ಅಜ್ಜಂಪುರ (ಚಿಕ್ಕಮಗಳೂರು): ಮಾರುಕಟ್ಟೆಯಲ್ಲಿ ಈರುಳ್ಳಿ ದರ ಕುಸಿದಿದ್ದು, ತಾಲ್ಲೂಕಿನ ಬೆಳೆಗಾರರು ಕಂಗಾಲಾಗಿದ್ದಾರೆ. ಬೆಳೆಗಾಗಿ ಮಾಡಿದ ಖರ್ಚು ಕೈಸೇರದೆ ರೈತರು ತೊಂದರೆಗೀಡಾಗಿದ್ದಾರೆ.

ತಾಲ್ಲೂಕಿನ ಪ್ರಧಾನ ಬೆಳೆಯಾಗಿರುವ ಈರುಳ್ಳಿ ಪ್ರಮುಖ ವಾಣಿಜ್ಯ ಬೆಳೆಯೂ ಆಗಿದೆ. ಈ ಆಧಾರದಲ್ಲಿಯೇ ರೈತರ ವ್ಯವಹಾರ, ಅಭಿವೃದ್ಧಿ ನಿಂತಿದೆ.

ಹೊಲ ಹಸನು, ಬಿತ್ತನೆ ಬೀಜ, ಗೊಬ್ಬರ, ಬೇಸಾಯ, ಕಳೆ ತೆಗೆಸುವುದು, ಕ್ರಿಮಿ-ಕೀಟ-ಕಳೆನಾಶಕ ಸಿಂಪಡಿಸುವಿಕೆ, ಈರುಳ್ಳಿ ಕೀಳುವುದು, ಹಸನುಗೊಳಿಸುವುದು, ಗಾತ್ರದ ಆಧಾರದಲ್ಲಿ ವಿಂಗಡಣೆ, ಚೀಲಕ್ಕೆ ತುಂಬುವುದು, ಮಾರುಕಟ್ಟೆಗೆ ಕೊಂಡೊಯ್ಯುವುದು ಸೇರಿ ಪ್ರತಿ ಕೆಜಿಗೆ ₹ 10ರಿಂದ 15 ತಗುಲಿದೆ. ಮಾರುಕಟ್ಟೆಯಲ್ಲಿ ಈರುಳ್ಳಿ ದರ ₹ 3ರಿಂದ 12 ಇದೆ. ಈ ಬಾರಿ ನಷ್ಟವೇ ಅಧಿಕವಾಗಿದೆ ಎಂದು ರೈತ ಮಹೇಶ್ವರಯ್ಯ ಅಸಹಾಯಕತೆ ವ್ಯಕ್ತಪಡಿಸಿದರು.

ಸಾಲ ಮಾಡಿ ಬೆಳೆ ಮಾಡಿದೆ. ಬೆಳೆ ಮಾರಾಟ ಮಾಡಿ, ಸಾಲ ತೀರಿಸಬಹುದೆಂಬ ನಿರೀಕ್ಷೆ ಇತ್ತು. ಆದರೆ, ದರ ಕುಸಿತವು ನಿರೀಕ್ಷೆಯನ್ನೇ ಹುಸಿಗೊಳಿಸಿತು. ಈಗ ದಿಕ್ಕೇ ತೋಚುತ್ತಿಲ್ಲ ಎಂದು ಈರುಳ್ಳಿ ಬೆಳೆಗಾರ ನಾರಣಾಪುರದ ವೀರಭದ್ರಪ್ಪ ಅಳಲು ತೋಡಿಕೊಂಡರು.

ಭೂಮಿಯಿಂದ ಈರುಳ್ಳಿ ಗಡ್ಡೆ ಹೊರ ತೆಗೆದು ತಿಂಗಳಾಯಿತು. ದರ ಕುಸಿದಿರುವುದರಿಂದ ಈರುಳ್ಳಿ ಹಸನುಗೊಳಿಸಿಲ್ಲ. ಇದ್ದಲ್ಲಿಯೇ ಅರ್ಧಕ್ಕಿಂತ ಹೆಚ್ಚು ಗಡ್ಡೆ ಕೊಳೆತಿವೆ ಎಂದು ಶಿವನಿ ರೈಲು ಸ್ಟೇಷನ್ನ ಬಸವರಾಜಪ್ಪ ಹೇಳಿದರು.

ಮಾರುಕಟ್ಟೆಯಲ್ಲಿ ಗುಣಮಟ್ಟದ ಆಧಾರದಲ್ಲಿ ಈರುಳ್ಳಿ ದರ ನಿಗದಿಯಾಗುತ್ತದೆ. ಅದು ಬಣ್ಣ, ಗಾತ್ರ, ಗಟ್ಟಿ, ಸಿಪ್ಪೆಯ ಹೊಳಪು, ಲಕ್ಷಣದ ಮೇಲೆ ದರ ಬದಲಾಗುತ್ತದೆ. ಸದ್ಯ ₹ 3ರಿಂದ 12 ಬೆಲೆ ಇದೆ. ಕಳೆದ ಬಾರಿಗೆ ಹೋಲಿಸಿದರೆ ಕಡಿಮೆ ಆಗಿದೆ ಎನ್ನುತ್ತಾರೆ ಈರುಳ್ಳಿ ವ್ಯಾಪಾರಿ ನಟರಾಜ್.

‘ತಲಾ ₹ 30 ಸಾವಿರದಂತೆ 23 ಎಕರೆ ಭೂಮಿಯನ್ನು ಗುತ್ತಿಗೆ ಪಡೆದು ಈರುಳ್ಳಿ ಕೃಷಿ ಮಾಡಿದ್ದೇನೆ. 3,500 ಚೀಲ ಈರುಳ್ಳಿ ಬೆಳೆದಿದ್ದೇನೆ. ದರ ಕುಸಿತವಾಗಿರುವುದರಿಂದ ದಾಸ್ತಾನು ಇರಿಸಿದ್ದೇನೆ. ಇದುವರೆಗೆ 20 ಲಕ್ಷ ಖರ್ಚು ಮಾಡಿದ್ದೇನೆ’ ಎನ್ನುತ್ತಾರೆ ಹೆಬ್ಬೂರಿನ ಕೃಷಿಕ ಮಧು.

ಆರ್ಥಿಕ ಸಂಕಷ್ಟಕ್ಕೆ ಸಿಲಿಕಿರುವ ರೈತರ ನೆರವಿಗೆ ಸರ್ಕಾರ ಧಾವಿಸಬೇಕು. ಈರುಳ್ಳಿಗೆ ಕನಿಷ್ಠ ಮಾರುಕಟ್ಟೆ ದರ ನಿಗದಿಗೊಳಿಸಬೇಕು ಎಂದು ಬೆಳೆಗಾರರು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.