ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಮಗಳೂರು | ಐಡಿಎಸ್‌ಜಿ ಕಾಲೇಜು: ಪದವಿಗೆ ಹಲವು ಅವಕಾಶ

ಹಲವು ಕೋರ್ಸ್‌ಗಳ ಜತೆ ಹೊಸ ಕೋರ್ಸ್ ಪರಿಚಯ: ಪ್ರವೇಶ ಆರಂಭ
Published 1 ಮೇ 2024, 5:21 IST
Last Updated 1 ಮೇ 2024, 5:21 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ದ್ವಿತೀಯ ಪಿಯು ಫಲಿತಾಂಶ ಹೆಚ್ಚಳವಾಗಿದ್ದು, ಈ ಬಾರಿ ಪದವಿ ಕಾಲೇಜು ಸೇರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ನಗರದ ಪ್ರತಿಷ್ಠಿತ ಐಡಿಎಸ್‌ಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಸೇರುವ ವಿದ್ಯಾರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಇಳಿಮುಖವಾಗುತ್ತಿದ್ದು, ಈ ವರ್ಷ ಹೆಚ್ಚಳವಾಗುವ ನಿರೀಕ್ಷೆಯನ್ನು ಕಾಲೇಜಿನ ಉಪನ್ಯಾಸಕ ಬಳಗ ಹೊಂದಿದೆ.

1961–62ರಿಂದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿದ ಇಂದಾವರ ದೊಡ್ಡಸಿದ್ದಲಿಂಗೇಗೌಡ (ಐಡಿಎಸ್‌ಜಿ) ಸರ್ಕಾರಿ ಕಾಲೇಜಿನಲ್ಲಿ ಈಗ 2023–24ನೇ ಸಾಲಿನಲ್ಲಿ 2,849 ವಿದ್ಯಾರ್ಥಿಗಳು ವ್ಯಾಸಂಗ ಮಾಡಿದ್ದಾರೆ. 2024–25ನೇ ಸಾಲಿಗೆ ಪ್ರವೇಶಾತಿ ಆರಂಭವಾಗಿದೆ.

ಕಾಲೇಜಿನಲ್ಲಿ ಬಿ.ಎ ವಿಭಾಗದಲ್ಲಿ ಇತಿಹಾಸ, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ, ಐಚ್ಛಿಕ ಕನ್ನಡ, ಅರ್ಥಶಾಸ್ತ್ರ, ಐಚ್ಛಿಕ ಇಂಗ್ಲಿಷ್, ಪತ್ರಿಕೋದ್ಯಮ ಕೋರ್ಸ್‌ಗಳಿವೆ. ಬಿಎಸ್ಸಿಯಲ್ಲಿ ರಸಾಯನಶಾಸ್ತ್ರ, ಭೌತಶಾಸ್ತ್ರ, ಸಸ್ಯಶಾಸ್ತ್ರ, ಗಣಿತಶಾಸ್ತ್ರ, ಪ್ರಾಣಿಶಾಸ್ತ್ರ, ಕಂಪ್ಯೂಟರ್ ಸೈನ್ಸ್‌, ಜೈವಿಕ ತಂತ್ರಜ್ಞಾನ ಕೋರ್ಸ್‌ಗಳಿವೆ.

ಬಿ.ಕಾಂ, ಬಿಬಿಎ, ಬಿಸಿಎ ಜತೆಗೆ ಹೊಸದಾಗಿ ಫಾರ್ಮಸೂಟಿಕಲ್ ಮ್ಯಾನುಫ್ಯಾಕ್ಚರಿಂಗ್ ಆ್ಯಂಡ್ ಕ್ವಾಲಿಟಿ ಎಂಬ ಕೋರ್ಸ್‌ ಪರಿಚಯಿಸಲಾಗಿದೆ. ಇದರ ಜತೆಗೆ ಮುಕ್ತ ಆಯ್ಕೆಯ ವಿಷಯಗಳು ಮತ್ತು ಕಡ್ಡಾಯ ವಿಷಯಗಳಾದ ಯೋಗ, ಆರೋಗ್ಯ ಶಿಕ್ಷಣ ಮತ್ತು ಸುರಕ್ಷತೆ ಕೋರ್ಸ್‌ಗಳು ಕೂಡ ಇವೆ. ಎಂಟು ಸ್ನಾತಕೋತ್ತರ ಕೋರ್ಸ್‌ಗಳು ಕೂಡ ಒಳಗೊಂಡಿವೆ.

1961ರಲ್ಲಿ ನಿರ್ಮಾಣವಾದ ಹಳೇ ಕಟ್ಟಡದ ಜತೆಗೆ ಹೆಚ್ಚುವರಿಯಾಗಿ ಹೊಸ ಕಟ್ಟಡವೂ ನಿರ್ಮಾಣವಾಗಿದೆ. ಎರಡು ಕಟ್ಟಡಗಳಿಂದ ತರಗತಿಗೆ ಅಗತ್ಯವಾಗಿ ಬೇಕಾದ 41 ಕೊಠಡಿಗಳಿವೆ. ಇದರ ಜತೆಗೆ ಎರಡು ಗ್ರಂಥಾಲಯ, ಮೂರು ಪ್ರಯೋಗಾಲಯ, ಮೂರು ಕಂಪ್ಯೂಟರ್‌ ಲ್ಯಾಬ್‌ಗಳನ್ನೂ ಹೊಂದಿದೆ.

119 ಬೋಧಕ ಸಿಬ್ಬಂದಿಯಲ್ಲಿ 38 ಬೋಧಕರು, 81 ಅತಿಥಿ ಉಪನ್ಯಾಸಕರು ಇದ್ದಾರೆ. ಅಗತ್ಯಕ್ಕೆ ತಕ್ಕಷ್ಟು ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಇದ್ದಾರೆ. ಯಾವುದೇ ಕೊರತೆ ಇಲ್ಲ ಎಂದು ಕಾಲೇಜಿನ ಪ್ರಾಂಶುಪಾಲರಾದ ಚಾಂದಿನಿ ವಿವರಿಸುತ್ತಾರೆ.

ಚಿಕ್ಕಮಗಳೂರಿನ ಐಡಿಎಸ್‌ಜಿ ಸರ್ಕಾರಿ ಕಾಲೇಜಿನ ಹೊರಭಾಗ
ಚಿಕ್ಕಮಗಳೂರಿನ ಐಡಿಎಸ್‌ಜಿ ಸರ್ಕಾರಿ ಕಾಲೇಜಿನ ಹೊರಭಾಗ

Cut-off box - ನವೀಕರಣ ಕಾದಿರುವ ಕಟ್ಟಡ 1961ರಲ್ಲಿ ಶಂಕುಸ್ಥಾಪನೆಯಾಗಿ 1965ರಿಂದ ಆರಂಭವಾಗಿರುವ ಕಾಲೇಜಿನ ಕಟ್ಟಡ ಗಟ್ಟಿಮುಟ್ಟಾಗಿದೆ. ಆದರೆ ನವೀಕರಣಕ್ಕೆ ಕಾದಿದೆ. ಕಲ್ಲಿನ ಕಟ್ಟಡ ಆಗಿರುವುದರಿಂದ ಹೆಚ್ಚು ಸುಭದ್ರವಾಗಿದೆ. ಒಳಭಾಗದಲ್ಲಿ ನವೀಕರಣಗೊಂಡರೆ ಇನ್ನಷ್ಟು ಅಚ್ಚುಕಟ್ಟಾಗಿ ಕಾಣಿಸಲಿದೆ ಎಂದು ವಿದ್ಯಾರ್ಥಿಗಳು ಹೇಳುತ್ತಾರೆ. ಕುಡಿಯುವ ನೀರಿನ ನಾಲ್ಕು ಘಟಕಗಳಿದ್ದು ನೀರಿನ ಸಮಸ್ಯೆ ಇಲ್ಲ. ಹಳೇ ಕಟ್ಟಡದಲ್ಲಿ ನಾಲ್ಕು ಮತ್ತು ಹೊಸ ಕಟ್ಟಡಗಳಲ್ಲಿ ನಾಲ್ಕು ಶೌಚಾಲಯಗಳು ಸದ್ಯಕ್ಕೆ ಇವೆ. ವಿದ್ಯಾರ್ಥಿಗಳ ಸಂಖ್ಯೆಗೆ ಹೋಲಿಸಿದರೆ ಅದು ಕಡಿಮೆ. ಆದ್ದರಿಂದ ಹೆಚ್ಚುವರಿ ಶೌಚಾಲಯಗಳ ನಿರ್ಮಾಣಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಪ್ರಾಂಶುಪಾಲರಾದ ಚಾಂದಿನಿ ವಿವರಿಸುತ್ತಾರೆ.

Cut-off box - ವಿದ್ಯಾರ್ಥಿಗಳ ಸಂಖ್ಯೆ ಇಳಿಮುಖ ವರ್ಷದಿಂದ ವರ್ಷಕ್ಕೆ ಕಾಲೇಜಿನ ವಿದ್ಯಾರ್ಥಿಗಳ ಸಂಖ್ಯೆ ಇಳಿಮುಖವಾಗುತ್ತಿದೆ. ಕೋವಿಡ್‌ಗೂ ಮುನ್ನ ಇದ್ದ ವಿದ್ಯಾರ್ಥಿಗಳ ಸಂಖ್ಯೆಗೂ ಕಳೆದ ಸಾಲಿನ ವಿದ್ಯಾರ್ಥಿಗಳ ಸಂಖ್ಯೆಗೆ ಹೋಲಿಸಿದರೆ ಒಂದು ಸಾವಿರ ವಿದ್ಯಾರ್ಥಿಗಳು ಕಡಿಮೆಯಾಗಿದ್ದಾರೆ.

Cut-off box - ಅಂಕಿ–ಅಂಶ ವರ್ಷ; ವಿದ್ಯಾರ್ಥಿಗಳ ಸಂಖ್ಯೆ 2019–20; 3899 2020–21; 3601 2021–22; 3570 2022–23; 2979 2023–24; 2849

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT