ಸೋಮವಾರ, ಆಗಸ್ಟ್ 2, 2021
20 °C
ಕೋವಿಡ್‌: ಸಕ್ರಿಯ ಪ್ರಕರಣಗಳು 60

ಚಿಕ್ಕಮಗಳೂರು | ವೃದ್ಧೆ ಸಾವು; 13 ಮಂದಿಗೆ ಸೋಂಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಮಗಳೂರು: ಕೋವಿಡ್‌ನಿಂದಾಗಿ ಬುಧವಾರ 74 ವರ್ಷದ ವೃದ್ಧೆಯೊಬ್ಬರು ಮೃತಪಟ್ಟಿದ್ದಾರೆ. ನ್ಯಾಯಾಂಗ ಬಂಧನದಲ್ಲಿರುವ ವ್ಯಕ್ತಿ ಸಹಿತ 13 ಮಂದಿಗೆ ಸೋಂಕು ಪತ್ತೆಯಾಗಿದೆ. ಗುಣಮುಖರಾದ ಎಂಟು ಮಂದಿಯನ್ನು ಕೋವಿಡ್‌ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.

ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಅರೆಹಳ್ಳಿಯ ವೃದ್ಧೆ ಮೃತಪಟ್ಟವರು. ಅವರಿಗೆ ಉಬ್ಬಸದ ತೊಂದರೆಯೂ ಇತ್ತು ಎಂದು ವೈದ್ಯರು ತಿಳಿಸಿದ್ದಾರೆ.

ಗಾಂಜಾ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಮೂಡಿಗೆರೆ ತಾಲ್ಲೂಕಿನ ಬಿದರಹಳ್ಳಿಯ 30 ವರ್ಷದ ಪುರುಷ, ಶೃಂಗೇರಿ ತಾಲ್ಲೂಕಿನ 46 ವರ್ಷದ ಪುರುಷ (ಶಿವಮೊಗ್ಗದಿಂದ ಬಂದಿದ್ದರು), ಚಿಕ್ಕಮಗಳೂರು ತಾಲ್ಲೂಕಿನ ಎಂಟು ವರ್ಷದ ಬಾಲಕಿ, ಐದು ವರ್ಷದ ಬಾಲಕಿ, 31 ವರ್ಷದ ಮಹಿಳೆ, 56 ವರ್ಷದ ಮಹಿಳೆ, 36 ವರ್ಷದ ಮಹಿಳೆ, 80 ವರ್ಷದ ಪುರುಷ, 60 ವರ್ಷದ ಪುರುಷ, ಉಪ್ಪಳ್ಳಿಯ 49 ವರ್ಷದ ಪುರುಷ, ವಿಜಯಪುರದ 64 ವರ್ಷದ ಮಹಿಳೆ, ರಾಮನಹಳ್ಳಿ ಫಾರ್ಮ್‌ಹೌಸ್‌ನ 52 ವರ್ಷದ ಪುರುಷಗೆ ಸೋಂಕು ದೃಢಪಟ್ಟಿದೆ.

ಸಾವಿನ ಸಂಖ್ಯೆ ಏಳಕ್ಕೆ ಏರಿದೆ. ಸಕ್ರಿಯ ಪ್ರಕರಣಗಳು 60 ಇವೆ. ಒಟ್ಟಾರೆ ಈವರೆಗೆ ದೃಢಪಟ್ಟ ಪ್ರಕರಣಗಳ ಸಂಖ್ಯೆ 168ಕ್ಕೆ ತಲುಪಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು