ನರಸಿಂಹರಾಜಪುರ: ಇಲ್ಲಿನ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಶನಿವಾರ ನಡೆದ ಲೋಕ ಅದಾಲತ್‌ನಲ್ಲಿ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದ ದಂಪತಿ ರಾಜಿ ಸಂಧಾನದ ಮೂಲಕ ಮತ್ತೆ ಒಂದಾದರು.
ಕೂಗ್ರೆ ಮೂಲದ ಜ್ಯೋತಿ ಹಾಗೂ ನಾಗರಾಜ್ ದಂಪತಿ 2019ರಲ್ಲಿ ವಿವಾಹ ವಿಚ್ಛೇಧನಕ್ಕೆ ಅರ್ಜಿ ಸಲ್ಲಿಸಿ ಪ್ರತ್ಯೇಕವಾಗಿ ವಾಸವಾಗಿದ್ದರು.ಜ್ಯೋತಿ ಅವರ ಪರ ಜಿ.ಮಮತಾ ಹಾಗೂ ನಾಗರಾಜ್ ಪರ ಬಿ.ಬಿ.ಆದಿತ್ಯ ವಕಾಲತ್ತು ವಹಿಸಿದ್ದರು. ಶನಿವಾರ ನಡೆದ ಲೋಕ ಅದಾಲತ್‌ನಲ್ಲಿ ನ್ಯಾಯಾಧೀಶರಾದ ಕೆ.ಟಿ.ರಘುನಾಥಗೌಡ ಹಾಗೂ ದಾಸರಿ ಕ್ರಾಂತಿಕಿರಣ್ ಅವರ ಸಮ್ಮುಖದಲ್ಲಿ ಜ್ಯೋತಿ ಹಾಗೂ ನಾಗರಾಜ್ ರಾಜಿ ಸಂಧಾನದ ಮೂಲಕ ಒಂದಾದರು.
ಸರ್ಕಾರಿ ವಕೀಲ ಗದಿಗೆಪ್ಪ ನೇಕಾರ, ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎಚ್.ಎ.ಸಾಜು, ವಕೀಲರಾದ ಎಸ್.ಎಸ್.ಸಂತೋಷ್ ಕುಮಾರ್, ಜಿ.ದಿವಾಕರ್, ಬಸವರಾಜು, ಸುಜಯ್ ಮತ್ತಿತರರು ಇದ್ದರು.