ಆಲ್ದೂರು: ಮಲ್ಲಂದೂರು ಸಮೀಪದ ಜಾಗರ ಕೊಳಗಾಮೆ ಗ್ರಾಮದ ಆಶೀರ್ವಾದ್ ಎಸ್ಟೇಟ್‌ನಲ್ಲಿ ವಿದ್ಯುತ್ ತಂತಿ ತಗುಲಿ ಆನೆಯೊಂದು ಮಂಗಳವಾರ ಬೆಳಿಗ್ಗೆ ಮೃತಪಟ್ಟಿದೆ.
ಆಹಾರ ಹುಡುಕಿಕೊಂಡು ಬಂದಿದ್ದ ಆನೆ, ತೋಟದಲ್ಲಿ ಅಡಿಕೆ ಮರವೊಂದನ್ನು ಉರುಳಿಸಿದೆ. ಅದರ ಜತೆಗೆ ವಿದ್ಯುತ್ ತಂತಿ ನೆಲಕ್ಕೆ ಜಾರಿದೆ. ಅದು ಒಂಟಿ ಸಲಗಕ್ಕೆ ಸ್ಪರ್ಶಿಸಿ ಸ್ಥಳದಲ್ಲೇ ಮೃತಪಟ್ಟಿದೆ.
‘ಆನೆಗೆ 35 ವರ್ಷ ವಯಸ್ಸಿರಬಹುದು. ಮುತ್ತೋಡಿ ಭದ್ರಾ ಅಭಯಾರಣ್ಯದಿಂದ ಆಹಾರ ಹುಡುಕಿಕೊಂಡು ಬಂದಾಗ ಈ ಅವಘಡ ಸಂಭವಿಸಿದೆ’ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ರಮೇಶ್‌ಬಾಬು ತಿಳಿಸಿದರು.