ಸೋಮವಾರ, ಮೇ 23, 2022
22 °C

ವಕೀಲ ಸೋಮಶೇಖರ್‌ ರಂಜಾನ್‌ ಉಪವಾಸ; ಸೌಹಾರ್ದ ಸಂಕೇತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಮಗಳೂರು: ತಾಲ್ಲೂಕಿನ ಜಕ್ಕನಹಳ್ಳಿಯ ಜೆ.ಕೆ.ಸೋಮಶೇಖರ್ ಅವರು ರಂಜಾನ್‌ ಮಾಸದಲ್ಲಿ ಉಪವಾಸ ಆಚರಣೆಯನ್ನು ಸತತ 10 ವರ್ಷಗಳಿಂದ ರೂಢಿಸಿಕೊಂಡಿದ್ದಾರೆ. ಸಾಮರಸ್ಯದ ಹಾದಿಯಲ್ಲಿ ಹೆಜ್ಜೆ ಇಟ್ಟಿದ್ದಾರೆ. 

ಕಾಫಿ ಬೆಳೆಗಾರರೂ ಆಗಿರುವ ಸೋಮಶೇಖರ್‌ ಅವರು 25 ವರ್ಷಗಳಿಂದ ವಕೀಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ವರ್ಷವೂ ಉಪವಾಸದಲ್ಲಿ ತೊಡಗಿದ್ದಾರೆ. 

ಸೋಮಶೇಖರ್‌ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ, ‘2012ರಲ್ಲಿ ರಂಜಾನ್‌ ಮಾಸದಲ್ಲಿ ರೂಢಿಸಿಕೊಂಡ ಉಪವಾಸ ಆಚರಣೆ ಪ್ರತಿ ವರ್ಷ ಮುಂದುವರಿಸಿದ್ದೇನೆ. ತೂಕ ಇಳಿಸುವ ನಿಟ್ಟಿನಲ್ಲಿ ಉಪವಾಸ ಆರಂಭಿಸಿದೆ. ಮೊದಲ ವರ್ಷ ಸುಮಾರು 5 ಕೆ.ಜಿ ತೂಕ ಇಳಿಸಿದ್ದೆ. ವರ್ಷದಲ್ಲಿ ಒಂದು ಒಂದು ತಿಂಗಳು ಉಪವಾಸ ಮಾಡುವುದರಿಂದ ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳಬಹುದು’ ಎಂದು ತಿಳಿಸಿದರು. 

‘ಬೆಳಿಗ್ಗೆ 3.30ಕ್ಕೆ ಎದ್ದು ಆಹಾರ ಸೇವಿಸುತ್ತೇನೆ. ನಾಲ್ಕು ಲೋಟ ನೀರು ಕುಡಿಯುತ್ತೇನೆ. ಮತ್ತೆ ಆಜಾನ್‌ ಕೂಗಿದ ನಂತರ ಆಹಾರ ಸೇವಿಸುತ್ತೇನೆ. ಮುಸ್ಲಿಂ ಸ್ನೇಹಿತರು ಖರ್ಜೂರ, ಹಣ್ಣಿನ ರಸ, ಸಿಹಿ ಪದಾರ್ಥಗಳನ್ನು ತಂದುಕೊಂಡುತ್ತಾರೆ. ಈ ಕೈಂಕರ್ಯವು ಪರಸ್ಪರ ಬಾಂಧವ್ಯ, ಸೌಹಾರ್ದ ವೃದ್ಧಿಸಿದೆ. ಈ ರೂಢಿಯಿಂದ ಒಳ್ಳೆಯದಾಗಿದೆ, ಆರೋಗ್ಯವು ಚೆನ್ನಾಗಿದೆ’ ಎಂದು ಮನದಾಳ ಹಂಚಿಕೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು