ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಸಿಗಳಿಂದ ಸಾಧನೆ ಸಾಧ್ಯ: ಟಿ.ಡಿ.ರಾಜೇಗೌಡ

ಮಡ್ ಟಸ್ಕರ್ –22 4x4 ಆಫ್ ರೋಡ್ ಎಕ್ಸ್ಟ್ರೀಂ ರ‍್ಯಾಲಿಗೆ ಚಾಲನೆ
Last Updated 12 ಜೂನ್ 2022, 5:47 IST
ಅಕ್ಷರ ಗಾತ್ರ

ಹೊನ್ನೆಕೂಡಿಗೆ (ಎನ್.ಆರ್.ಪುರ): ಜೀವನದಲ್ಲಿ ಸಾಹಸ ಮಾಡಿದವರು ಮಾತ್ರ ಸಾಧನೆ ಮಾಡಲು ಸಾಧ್ಯ ಎಂದು ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು.

ತಾಲ್ಲೂಕಿನ ಹೊನ್ನೆಕೂಡಿಗೆ ಗ್ರಾಮದ ವ್ಯಾಪ್ತಿಯಲ್ಲಿ ಅಡ್ವೆಂಚರ್ ಆ್ಯಂಡ್ ಮೋಟಾರ್ ಸ್ಪೋರ್ಟ್ಸ್ ಕ್ಲಬ್ ಹಾಗೂ ಇತರ ಸಂಘ, ಸಂಸ್ಥೆಗಳ ಆಶ್ರಯದಲ್ಲಿ ಶನಿವಾರ ನಡೆದ ಮಡ್ ಟಸ್ಕರ್ –22 4x4 ಆಫ್ ರೋಡ್ ಎಕ್ಸ್ಟ್ರೀಂ ರ‍್ಯಾಲಿಗೆ ಚಾಲನೆ ನೀಡಿ ಮಾತನಾಡಿದರು.

ಕೋವಿಡ್ ಮುಕ್ತವಾಗಿರುವುದರಿಂದ ರಾಜ್ಯದಾದ್ಯಂತ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಯುವಜನ ಪಾಲ್ಗೊಳ್ಳಲು ಸಾಧ್ಯವಾಗುತ್ತಿದೆ. ಸಾಹಸ ಕ್ರೀಡೆಗಳನ್ನು ನಡೆಸುವಾಗ ಟೀಕೆ– ಹೊಗಳಿಕೆ ಇರುವುದು ಸಹಜ. ಇದರ ಬಗ್ಗೆ ಯೋಚಿಸಬೇಡಿ’ ಎಂದರು.

ಜೆಡಿಎಸ್ ರಾಜ್ಯ ಘಟಕದ ಉಪಾಧ್ಯಕ್ಷ ಸುಧಾಕರ್ ಶೆಟ್ಟಿ ಮಾತನಾಡಿ, ‘ಕ್ರೀಡೆ, ರಾಜಕೀಯ ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಲು, ಅದನ್ನು ಸವಾಲಾಗಿ ಸ್ವೀಕರಿಸುವುದು ಮುಖ್ಯ. ಮಡ್‌ಟಸ್ಕರ್ ಆಯೋಜಿಸಿರುವುದರಿಂದ ರಸ್ತೆಯ ಬಗ್ಗೆ ಹೆಚ್ಚು ಗಮನಹರಿಸಬೇಕು’ ಜೀವಕ್ಕೂ ಆದ್ಯತೆ ನೀಡಬೇಕು ಎಂದರು.

ಹೊನ್ನೆಕೂಡಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಎನ್.ಪಿ.ಅಶೋಕ್ ಮಾತನಾಡಿ, ಕ್ರೀಡೆಗೆ ಗ್ರಾಮಸ್ಥರು ಸಹಕಾರ ನೀಡಬೇಕು. ಕ್ರೀಡೆಯಲ್ಲಿ ಭಾಗವಹಿಸಿದವರು ಸ್ವಚ್ಛತೆಯನ್ನು ಕಾಪಾಡಬೇಕು ಎಂದರು.

ಅಡ್ವೆಂಚರ್ ಆ್ಯಂಡ್ ಮೋಟಾರ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಇತಿಹಾಸ್ ಖಾಂಡ್ಯ ಮಾತನಾಡಿ, ಸಾಹಸಮಯ ಕ್ರೀಡೆ ಆಯೋಜನೆಗೆ ಗ್ರಾಮಸ್ಥರು ಉತ್ತಮ ಸಹಕಾರ ನೀಡಿದ್ದಾರೆ. ಸ್ಪರ್ಧಿಗಳ ಸಹ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿರುವುದು ಸಂತಸ ತಂದಿದೆ. ಪರಿಸರ ಸ್ವಚ್ಛತೆಗೆ ಆದ್ಯತೆ ನೀಡಬೇಕು’ ಎಂದರು.

ಅಭಿನವ ಗಿರಿರಾಜ್ ಇದ್ದರು. ಕ್ರೀಡೆ ಆಯೋಜನೆಗೆ ಸಹಕಾರ ನೀಡಿದ ದಾನಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.

90ಕ್ಕೂ ಹೆಚ್ಚು ವಾಹನಗಳು ಭಾಗವಹಿಸಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT