ಬಾಳೆಹೊನ್ನೂರು: ‘ಇತ್ತೀಚಿನ ದಿನಗಳಲ್ಲಿ ಹಿಂದೂ ಹೆಣ್ಣುಮಕ್ಕಳು ಹಣೆಗೆ ಕುಂಕುಮ ಬೊಟ್ಟಿಡುವುದನ್ನು ಮರೆತಿರುವುದು ಭಾರತೀಯ ಧರ್ಮ ಪರಂಪರೆಯ ದುರಂತವಾಗಿದೆ. ಇದಕ್ಕೆ ಮಕ್ಕಳನ್ನು ದೂರುವುದಕ್ಕಿಂತ ಗಂಡೊಬ್ಬ ಹೆಣ್ಣನ್ನು ತಾಯಿ ರೂಪದಲ್ಲಿ ಕಂಡರೆ ಒಳ್ಳೆದು, ಕೆಟ್ಟ ದೃಷ್ಟಿಯಿಂದ ನೋಡಿದರೆ ದುಷ್ಟ ರಕ್ಕಸರನ್ನು ಸದೆಬಡಿದ ಜಗನ್ಮಾತೆಯಾಗುವ ಸಂಕೇತದ ಕುಂಕುಮದ ವಿಶಿಷ್ಟತೆಯನ್ನು ಪೋಷಕರು ಹೇಳಿ ಕೊಡದೆ ಇರುವುದು ಮತ್ತೊಂದು ವಿಷಾದದ ಸಂಗತಿಯಾಗಿದೆ’ ಎಂದು ಹಾರಿಕಾ ಮಂಜುನಾಥ್ ಹೇಳಿದರು.

ರೇಣುಕಾನಗರದ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿಯಿಂದ ಗುರುವಾರ ನಡೆದ ದೀಪೋತ್ಸವ, ಅನ್ನದಾನ, ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ‘ಧರ್ಮ ಜಾಗೃತಿ’ ಕುರಿತು ಅವರು ಉಪನ್ಯಾಸ ನೀಡಿದರು.

ಹಿಂದೂಗಳ ಮೇಲಾದ ಸಾವಿರಾರು ವರ್ಷಗಳ ದಾಳಿ ಹಾಗೂ ನೂರಾರು ಜನಾಂಗಗಳ ಆಕ್ರಮಣದ ಬಳಿಕವೂ, ಹಿಂದೂ ಧರ್ಮದ ಕ್ಷತ್ರಿಯ ಪರಂಪರೆಯ ಉತ್ತರಧಿಕಾರಿಯಾಗಿರುವ ಎದುರಾಳಿಗಳಿಗೆ ಮೃತ್ಯು ಸದೃಶವಾದ ಏಕೈಕ ಮಾರ್ಗವೆಂದರೆ ಅದು ಕುಂಕುಮ ಬೊಟ್ಟಿಡುವುದಾಗಿದೆ. ಇದನ್ನು ಪಾಲಿಸದೆ ಹೀಗೆ ಮುಂದುವರಿದರೆ ಮುಂದೊಂದು ದಿನ ಹಿಂದೂ ಸಮಾಜದ ಗತಿ ಏನಾದೀತು ಎಂದು ಆಲೋಚಿಸಿದರೆ ಮೈ ನಡುಕ ಹುಟ್ಟಿಸುತ್ತದೆ. ಹಿಂದೂ ಪುರುಷರಾಗಲಿ, ಹೆಣ್ಣಾಗಲಿ ಸದಾ ಹಣೆಯಲ್ಲಿ ಧರ್ಮದ ಸಂಕೇತವಾದ ಯಾವುದಾದರೂ ಲೇಪನವಿರಬೇಕೆಂದು ವೇದ, ಪುರಾಣಗಳೇ ಸಾರಿವೆ ಎಂದರು.

ಇಂದಿನ ಮಕ್ಕಳಿಗೆ ಪುರಾಣ, ಇತಿಹಾಸ ಗ್ರಂಥಗಳನ್ನು ಓದಿಸಿ, ಯಾವುದೇ ಆಚರಣೆಗಳು ಬಂದರೂ ರೆಸಾರ್ಟ್ ಮತ್ತಿತರ ಆಡಂಬರದ ಮನರಂಜನಾ ಕೇಂದ್ರಗಳಿಗೆ ಕಳುಹಿಸದೆ ವಾರಕ್ಕೊಮ್ಮೆಯಾದರೂ ದೇವಸ್ಥಾನ, ಶ್ರದ್ಧಾಕೇಂದ್ರಗಳಿಗೆ ಕಳಿಸಿ ಭಜನೆ–ಧ್ಯಾನ ಮಾಡಿಸುವ ಪರಿಪಾಠವನ್ನು ಪೋಷಕರು ರೂಢಿಸಿಕೊಳ್ಳಬೇಕಾಗಿದೆ. ಭಜನೆ ಮಾಡುವ ಮನೆಗಳು ವಿಭಜನೆಯಾಗುವುದಿಲ್ಲ ಎಂಬ ಮಾತು ಸತ್ಯವಾಗುತ್ತದೆ. ದೇವಸ್ಥಾನಗಳಲ್ಲಿ ಹಿಂದೂಗಳಿಲ್ಲ ಎಂಬ ಕಾರಣಕ್ಕೆ ಶಂಖ, ಜಾಗಟೆಗಳ ನಾದಕ್ಕೆ ಆಧುನಿಕ ಯಂತ್ರಗಳು ದೇವಾಲಯದ ಮುಖಮಂಟಪವನ್ನು ಆವರಿಸಿದೆ ಎನ್ನುವ ವಿಚಾರವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಅಯೋಧ್ಯೆಯ ರಾಮಮಂದಿರ ಕೆಡವಿದ ಬಳಿಕವೂ ನಮ್ಮ ಪೂರ್ವಿಕರು ಅಯೋಧ್ಯೆಗೆ ಹೋಗಿ ಪರಿಕ್ರಮ ಮಾಡಿ ಬಂದಿದ್ದಾರೆ. ಇದು ಸನಾತನ ಹಿಂದೂ ಸಮಾಜಕ್ಕಿರುವ ಸಾಮರ್ಥ್ಯ ಎಂದು ಅವರು ಹೇಳಿದರು.

ಶಬರಿಮಲೆ ಕ್ಷೇತ್ರದಲ್ಲಿ ಹೆಣ್ಣು ಮಕ್ಕಳಿಗೆ ದರ್ಶನಕ್ಕೆ ಅವಕಾಶವಿಲ್ಲ ಎಂಬ ಅಪವಾದ ಸೃಷ್ಟಿಸಿ ನ್ಯಾಯಾಲಯದ ಮೆಟ್ಟಿಲೇರಲಾಯಿತು. ಯಾವುದೋ ಸಿದ್ಧಾಂತ, ಮತದಿಂದ ಬಂದ ವ್ಯಕ್ತಿಗಳು ಅಪವಾದವನ್ನು ತಂದರೇ ಹೊರತು ಪರಂಪರೆಯನ್ನು ಆರಾಧಿಸಿಕೊಂಡು ಬಂದ ಹಿಂದೂ ಹೆಣ್ಣು ಮಗಳಿಗೆ ಆ ಸಮಸ್ಯೆ ಬಂದಿಲ್ಲ. ಕೆಲವು ರಾಜಕೀಯ ಪಕ್ಷಗಳು ಹಾಗೂ ಹಿಂದೂ ವಿರೋಧಿಗಳು ಹಿಂದೂ ಸಮಾಜವನ್ನು ಸರ್ವನಾಶ ಮಾಡಬೇಕೆಂಬ ಒಂದೇ ಉದ್ದೇಶದಿಂದ ಧರ್ಮಸ್ಥಳದ ಮೇಲೂ ಕಳಂಕ ತಂದೊಡ್ಡುವ ಯತ್ನ ಮಾಡಿದರೂ ಅದು ವಿಫಲವಾಯಿತು. ಹಿಂದೂ ದೇವಾಲಯಗಳ ಮೇಲೆ ನಿರಂತರ ವೈಚಾರಿಕ ದಾಳಿಗಳಾಗುತ್ತಿದ್ದು, ನಾವೀಗ ಜಾಗೃತರಾಗದೆ ಹೋದರೆ ಮುಂದಿನ ದಿನಗಳಲ್ಲಿ ದೊಡ್ಡ ಆಪತ್ತನ್ನು ಎದುರಿಸಬೇಕಾಗಿ ಬರಬಹುದು ಎಂದು ಎಚ್ಚರಿಸಿದರು.

ಚಿಕ್ಕಮಗಳೂರಿನ ಶಂಕರದೇವರ ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಮಕ್ಕಳಿಗೆ ಸಂಸ್ಕಾರ ನೀಡುವಲ್ಲಿ ತಾಯಂದಿರ ಪಾತ್ರ ಬಹು ಮುಖ್ಯವಾಗಿದೆ. ಸಮಾಜದಲ್ಲಿ ಜಾತಿ ಜಾತಿಗಳ ನಡುವೆ ಸಂಘರ್ಷ ನಿರಂತರವಾಗಿ ನಡೆಯುತ್ತಿದ್ದು, ಸಮಾಜದಲ್ಲಿ ಸಾಮರಸ್ಯ ಮೂಡಲು ದೇವರ ಪೂಜಾ ಕಾರ್ಯಕ್ರಮ ಧರ್ಮಜಾಗೃತಿ, ಉಪನ್ಯಾಸ ಕಾರ್ಯಕ್ರಮ ಸಹಕಾರಿ ಆಗಲಿದೆ ಎಂದರು.

ಮೆಣಸುಕೊಡಿಗೆಯ ಅನ್ನಪೂರ್ಣಮ್ಮ ಶಿವರಾಮೇಗೌಡ ಅವರಿಗೆ ‘ಹಿಂದೂ ಸಮಾಜ ಸೇವಾ ರತ್ನ’, ನಟ, ನಿರ್ಮಾಪಕ ತುಪ್ಪೂರು ಮಂಜುನಾಥ್ ಅವರಿಗೆ ‘ಕಲಾರತ್ನ’ ಹಾಗೂ ಕಾಂತಾರ ಚಾಪ್ಟರ್ 1ರಲ್ಲಿ ನಟಿಸಿದ ತ್ರಿಷಾ ಜೈನ್ ಅವರಿಗೆ ‘ಭವಿಷ್ಯದ ತಾರೆ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿರುವ ಲೇಖಕಿ ಎ.ಆರ್. ಲತಾ, ನಡಿಗೆ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟದಲ್ಲಿ ಪ್ರತಿನಿಧಿಸಿದ ವಾಟುಕೊಡಿಗೆ ಅಮೋಘ, ಕಬಡ್ಡಿಯಲ್ಲಿ ಕರಗಣೆ ಪುನೀತ್, ಥ್ರೋಬಾಲ್ನಲ್ಲಿ ಸಾಧನೆ ಮಾಡಿದ ಪ್ರಜ್ವಲ್ ಅವರನ್ನು ಸನ್ಮಾನಿಸಲಾಯಿತು.

ಎಕೆಪಿ ಕೃಷ್ಣ ಪೊದುವಾಳ್, ಅಯ್ಯಪ್ಪ ಸೇವಾ ಸಮಿತಿ ಅಧ್ಯಕ್ಷ ಆರ್.ಟಿ. ಮಹೇಂದ್ರ, ಪ್ರಭಾಕರ್ ಪ್ರಣಸ್ವಿ, ನಾಗರಾಜ್, ರವೀಂದ್ರಾಚಾರ್, ಬಿ.ಜಗದೀಶ್ಚಂದ್ರ, ಪ್ರಕಾಶ್ ಬನ್ನೂರು, ಶೃತಿ ಎಸ್. ಪ್ರಭು, ಸತೀಶ್ ಗದ್ದೆಮನೆ, ಬಾಲಚಂದ್ರಗೌಡ, ಸಹದೇವ್ ಸಾಗರ್, ಡಿ.ಕುಮಾರ್ ಭಾಗವಹಿಸಿದ್ದರು.