ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಣ್ಯ ಕಾಯ್ದೆ; ಬೀದಿಗಿಳಿದು ಹೋರಾಟ

ಮೂಡಬಾಗಿಲು: ರೈತರ ಸಮಾಲೋಚನಾ ಸಭೆಯಲ್ಲಿ ನಿರ್ಧಾರ
Last Updated 3 ಅಕ್ಟೋಬರ್ 2020, 8:02 IST
ಅಕ್ಷರ ಗಾತ್ರ

ಮೂಡಬಾಗಿಲು (ಎನ್.ಆರ್.ಪುರ): ರೈತರಿಗೆ ಮಾರಕವಾಗುತ್ತಿರುವ ಕರ್ನಾಟಕ ಅರಣ್ಯಕಾಯ್ದೆ 1963 ರ ಕಲಂ 4 (1) ಅಧಿಸೂಚನೆ, ಹುಲಿ ಯೋಜನೆಯ ಬಫರ್‌ ಝೋನ್, ಪರಿಸರ ಸೂಕ್ಷ್ಮ ವಲಯಗಳನ್ನು ಕೈ ಬಿಡುವಂತೆ ಒತ್ತಾಯಿಸಿ ಮುಂದಿನ ದಿನಗಳಲ್ಲಿ ಬೀದಿಗಿಳಿದು ಹೋರಾಟ ಮಾಡಲು ಬಾಳೆ ಗ್ರಾಮ ಪಂಚಾಯಿತಿಯ 5 ಗ್ರಾಮಗಳ ರೈತರು ತೀರ್ಮಾನ ಕೈಗೊಂಡಿದ್ದಾರೆ.

ಇಲ್ಲಿನ ಶಾಲಾ ಆವರಣದಲ್ಲಿ ಶುಕ್ರವಾರ ರೈತರ ಸಮಾಲೋಚನಾ ಸಭೆಯಲ್ಲಿ ಈ ನಿರ್ಧಾರ ಕೈಗೊಂಡಿದ್ದಾರೆ.

ಅಧ್ಯಕ್ಷತೆ ವಹಿಸಿದ್ದ ತಾಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎನ್.ನಾಗೇಶ್ ಮಾತನಾಡಿ, ‘ಅರಣ್ಯಕಾಯ್ದೆ 1963 ರ ಅಡಿ 4 (1) ಅಧಿಸೂಚನೆ ಜಾರಿಯಾದರೆ ರೈತರಿಗೆ, ಕೃಷಿ ಕಾರ್ಮಿಕರಿಗೆ, ವರ್ತಕರಿಗೂ ತೊಂದರೆಯಾಗುತ್ತದೆ. ಇದರ ವಿರುದ್ಧ ಹೋರಾಟ ಮಾಡಲು ಈಗಾಗಲೇ ಪಕ್ಷಾತೀತವಾಗಿ ರೈತ ಹಿತರಕ್ಷಣಾ ಸಮಿತಿ ರಚನೆಯಾಗಿದೆ. ರೈತರು ಕಡೂರಿನಲ್ಲಿರುವ ಅರಣ್ಯ ವ್ಯವಸ್ಥಾಪನಾ ಅಧಿಕಾರಿಗೆ ಆಕ್ಷೇಪಣೆ ಅರ್ಜಿ ಸಲ್ಲಿಸುವಾಗ ವೈಯಕ್ತಿಕವಾಗಿ ಆಕ್ಷೇಪಣೆ ಸಲ್ಲಿಸಬೇಕು’ ಎಂದರು.

ರೈತ ಹಿತರಕ್ಷಣಾ ಸಮಿತಿ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ್ ಮಾತ ನಾಡಿ, ‘2011ರಲ್ಲಿ ಅಳೇಹಳ್ಳಿ ಗ್ರಾಮ ವನ್ನು ಬಫರ್ ಝೋನ್‌ಗೆ ಸೇರಿಸ ಲಾಗಿತ್ತು. ತಾಲ್ಲೂಕಿನ 10 ಗ್ರಾಮ ಗಳು ಸೂಕ್ಷ್ಮ ವಲಯ ವ್ಯಾಪ್ತಿಗೆ ಬರಲಿದೆ. ಪ್ರಭಾವಿ ರಾಜಕಾರಣಿಗಳು ಅರಣ್ಯ ಇಲಾಖೆಯ ಪರವಾಗಿ ಮಾತನಾಡು ತ್ತಾರೆ. ಪ್ರಸ್ತುತ ರೈತರೇ ಬೀದಿಗಳಿದು ಹಾಗೂ ಕಾನೂನು ಹೋರಾಟಕ್ಕೆ ಮುಂದಾಗಬೇಕಾಗಿದೆ’ ಎಂದರು.

ರೈತ ಹಿತರಕ್ಷಣಾ ಸಮಿತಿ ಮುಖಂಡ ರತ್ನಾಕರ್ ಮಾತನಾಡಿ, ‘ಬ್ರಿಟಿಷರು 1914 ರಲ್ಲಿ ತಯಾರಿಸಿದ ಗ್ರಾಮಗಳ ನಕಾಶೆ ಇನ್ನೂ ಚಾಲ್ತಿ ಯಲ್ಲಿದೆ. ಬೆಂಗಳೂರಿನಲ್ಲಿ ಕುಳಿತ ಪರಿಸರವಾದಿಗಳಿಗೆ ಮಲೆನಾಡಿನ ನೆಲದ ಸೊಡಗಿನ ಪರಿಚಯ ಇರುವು ದಿಲ್ಲ. ವನ್ಯಜೀವಿ ಕಾಯ್ದೆಗಳೇ ಬಫರ್ ಝೂನ್‌ಗೂ ಅನ್ವಯಿಸಲಿದೆ. ರೈತರ ಹೋರಾಟ ಸಾತ್ವಿಕ ಹೋರಾ ಟವಾಗಲಿದೆ. ನ್ಯಾಯಾಧೀಕರಣ ಮಂಡಳಿ ರಚನೆ ಮಾಡುವಾಗ ಪ್ರಗತಿ ಪರ ಕೃಷಿಕರನ್ನು ಪ್ರತಿನಿಧಿಗಳನ್ನಾಗಿ ಸೇರಿಬೇಕು’ ಎಂದು ಆಗ್ರಹಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಪಿ.ಆರ್.ಸದಾಶಿವ ಮಾತನಾಡಿ, ‘ಮಲೆನಾಡಿನ ಪರಿಸರ, ಸಮಸ್ಯೆಗಳ ಬಗ್ಗೆ ಗಾಡ್ಗೀಲ್, ಕಸ್ತೂರಿ ರಂಗನ್‍ ಅಂತವರು ಸಮಿತಿ ಅಧ್ಯಕ್ಷರಾಗುತ್ತದೆ. ನಿಜವಾದ ರೈತರಿಗೆ ಅವಕಾಶವೇ ಇಲ್ಲವಾಗಿದೆ. ಪರಿಸರ ಸಂರಕ್ಷಣೆ ಮಾಡುತ್ತೇವೆ ಎಂದು ರೈತರನ್ನು ಬಲಿಪಶು ಮಾಡಲಾಗುತ್ತದೆ. ಮುಂದಿನ ದಿನಗಳಲ್ಲಿ ರೈತರೊಂದಿಗೆ ಜನಪ್ರತಿನಿಧಿಗಳು ಸೇರಿ ಹೋರಾಟ ರೂಪಿಸಬೇಕಾಗಿದೆ’ ಎಂದರು.

ತಾಲ್ಲೂಕು ಪಂಚಾಯಿತಿ ಸದಸ್ಯೆ ಮೀನಾಕ್ಷಿ ಕಾಂತರಾಜ್ ಮಾತನಾಡಿ, ‘ಪ್ರಸ್ತುತ ರೈತರು ಒಗ್ಗಟ್ಟಾಗಿ ಹೋರಾಟ ಮಾಡಬೇಕಾಗಿದೆ. ರೈತರು ಬೆಳೆದ ಬೆಳೆಯನ್ನು ಕಾಡುಪ್ರಾಣಿಗಳು ನಾಶ ಮಾಡುತ್ತಿದೆ. ರೈತರಿಂದ ಪಶ್ಚಿಮ ಘಟ್ಟವಾಗಲಿ, ಮಲೆನಾಡು, ಪರಿಸರಕ್ಕೆ ಧಕ್ಕೆಯಾಗಿಲ್ಲ. ಅರಣ್ಯ ಇಲಾಖೆಯವರು ನೀಲಗಿರಿ, ಅಕೇಶಿಯಾ ಗಿಡ ನೆಟ್ಟು ಪರಿ ಸರಕ್ಕೆ ಮಾರಕವಾಗಿದ್ದಾರೆ’ ಎಂದರು.

ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಸುಲೋಚನಾ, ಮಾಜಿ ಸದಸ್ಯರಾದ ನಾರಾಯಣ ಪೂಜಾರಿ, ರಾಯಪ್ಪ ಗೌಡ, ರೈತ ಹಿತರಕ್ಷಣಾ ಸಮಿತಿ ಸದಸ್ಯರಾದ ಶ್ರೀನಾಥ್, ರವೀಂದ್ರ, ಬೋಬೇಗೌಡ, ನಾಗರಾಜ್‍ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT