ಬುಧವಾರ, 17 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತರೀಕೆರೆ: ಅಕ್ರಮ ಮರಳು ದಂಧೆ ನಡೆಸುತ್ತಿದ್ದ ಎಂಟು ಲಾರಿಗಳ ವಶ

Published 22 ಜೂನ್ 2024, 15:51 IST
Last Updated 22 ಜೂನ್ 2024, 15:51 IST
ಅಕ್ಷರ ಗಾತ್ರ

ತರೀಕೆರೆ: ಪಟ್ಟಣದ ಕೋಡಿಕ್ಯಾಂಪ್‍ನ ಮುಖ್ಯ ರಸ್ತೆಯ ಪಕ್ಕದಲ್ಲಿ ಸರ್ಕಾರಕ್ಕೆ ತೆರಿಗೆ ಪಾವತಿಸಿದೆ ಅಕ್ರಮವಾಗಿ ಮರಳು ದಂಧೆ ನಡೆಸುತ್ತಿದ್ದ ಮರಳು ತುಂಬಿದ ಎಂಟು ಲಾರಿಗಳನ್ನು ತರೀಕೆರೆ ಉಪವಿಭಾಗಾಧಿಕಾರಿ ಕೆ.ಜೆ. ಕಾಂತರಾಜ್‍ ನೇತೃತ್ವದ ತಂಡ ದಾಳಿ ನಡೆಸಿ ವಶಕ್ಕೆ ಪಡೆದಿದೆ.

ಲಾರಿಗಳಲ್ಲಿ 15ಟನ್‍ಗೂ ಹೆಚ್ಚಿನ ಮರುಳು ಇತ್ತೆಂದು ಹೇಳಲಾಗಿದೆ. ಮರಳು ತುಂಬಿದ್ದ ಪ್ರತಿ ಲಾರಿಗೆ ₹50,600ರಂತೆ ಒಟ್ಟು 8 ಲಾರಿಗಳಿಗೆ ₹4,04,800 ದಂಡ ವಿಧಿಸಲಾಗಿದ್ದು, ನೆಲದ ಮೇಲೆ ಸುರಿದ ಮರಳನ್ನು ಲೋಕೋಪಯೋಗಿ ಇಲಾಖೆ ವಶಕ್ಕೆ ನೀಡಲಾಗಿದೆ ಎಂದು ತಿಳಿದು ಬಂದಿದೆ.

ಕಾರ್ಯಾಚರಣೆಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖಾಧಿಕಾರಿ ದಯಾನಂದ್‌, ರಾಜಸ್ವ ನಿರೀಕ್ಷಕ ಬಿ.ಎಸ್. ರೇವಣ್ಣ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT