ಅರಣ್ಯ ಇಲಾಖೆ ನಿಮ್ಮೊಂದಿಗಿದೆ:
ಶಿವಶಂಕರ್ ‘ತಾರೋಳ್ಳಿಕೊಡಿಗೆ ಪ್ರದೇಶ ದಟ್ಟವಾದ ಕಾಡು ಮತ್ತು ಗುಡ್ಡಗಾಡುಗಳಿಂದ ಕೂಡಿದ್ದು ಕಾಡಾನೆಗಳನ್ನು ಸೇರೆ ಹಿಡಿಯಲು ತಾಂತ್ರಿಕ ದೋಷ ಅಡ್ಡಿಯಾಗುತ್ತದೆ. ಆದ್ದರಿಂದ ಕಾಡಾನೆಗಳ ಉಪಟಳ ತಡೆಯಲು ರೈತರ ಜಮೀನಿನ ಸುತ್ತ ಆನೆ ತಡೆ ಕಂದಕ(ಈಪಿಟಿ)ಗಳನ್ನು ಮತ್ತು ಸೋಲಾರ್ ಬೇಲಿಗಳನ್ನು ನಿರ್ಮಿಸುತ್ತೇವೆ. ಜನರು ಭಯ ಪಡುವ ಅಗತ್ಯವಿಲ್ಲ ಅರಣ್ಯ ಇಲಾಖೆ ನಿಮ್ಮೊಂದಿಗಿದೆ. ಇಲ್ಲಿ ವಾಸಿಸುವ ಗಿರಿಜನರಿಗೆ ಅರಣ್ಯ ಹಕ್ಕು ಕಾಯ್ದೆಯಡಿ ನೀಡಿದ ಹಕ್ಕು ಪತ್ರಗಳಿಗೆ ಸಂಬಂಧಿಸಿದಂತೆ ಪಹಣಿ ಕಾಲಂ. 11ರಲ್ಲಿ ನಮೂದು ಮಾಡುವ ಕುರಿತು ಕಂದಾಯ ಇಲಾಖೆಯೊಂದಿಗೆ ಚರ್ಚಿಸಿ ಕಾನೂನು ಬದ್ಧವಾಗಿ ಮೂಲಭೂತ ಸೌಲಭ್ಯ ಒದಗಿಸುತ್ತೇವೆ’ ಎಂದು ಕೊಪ್ಪ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವಶಂಕರ್ ಇ. ಭರವಸೆ ನೀಡಿದರು.