ಚಿಕ್ಕಮಗಳೂರು: ತರೀಕೆರೆಯಲ್ಲಿ ಆಸ್ತಿ ವಿಷಯಕ್ಕೆ ಸಂಬಂಧಿಸಿದಂತೆ ಮೂವರು ಅಕ್ಕಂದಿರೇ ಸೇರಿ ತಮ್ಮನ ಕಣ್ಣಿಗೆ ಕಾರದ ಪುಡಿ ಎರಚಿ ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಿದ್ದಾರೆ.
ಪಟ್ಟಣದ ಚೌಡೇಶ್ವರಿ ಬಡಾವಣೆಯ ರಾಘವೇಂದ್ರ(43) ಮೃತಪಟ್ಟವರು. ಆಸ್ತಿ ವಿಷಯಕ್ಕೆ ಸಂಬಂಧಿಸಿದಂತೆ ಆಗಾಗ ಕುಟುಂಬದಲ್ಲಿ ಜಗಳ ನಡೆಯುತ್ತಿತ್ತು. ರಾಘವೇಂದ್ರ ಅವರು ಗುರುವಾರ ಮನೆಯಲ್ಲಿದ್ದಾಗ ಕಣ್ಣಿಗೆ ಕಾರದ ಪುಡಿ ಎರಚಿದ ಮೂವರು ಸಹೋದರಿಯರು ಮತ್ತು ಒಬ್ಬ ಭಾವ ಮಾರಕಾಸ್ತ್ರಗಳಿಂದ ಕೊಚ್ಚಿದ್ದಾರೆ.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ ಅಮಟೆ ಭೇಟಿ ನೀಡಿ ಪರಿಶೀಲಿಸಿದರು. ಮೃತ ರಾಘವೇಂದ್ರ ಅವರ ಅಕ್ಕಂದಿರಾದ ಸುಮಾ, ಸುಧಾ, ರೇಣುಕಾ, ಭಾವ ಸಿದ್ದರಾಮಪ್ಪ ಅವರನ್ನು ತರೀಕೆರೆ ಪೊಲೀಸರು ಬಂಧಿಸಿದ್ದಾರೆ.