೂರೈಸಿದ್ದು, ನ. 6ರಿಂದ 8ರವರೆಗೆ ಶತಮಾನೋತ್ಸವ ಸಮಾರಂಭ ಆಚರಿಸಲು ಉದ್ದೇಶಿಸಲಾಗಿದೆ ಎಂದರು.

ಏಷ್ಯಾದಲ್ಲೇ ಈ ಸಂಶೋಧನಾ ಸಂಸ್ಥೆ ಅತ್ಯುತ್ತಮ ಸಂಸ್ಥೆ ಎಂಬ ಹೆಗ್ಗಳಿಕೆ ಗಳಿಸಿದೆ. ಕಾಫಿ ಉತ್ಪಾದನೆ ಹೆಚ್ಚಿಸಬೇಕು. ಕಾಫಿ ಕುಡಿಯುವ ಸಂಸ್ಕೃತಿಯನ್ನು ಎಲ್ಲೆಡೆ ಪಸರಿಸಬೇಕು ಎಂಬುದೇ ವಾಕ್ ವಿತ್ ಕಾಫಿ ಕಾರ್ಯಕ್ರಮದ ಉದ್ದೇಶ ಎಂದರು.

ಕ್ರೀಡಾಪಟು ಒ.ಡಿ.ಸ್ಟೀಫನ್ ಮಾತನಾಡಿದರು.

ಕಾರ್ಮಿಕರಾಗಿ ಸೇವೆ ಸಲ್ಲಿಸಿದ ಸಂಜೀವ ಹಾಗೂ ನಿಂಗಯ್ಯ ಅವರನ್ನು ಗೌರವಿಸಲಾಯಿತು.

ಜೆಸಿ ವೃತ್ತದ ಬಳಿ ಉಚಿತವಾಗಿ ಕಾಫಿ ವಿತರಿಸಲಾಯಿತು.

ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ವಿ.ಮಂಜುನಾಥ್, ಸಹ್ಯಾದ್ರಿ ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಕೆ.ಎಸ್.ಜಯರಾಜ್, ಕಾರ್ಯದರ್ಶಿ ಜೆ.ನಾಗಭೂಷಣ ರಾವ್, ಖಾಂಡ್ಯ ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಎಸ್.ವಿ.ಶಂಕರ್, ಕಾರ್ಯದರ್ಶಿ ಬಿ.ಎಸ್.ರತ್ನಾಕರ್, ಕೆಜಿಎಫ್ ಖಜಾಂಚಿ ಎಂ.ಕೆ.ಸುಂದರೇಶ್, ಹಿರಿಯ ಕಾಫಿ ಬೆಳೆಗಾರ ಎಚ್.ಬಿ.ರಾಜಗೋಪಾಲ್, ರವಿಚಂದ್ರ, ಕಾಫಿ ಮಂಡಳಿ ಸದಸ್ಯರಾದ ವೆನಿಲ್ಲಾ ಭಾಸ್ಕರ್, ಎ.ಜಿ.ದಿವಿನ್ ರಾಜ್, ಡಾ.ಕೃಷ್ಣಾನಂದ, ತಿಮ್ಮಯ್ಯ, ಕೆ.ಕೆ.ವೆಂಕಟೇಶ್, ಸಿ.ಬಾಬು, ಅಕ್ಷತಾ ಭಾಗವಹಿಸಿದ್ದರು.

‘ರೈತರು ಮಾಡಿದ ಅಕ್ರಮ ಒತ್ತುವರಿ ತೆರವು ಮಾಡಲು ಶಾಸಕರು ಸಭೆಯಲ್ಲಿ ಸೂಚಿಸಿದ್ದಾರೆ’ ಎಂದು ಕೆಲವರು ವಾಟ್ಸ್ಆ್ಯಪ್ನಲ್ಲಿ ಸಂದೇಶ ಹರಿಬಿಟ್ಟಿದ್ದಾರೆ. ಅದರೆ, ಅದು ಸತ್ಯಕ್ಕೆ ದೂರವಾದದ್ದು. ರಸ್ತೆ ವಿಸ್ತರಣೆಗೆ ಅಡ್ಡಿಯಾಗುವ ಒತ್ತುವರಿ ಕಟ್ಟಡಗಳನ್ನು ಮುಲಾಜಿಲ್ಲದೆ ತೆರವುಗೊಳಿಸುವಂತೆ ಹೇಳಿದ್ದೆ. ಅದನ್ನು ತಿರುಚಿ ಕೆಲವರು ಸುಳ್ಳು ಹರಡಿದ್ದು, ಇದನ್ನು ನಿದನ್ನು ನಿರ್ಲಕ್ಷಿಸುತ್ತೇನೆ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.