ನರಸಿಂಹರಾಜಪುರ: ಬಿಜೆಪಿ ಯುವಮೋರ್ಚಾ ಕಾರ್ಯಕರ್ತರಿಂದ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದ ರಸ್ತೆಯಲ್ಲಿ ಬೀಡಾಡಿ ದನಗಳಿಗೆ ರೇಡಿಯಂ ಕಾಲರ್ ಅಳವಡಿಸುವ ಕಾರ್ಯಾಚರಣೆ ಸೋಮವಾರ ನಡೆಯಿತು.

ತಾಲ್ಲೂಕು ಬಿಜೆಪಿ ಯುವ ಮೊರ್ಚಾ ಘಟಕದ ಅಧ್ಯಕ್ಷ ಪ್ರೀತಂ ಸುದ್ದಿಗಾರರೊಂದಿಗೆ ಮಾಹಿತಿ ನೀಡಿ, ರಾತ್ರಿ ವೇಳೆ ವಾಹನ ಚಾಲನೆ ಮಾಡುವಾಗ ರಸ್ತೆಯಲ್ಲಿ ಬೀಡು ಬೀಡುವ ದನಗಳು ಕಾಣದೆ ಅಪಘಾತಗಳು ಸಂಭವಿಸುತ್ತಿವೆ. ಈ ಹಿನ್ನಲೆಯಲ್ಲಿ ಮಾಜಿ ಶಾಸಕ ಡಿ.ಎನ್.ಜೀವರಾಜ್ ಹಾಗೂ ತಾಲ್ಲೂಕು ಬಿಜೆಪಿ ಘಟಕದ ಅಧ್ಯಕ್ಷ ವಿ.ನಿಲೇಶ್ ಅವರ ಸೂಚನೆಯಂತೆ ಹಸುಗಳಿಗೆ ರೇಡಿಯಂ ಕಾಲರ್ ಅಳವಡಿಸಲಾಗಿದೆ. ರೇಡಿಯಂ ಕಾಲರ್ ಅಳವಡಿಕೆಯಿಂದ ವಾಹನಗಳ ಬೆಳಕು ಬಿದ್ದಾಗ ದನಗಳಿಗೆ ಅಳವಡಿಸಿರುವ ರೇಡಿಯಂ ಕಾಲರ್ ಹೊಳೆಯುವುದರಿಂದ ದನಗಳು ಗೋಚಕರವಾಗಿ ಅಪಘಾತ ತಪ್ಪಲಿದೆ. ಮುಂದಿನ ದಿನಗಳಲ್ಲಿ ಶೃಂಗೇರಿ ಕ್ಷೇತ್ರದ ಎಲ್ಲಾ ಕಡೆ ಬಿಜೆಪಿ, ಬಜರಂಗದಳ ಹಾಗೂ ಸಂಘ ಪರಿವಾರದ ಸಹಕಾರದೊಂದಿಗೆ ದನಗಳಿಗೆ ರೇಡಿಯಂ ಕಾಲರ್ ಅಳವಡಿಸುವ ಕಾರ್ಯ ಕೈಗೊಳ್ಳಲಾಗುವುದು ಎಂದರು.

ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತ, ನಾಗಲಾಪುರ ಗ್ರಾಮದ ಮುಂಡೊಳ್ಳಿ, ಹೊಸಕೆರೆ, ಹೊನ್ನೆಕೂಡಿಗೆ ಗ್ರಾಮ ಪಂಚಾಯಿತಿಯ ವರ್ಕಾಟೆ,ಹಂತುವಾನಿ ಮುಂತಾದ ಗ್ರಾಮಗಳ ವ್ಯಾಪ್ತಿ ಸೇರಿ 23 ದನಗಳಿಗೆ ರೇಡಿಯಂ ಕಾಲರ್ ಅಳವಡಿಸಲಾಯಿತು.

ರೇಡಿಯಂ ಕಾಲರ್ ಅಳವಡಿಸುವ ಕಾರ್ಯದಲ್ಲಿ ತಾಲ್ಲೂಕು ಬಿಜೆಪಿ ಯುವ ಮೋರ್ಚಾ ಘಟಕದ ಅಧ್ಯಕ್ಷ ಪ್ರೀತಂ, ಬಿಜೆಪಿ ನಗರ ಘಟಕದ ಅಧ್ಯಕ್ಷ ಸುರಭಿರಾಜೇಂದ್ರ, ಮುಖಂಡರಾದ ದ್ವಾರಮಕ್ಕಿ ಅಶ್ವಿನ್, ಕೆ.ಟಿ.ಮಂಜುನಾಥ್, ಪ್ರಸಾದ್ ಸೇರಿ ಬಿಜೆಪಿ, ಬಜರಂಗದಳದ ಕಾರ್ಯಕರ್ತರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.