ನರಸಿಂಹರಾಜಪುರ: ಹಲವು ದಿನಗಳಿಂದ ತಾಲ್ಲೂಕು ವ್ಯಾಪ್ತಿಯಲ್ಲಿ ಆನೆಗಳ ಹಾವಳಿ ಹೆಚ್ಚಾಗಿದ್ದು, ಇವುಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಬಳಿ ಸೌಲಭ್ಯಗಳ ಕೊರತೆಯಿದ್ದು, ಒದಗಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಸರ್ಕಾರವು ವಲಯ ಅರಣ್ಯ ವಿಭಾಗಕ್ಕೆ ಸೌಲಭ್ಯ ಒದಗಿಸದೆ ಭದ್ರಾ ವನ್ಯಜೀವಿ ವಿಭಾಗಕ್ಕೆ ಒದಗಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಪ್ರಮುಖವಾಗಿ ಆನೆ ಹಾವಳಿ ಹೆಚ್ಚಾಗಿರುವ ಬಹುತೇಕ ಗ್ರಾಮಗಳ ಗಡಿ ಭಾಗಗಳು ಭದ್ರಾ ಹಿನ್ನೀರಿನಿಂದ ಆವೃತವಾಗಿವೆ. ಈ ಗ್ರಾಮಗಳೆಲ್ಲಾ ನರಸಿಂಹರಾಜಪುರ ಹಾಗೂ ಚಿಕ್ಕಗ್ರಹಾರ ವಲಯ ಅರಣ್ಯ ವ್ಯಾಪ್ತಿಗೆ ಬರುತ್ತವೆ. ಈ ಭಾಗಗಳಿಗೆ ತುರ್ತಾಗಿ ರಸ್ತೆ ಮಾರ್ಗದ ಮೂಲಕ ಹೋಗಬೇಕಾದರೆ ಸುತ್ತಿ ಬಳಸಿ ಹೋಗಬೇಕಾಗುತ್ತದೆ. ಹಾಗಾಗಿ ಈ ಅರಣ್ಯ ವಿಭಾಗಕ್ಕೆ ಭದ್ರಾ ಹಿನ್ನೀರಿನ ಮೂಲಕ ಶೀಘ್ರವಾಗಿ ತಲುಪಲು ಯಾತ್ರೀಕೃತ ದೋಣಿಯ ಅವಶ್ಯಕತೆಯಿತ್ತು.

ಆದರೆ ಸರ್ಕಾರ ₹12 ಲಕ್ಷ ವೆಚ್ಚದ ಯಾಂತ್ರೀಕೃತ ದೋಣಿಯನ್ನು ಭದ್ರಾ ವನ್ಯಜೀವಿ ವಿಭಾಗಕ್ಕೆ ನೀಡಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಭದ್ರಾ ವನ್ಯಜೀವಿ ವಿಭಾಗದಲ್ಲಿ ಈಗಾಗಲೇ ಯಾಂತ್ರೀಕೃತ ದೋಣಿ ಇದೆ. ಆನೆಗಳು ಗ್ರಾಮಗಳ ವ್ಯಾಪ್ತಿಯಲ್ಲಿ ಬೀಡು ಬಿಟ್ಟಾಗ ವನ್ಯಜೀವಿ ವಿಭಾಗದವರು ಅವುಗಳ ಹಾವಳಿ ತಡೆಗಟ್ಟಲು, ಅಭಯಾರಣ್ಯದತ್ತ ಅವುಗಳನ್ನು ಓಡಿಸಲು ಸ್ಪಂದಿಸಲೇ ಇಲ್ಲ ಎಂಬುದು ರೈತರ ಆರೋಪ.

ನರಸಿಂಹರಾಜಪುರ ವಲಯ ಅರಣ್ಯ ವಿಭಾಗದವರು ಭದ್ರಾ ಹಿನ್ನೀರಿನ ದಡದ ಗ್ರಾಮಗಳ ವ್ಯಾಪ್ತಿಯಲ್ಲಿ ಬೀಡು ಬಿಡುವ ಕಾಡಾನೆಗಳನ್ನು ತುರ್ತು ಸಂದರ್ಭದಲ್ಲಿ ಓಡಿಸಲು ಸ್ಥಳಕ್ಕೆ ತಲುಪಬೇಕಾದರೆ ಮೀನುಗಾರರು ಬಳಸುವ ತೆಪ್ಪಗಳನ್ನು ಅವಲಂಬಿಸಬೇಕು. ತೆಪ್ಪಗಳನ್ನು ಬಳಸುವುದು ಜೀವಕ್ಕೆ ಅಪಾಯ ಒಡ್ಡಿದಂತಾಗುತ್ತದೆ. ಇಂತಹ ಸಂದರ್ಭದಲ್ಲಿ ಯಾಂತ್ರೀಕೃತ ದೋಣಿ ಲಭ್ಯವಿದ್ದರೆ ಅನುಕೂಲವಾಗುತ್ತಿತ್ತು.

ತಾಲ್ಲೂಕಿನ ಬಾಳೆಕೊಪ್ಪ, ಮಾಕೋಡು, ಗುಳದಮನೆ, ಹಾಗಲಮನೆ ಗ್ರಾಮಗಳನ್ನು ಭದ್ರಾ ಹಿನ್ನೀರಿನ ಮೂಲಕ ದೋಣಿಗಳ ಸಹಾಯದಿಂದ ಒಂದೆರೆಡು ಕಿ.ಮೀ.ಗಳಲ್ಲಿ ತಲುಪಬಹುದು. ವಾಹನದಲ್ಲಿ ತಲುಪಲು ಸಾಕಷ್ಟು ದೂರ, ಸಮಯ ತಗಲುತ್ತದೆ. ಇದ್ಯಾವುದರ ಪರಿವೇ ಜನಪ್ರತಿನಿಧಿಗಳಿಗೆ ಇಲ್ಲದಿರುವುದು ದುರಂತದ ಸಂಗತಿ.

ಅರಣ್ಯ ಇಲಾಖೆ ತುರ್ತು ಸಂದರ್ಭದಲ್ಲೂ ಅಗ್ನಿಶಾಮಕ ಇಲಾಖೆಯ ಸೇವೆ ಪಡೆಯಲು ವಾಹನದ ಕೊರತೆಯಿಂದ ಸಾಧ್ಯವಾಗುತ್ತಿಲ್ಲ ಎಂಬುದು ಗ್ರಾಮಸ್ಥರ ಅಭಿಪ್ರಾಯ. ಭದ್ರಾ ವನ್ಯಜೀವಿ ವಿಭಾಗಕ್ಕೆ ಯಾಂತ್ರೀಕೃತ ದೋಣಿಯನ್ನು ಕೊಡುವುದಾಗಿದ್ದರೆ ಅಲ್ಲಿಯೇ ಅದನ್ನು ಹಸ್ತಾಂತರಿಸಬಹುದಾಗಿತ್ತು. ವಲಯ ಅರಣ್ಯ ವಿಭಾಗಕ್ಕೆ ಯಾಂತ್ರೀಕೃತ ದೋಣಿ ಹಸ್ತಾಂತರಿಸುವುದಾಗಿ ಪ್ರಚಾರ ಮಾಡಿದ್ದ ಸರ್ಕಾರ ಅದನ್ನು ನೀಡಿದ್ದು ಮಾತ್ರ ವನ್ಯಜೀವಿ ವಿಭಾಗಕ್ಕೆ ಎಂದು ಗ್ರಾಮಸ್ಥರು ದೂರುತ್ತಾರೆ.

ಗ್ರಾಮಗಳ ವ್ಯಾಪ್ತಿಯಲ್ಲಿನ ತೋಟಗಳಿಗೆ ದಾಳಿ ಮಾಡಿ ಬೆಳೆ ನಾಶ ಮಾಡುವ ಆನೆಗಳು, ಇತರೆ ಪ್ರಾಣಿಗಳು ಸಹ ಭದ್ರಾ ವನ್ಯಜೀವಿ ವಿಭಾಗಕ್ಕೆ ಸೇರಿದ್ದರೂ ಸಹ ಅವುಗಳನ್ನು ಅಭಯಾರಣ್ಯದತ್ತ ಓಡಿಸಲು ಕ್ರಮ ಕೈಗೊಂಡಿಲ್ಲ ಎಂಬುದು ಸಾರ್ವಜನಿಕರ ಆರೋಪ. ತಮ್ಮ ಅವಶ್ಯಕತೆಗಳ ಬಗ್ಗೆ ಮೇಲಧಿಕಾರಿಗಳಿಗೆ ಬಹಿರಂಗವಾಗಿ ಹೇಳದ ಸ್ಥಿತಿ ಅರಣ್ಯ ಅಧಿಕಾರಿಗಳದ್ದಾಗಿದೆ. ಭದ್ರಾ ಅಭಯಾರಣ್ಯಕ್ಕೆ ಯಾಂತ್ರೀಕೃತ ದೋಣಿ ನೀಡಿರುವುದಕ್ಕೆ ಗ್ರಾಮಸ್ಥರ ಆಕ್ಷೇಪಣೆ ಇರುವುದು ಆದ್ಯತೆಯ ಬಗ್ಗೆ ಮಾತ್ರವಾಗಿದೆ.

ಆನೆ ದಾಳಿ ನಡೆದಾಗ ಸರ್ಕಾರ ನೀಡುವ ಭರವಸೆಯೇ ಬೇರೆ. ಆಮೇಲೆ ನಡೆದುಕೊಳ್ಳುವುದೇ ಬೇರೆ. ಆನೆ ಹಾವಳಿ ಹೆಚ್ಚಾಗಿರುವ ಭಾಗಕ್ಕೆ ಅವಶ್ಯಕವಾಗಿರುವ ಯಾಂತ್ರೀಕೃತ ದೋಣಿ ನೀಡದಿರುವ ಸರ್ಕಾರದ ಕ್ರಮ ಸರಿಯಲ್ಲ. ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಈ ನಿಟ್ಟಿನಲ್ಲಿ ಗಮನ ಹರಿಸಬೇಕು. ಸರ್ಕಾರ ಇದೇ ಪ್ರವೃತ್ತಿ ಮುಂದುವರೆಸಿದರೆ ಹೋರಾಟ ರೂಪಿಸಲಾಗುವುದು ಎಂದು ಮಲೆನಾಡು ನಾಗರಿಕ ರೈತ ಹಿತರಕ್ಷಣಾ ಸಮಿತಿ ಶೃಂಗೇರಿ ಕ್ಷೇತ್ರದ ಅಧ್ಯಕ್ಷ ಎಂ.ಎನ್. ನಾಗೇಶ್ ತಿಳಿಸಿದರು.

ಅರಣ್ಯ ಇಲಾಖೆಗೆ ಅವಶ್ಯಕವಾಗಿರುವ ಎರಡು ಜೀಪ್ ಕೊಡುವಂತೆ ಶಾಸಕರಿಗೆ ಮನವಿ ಸಲ್ಲಿಸಲಾಗಿದ್ದು ಕೊಡುವ ಭರವಸೆ ನೀಡಿದ್ದಾರೆ. ಆನೆ ಕಾರ್ಯಪಡೆಯ ಪ್ರತ್ಯೇಕ ತಂಡ ಕೊಡುವ ಭರವಸೆ ನೀಡಿದ್ದಾರೆ ಎಂದು ವಲಯ ಅರಣ್ಯಾಧಿಕಾರಿ ಪ್ರವೀಣ್ ಕುಮಾರ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.