ಮೆಣಸೂರು (ನರಸಿಂಹರಾಜಪುರ): ಕನ್ನಡ ರಾಜ್ಯೋತ್ಸವ ನವೆಂಬರ್ಗೆ ಸೀಮಿತವಾಗದ ನಿತ್ಯೋತ್ಸವವಾಗ ಬೇಕು ಎಂದು 2026ರಲ್ಲಿ ನೆದರ್ಲೆಂಡ್ಸ್ನಲ್ಲಿ ನಡೆಯುವ ಸೌಂದರ್ಯ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿರುವ ದ್ವಾರಮಕ್ಕಿ ಗ್ರಾಮದ ಸನ್ಮತಿರಕ್ಷಿತ್ ಹೇಳಿದರು.

ತಾಲ್ಲೂಕಿನ ಮೆಣಸೂರು ಗ್ರಾಮದಲ್ಲಿರುವ ಮೌಂಟ್ ಕಾರ್ಮೆಲ್ ಪದವಿ ಪೂರ್ವ ಕಾಲೇಜಿನಲ್ಲಿ ತಾಲ್ಲೂಕು ಸಿರಿಗನ್ನಡ ವೇದಿಕೆ ಆಶ್ರಯದಲ್ಲಿ ಸೋಮವಾರ ನಡೆದ ನುಡಿ ನಿತ್ಯೋತ್ಸವ ಕಾರ್ಯಕ್ರಮದಲ್ಲಿ ಕನ್ನಡ ಭಾಷೆ ಕುರಿತು ಅವರು ಮಾತನಾಡಿದರು.

ಕನ್ನಡ ಭಾಷೆಯ ಬಗ್ಗೆ ಮಾತನಾಡುವುದೇ ಹೆಮ್ಮೆ ಮತ್ತು ಗೌರವವಾಗಿದೆ. ಕರುನಾಡು ದಯೆಯ ನಾಡಾಗಿದ್ದು, ವಿವಿಧ ರಾಜ್ಯಗಳಿಂದ ಬಂದ ಅನ್ಯಭಾಷಿಗರಿಗೂ ಉದಾರ ಮನಸ್ಸಿನಿಂದ ನೆಲೆಯನ್ನು ನೀಡಿದೆ. ಎಲ್ಲರೂ ಕನ್ನಡ ಭಾಷೆಗೆ ಗೌರ ಕೊಡಬೇಕು ಎಂದರು.

ಬಾಳೆಹೊನ್ನೂರಿನ ಸಮಾಜ ಸೇವಕಿ ಕೋಕಿಲ ಮಾತನಾಡಿ, ಮನೆಯಲ್ಲಿ ಮಕ್ಕಳೊಂದಿಗೆ ತಾಯಂದಿರು ಕನ್ನಡದಲ್ಲಿ ಮಾತನಾಡಬೇಕು. ಕನಿಷ್ಠ 5ನೇ ತರಗತಿಯವರೆಗಾದರೂ ಕನ್ನಡ ಮಾಧ್ಯಮ ಶಾಲೆಯಲ್ಲಿ ಮಕ್ಕಳನ್ನು ಓದಿಸಬೇಕು. ವೃತ್ತಿ ಬದುಕಿಗಾಗಿ ಇಂಗ್ಲಿಷ್ ಅನಿವಾರ್ಯವಾದರೂ ಕನ್ನಡದ ಬಗ್ಗೆ ಕೀಳಿರಿಮೆ ಬಿಡಬೇಕು ಎಂದರು.

ಭಾಷೆ ಬೆಳೆಯಬೇಕಾದರೆ ಅದನ್ನು ಬಳಸಬೇಕು. ಮಕ್ಕಳಿಗೆ ನಾಡಿನ ಸಂಸ್ಕೃತಿ, ಆಚಾರ, ವಿಚಾರ, ಕುಟುಂಬ ಸಂಬಂಧಗಳ ಬಗ್ಗೆ ಅರಿವು ಮೂಡಿಸಲು ಬಾಲ್ಯದಿಂದಲೇ ಮಕ್ಕಳನ್ನು ಮನೆಯಲ್ಲಿ ಬೆಳೆಸಬೇಕು. ಇತ್ತೀಚೆಗೆ ಬೋರ್ಡಿಂಗ್ ಸಂಸ್ಕೃತಿ ಹೆಚ್ಚಾಗುತ್ತಿದ್ದು, ಎಳೆ ವಯಸ್ಸಿನಿಂದ ಮನೆಯ ಹಿರಿಯರ ಪ್ರೀತಿಯಿಂದ ದೂರ ಉಳಿದ ಮಕ್ಕಳು ದೊಡ್ಡವರಾದ ಮೇಲೆ ತಂದೆ ತಾಯಿಯನ್ನು ವೃದ್ಧಾಶ್ರಮಕ್ಕೆ ಸೇರಿಸುತ್ತಿದ್ದಾರೆ. ಭಾರತೀಯರು ಪಾಶ್ಚತ್ಯ ಸಂಸ್ಕೃತಿ ಅನುಸರಿಸುತ್ತಿದ್ದಾರೆ. ವಿದೇಶಿಯರು ಭಾರತದ ಸಂಸ್ಕೃತಿ ಅನುಸುತ್ತಿದ್ದಾರೆ ಎಂದರು.

ಇನ್ನರ್ ವ್ಹೀಲ್ ಸಂಸ್ಥೆಯ ಅಧ್ಯಕ್ಷೆ ಭವ್ಯ ಸಂತೋಷ್ ಮಾತನಾಡಿ, ಭಾಷೆ ಸದೃಢವಾಗಿ ಬೆಳೆಯಬೇಕಾದರೆ ಸಾಹಿತ್ಯ, ಸಂಸ್ಕೃತಿ ಯುವ ಪೀಳಿಗೆಗೆ ತಲುಪಬೇಕು. ಮಕ್ಕಳು ಸಾಹಿತ್ಯದ ಬಗ್ಗೆ ಆಸಕ್ತಿ ಬೆಳೆಸಿಕೊಂಡು ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದರು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಕಾಲೇಜಿನ ಪ್ರಾಂಶುಪಾಲೆ ಸಿಸ್ಟರ್ ಶುಭಾ ಮಾತನಾಡಿ, ಕನ್ನಡ ಭಾಷೆಗೆ ದೇಶ ವಿದೇಶಗಳಲ್ಲೂ ಮನ್ನಣೆಯಿದೆ. ಕನ್ನಡ ನಾಡಿನ ಸಾಹಿತ್ಯ, ಪರಂಪರೆ, ಸಂಸ್ಕೃತಿಯ ಬಗ್ಗೆ ಅರಿತು ಕೊಳ್ಳಬೇಕು. ಕನ್ನಡ ಭಾಷೆಯ ಬೆಳವಣಿಗೆಗೆ ಆದ್ಯತೆ ನೀಡಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ತಾಲ್ಲೂಕು ಸಿರಿಗನ್ನಡ ವೇದಿಕೆ ಅಧ್ಯಕ್ಷೆ ಮೀನಾಕ್ಷಿಕಾಂತರಾಜ್ ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಸ್ವತಂತ್ರ್ಯ ಬದುಕು ರೂಪಿಸಿಕೊಳ್ಳಬೇಕು. ಯುವಜನತೆ ನಾಯಕತ್ವಗುಣ ಬೆಳೆಸಿಕೊಳ್ಳಬೇಕು ಎಂದರು.

ಶಾಶ್ವತಿ ಮಹಿಳಾ ಒಕ್ಕಲಿಗರ ಸಂಘದ ಅಧ್ಯಕ್ಷೆ ಪದ್ಮಾಸತೀಶ್, ದಂತವೈದ್ಯೆ ಡಾ.ಸ್ವಪ್ನಾಲಿ ಮಹೇಶ್ ಮಾತನಾಡಿದರು.

ನೀತಾ ಪ್ರದೀಪ್, ರೇಖಾ ಮೋಹನ, ಉಪನ್ಯಾಸಕರಾದ ಐ.ಎಂ.ರಾಜೀವ, ಸ್ವಪ್ನ ಹೆಗ್ಡೆ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.