ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲ್ಲೇನಹಳ್ಳಿ: ಹಗಲಿನಲ್ಲಿ ಮಾತ್ರ ಬೆಟ್ಟ ಹತ್ತಲು ಭಕ್ತರಿಗೆ ಸೂಚನೆ

27ರಿಂದ ಮಲ್ಲೇನಹಳ್ಳಿ ಆದಿಶಕ್ತಿ ದೇವೀರಮ್ಮನವರ ದೀಪೋತ್ಸವ
Last Updated 25 ಅಕ್ಟೋಬರ್ 2019, 17:07 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ತಾಲ್ಲೂಕಿನ ಬಿಂಡಿಗದ ಮಲ್ಲೇನಹಳ್ಳಿಯ ಆದಿಶಕ್ತಿ ದೇವೀರಮ್ಮನವರ ದೀಪೋತ್ಸವಕ್ಕೆ ಬರುವ ಭಕ್ತರು ಈ ಬಾರಿ ಹಗಲಿನಲ್ಲಿ ಮಾತ್ರ ಬೆಟ್ಟ ಹತ್ತಬೇಕು. ಅಶಕ್ತರು, ವೃದ್ಧರು, ಮಕ್ಕಳು, ರೋಗಿಗಳು ಬೆಟ್ಟ ಏರದಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.

ಸುರಕ್ಷತೆ ದೃಷ್ಟಿಯಿಂದ ಬೆಟ್ಟ ಹತ್ತದಿರುವುದು ಸೂಕ್ತ. ಹತ್ತಲೇಬೇಕಾದಲ್ಲಿ ಹಗಲಿನಲ್ಲಿ ಮಾತ್ರ ಹತ್ತಬೇಕು. 27ರಂದು ಬೆಟ್ಟದಲ್ಲಿ ಪೂಜಾ ಕೈಂಕರ್ಯಗಳು ಇರುತ್ತವೆ. ಹಿಂದಿನ ರಾತ್ರಿಯೇ ಭಕ್ತರು ಬೆಟ್ಟ ಹತ್ತಲು ಶುರು ಮಾಡಬಾರದು. 27ರಂದು ಹಗಲಿನಲ್ಲಿ ಮಾತ್ರ ಹತ್ತಬೇಕು ಎಂದು ಕಟ್ಟುನಿಟ್ಟಾಗಿ ಸೂಚಿಸಲಾಗಿದೆ.

ಸತತವಾಗಿ ಮಳೆಯಾಗುತ್ತಿದೆ. ದೇವೀರಮ್ಮ ಬೆಟ್ಟವು ಕಡಿದಾದ ಎತ್ತರದ ಇಳಿಜಾರಿನ ಪ್ರದೇಶವಾಗಿದೆ. ಸಹಸ್ರಾರು ಭಕ್ತರು ಬೆಟ್ಟ ಹತ್ತುವುದರಿಂದ ಕಾಲು ದಾರಿ ಒತ್ತಡ ಮತ್ತು ಮಳೆ ನೀರಿನಿಂದ ಸಡಿಲಗೊಂಡು ಕುಸಿಯುವ ಸಾಧ್ಯತೆ ಇರುತ್ತದೆ ಎಂದು ಭೂವಿಜ್ಞಾನಿಗಳು ವರದಿ ನೀಡಿದ್ದಾರೆ. ಹವಾಮಾನ ಇಲಾಖೆ ಭಾರಿ ಮಳೆಯ ಮುನ್ಸೂಚನೆ ನೀಡಿದೆ. ಹಗಲಿನಲ್ಲಿಯೇ ಬೆಟ್ಟ ಹತ್ತುವಂತೆ ದೇಗುಲ ಸಮಿತಿಯೂ ಮನವಿ ಮಾಡಿದೆ. ಹೀಗಾಗಿ ರಾತ್ರಿ ಹೊತ್ತಿನಲ್ಲಿ ಬೆಟ್ಟ ಹತ್ತುವುದು ಸುರಕ್ಷಿತವಲ್ಲ ಎಂದು ಕಂಡುಬಂದಿದೆ. ಭಕ್ತರು ಸೂಚನೆಯನ್ನು ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT