ಕಡೂರು: ಸಮೃದ್ಧಿಯ ಸಂಕೇತವಾಗಿ ಸ್ವರ್ಣ ಗೌರಿ ಮತ್ತು ವಿಘ್ನ ನಿವಾರಕ ಗಣಪತಿಯನ್ನು ತಾಲ್ಲೂಕಿನಾದ್ಯಂತ ಮಂಗಳವಾರ ಮತ್ತು ಬುಧವಾರ ಸಂಭ್ರಮದಿಂದ ಪೂಜಿಸಲಾಯಿತು. ಮನೆ ಮನೆಗಳಲ್ಲಿ ಗೌರಿ-ಗಣಪತಿಯನ್ನು ತಳಿರು ತೋರಣಗಳಿಂದ ಅಲಂಕೃತ ಮಂಟಪಗಳಲ್ಲಿ ಅಲಂಕರಿಸಿ ಪೂಜಿಸಲಾಯಿತು.

ಪಟ್ಟಣದಲ್ಲಿ ಸಾರ್ವಜನಿಕ ಗಣೇಶೋತ್ಸವದ ಅಂಗವಾಗಿ ಪ್ರಸನ್ನ ಗಣಪತಿ ಸೇವಾ ಸಮಿತಿ ಸಹಯೋಗದಲ್ಲಿ ಗಣಪತಿ ಪೆಂಡಾಲ್ನಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ಪ್ರತಿಷ್ಠಾಪನೆಗೂ ಮುನ್ನ ಸಂಪ್ರದಾಯದಂತೆ ಪಟ್ಟಣದ ಅಮೃತಲಾಲ್ ಜಿ.ಮೆಹತಾ ಅವರ ಮನೆಯಿಂದ ಬೆಳ್ಳಿಯ ಗೌರಿ-ಗಣಪತಿ ಮೂರ್ತಿಯನ್ನು ಸಮಿತಿಯ ಸದಸ್ಯರು ತೆಗೆದುಕೊಂಡು ಬಂದು ಪಟ್ಟಣದ ಕೋರ್ಟ್ ಗಣಪತಿ ಮತ್ತು ಪೇಟೆ ಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ನಂತರ ಆಸ್ಥಾನ ಮಂಟಪದವರೆಗೆ ಮೆರವಣಿಗೆ ನಡೆಸಿದರು.

ಪೆಂಡಾಲ್ ಆವರಣದ ಶಾಶ್ವತ ಮಂಟಪದಲ್ಲಿ ದೊಡ್ಡಪಟ್ಟಣಗೆರೆಯ ಹೊಳೆಯಪ್ಪ ಕುಟುಂಬದವರು ನಿರ್ಮಿಸಿದ್ದ ಗಣೇಶ ಮೂರ್ತಿಯನ್ನು ಅನಾವರಣಗೊಳಿಸಿ ಪ್ರತಿಷ್ಠಾಪನಾ ಕಾರ್ಯ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಗಣೇಶೋತ್ಸವದ ಕೈಪಿಡಿಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಶಾಸಕ ಕೆ.ಎಸ್.ಆನಂದ್, ಪ್ರಸನ್ನ ಗಣಪತಿ ಸೇವಾ ಸಮಿತಿಯ ವತಿಯಿಂದ ಕಳೆದ 37 ವರ್ಷಗಳಿಂದ ವಿಶೇಷವಾಗಿ ಗಣೇಶೋತ್ಸವವನ್ನು ಆಚರಿಸಿಕೊಂಡು ಬರುತ್ತಿದ್ದು, ಸೌರ್ಹಾದಯುತವಾಗಿ ಹಬ್ಬದ ಸಂಭ್ರಮವನ್ನು ಹೆಚ್ಚಿಸಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದರು.

ಪುರಸಭಾ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, ಪಟ್ಟಣದ ನಾಗರಿಕರ ಸಹಕಾರದೊಂದಿಗೆ ಸಮಿತಿಯು 30 ದಿವಸಗಳ ಕಾಲ ಸ್ವಾಮಿಯನ್ನು ಪ್ರತಿಷ್ಠಾಪಿಸಿ ಪ್ರತಿನಿತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸಿಕೊಂಡು ಬರಲಾಗುತ್ತಿದೆ. ವಿಶೇಷವಾಗಿ ಮಹೋತ್ಸವಕ್ಕೆ ಎಲ್ಲಾ ವರ್ಗದ ಭಕ್ತರು ಕೈ ಜೋಡಿಸುವುದು ಹೆಗ್ಗಳಿಕೆಯಾಗಿದೆ, ಈ ಮೂಲಕ ಶಾಂತಿ ಸೌರ್ಹಾದತೆಗೆ ಹೆಸರಾಗಿರುವ ಪೆಂಡಾಲ್ ಗಣಪತಿಯಿಂದಾಗಿ ತಾಲ್ಲೂಕಿನ ಕೀರ್ತಿ ಹೆಚ್ಚಿದೆ ಎಂದರು.

ಜಿ.ಪಂ ಮಾಜಿ ಸದಸ್ಯ ಶರತ್ಕೃಷ್ಣಮೂರ್ತಿ, ಪುರಸಭಾ ಸದಸ್ಯರಾದ ತೋಟದಮನೆ ಮೋಹನ್ಕುಮಾರ್, ಈರಳ್ಳಿ ರಮೇಶ್, ಸಮಿತಿಯ ಅಧ್ಯಕ್ಷ ಕೆ.ಜಿ. ಸೋಮಶೇಖರ್, ಗೌರವಾಧ್ಯಕ್ಷ ಹೂವಿನಮಂಡಿ ನಾಗರಾಜ್, ಪದಾಧಿಕಾರಿಗಳಾದ ಕೆ.ಬಿ.ಸೋಮೇಶ್, ಕೆ.ಜಿ.ಶ್ರೀನಿವಾಸ ಮೂರ್ತಿ, ಟಿ.ರಂಗಪ್ಪ, ಎನ್.ಎಚ್. ನಂಜುಂಡಸ್ವಾಮಿ, ಕೆ.ಜಿ.ಲೋಕೇಶ್ವರ್, ಕೆ.ಜಿ.ಕೃಷ್ಣಮೂರ್ತಿ, ಹೊಳೆಯಪ್ಪ, ಸಂದೀಪ್, ಮಂಜುನಾಥ್, ಎನ್.ಎಚ್.ಚಂದ್ರಪ್ಪ, ಸಾರ್ವಜನಿಕರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.