ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಕ್ಕಮಗಳೂರು | ಮನೆಗೆ ನುಗ್ಗಿದ ನೀರು: ರಾತ್ರಿಯಿಡೀ ಜಾಗರಣೆ

‘ಕಾಲುವೆ, ನೀರು ಹರಿಯುವ ಮಾರ್ಗದ ಒತ್ತುವರಿ ತೆರವಿಗೆ ಕ್ರಮ‌: ಉಪವಿಭಾಗಾಧಿಕಾರಿ
Published : 16 ಆಗಸ್ಟ್ 2024, 13:21 IST
Last Updated : 16 ಆಗಸ್ಟ್ 2024, 13:21 IST
ಫಾಲೋ ಮಾಡಿ
Comments

ಅಜ್ಜಂಪುರ: ಮಳೆ ನೀರು ಹರಿದು ಜನರು ತೊಂದರೆ ಅನುಭವಿಸಿದ್ದ ಪಟ್ಟಣದ ಹೊಸದುರ್ಗ ಮುಖ್ಯ ರಸ್ತೆಯ ಹಲವು ಮನೆಗಳಿಗೆ ಉಪ ವಿಭಾಗಾಧಿಕಾರಿ ಕಾಂತರಾಜ್ ಶುಕ್ರವಾರ ಬೇಟಿ ನೀಡಿ ಪರಿಶೀಲಿಸಿದರು.

ಗುರುವಾರ ರಾತ್ರಿ ಏಕಾಏಕಿ ಮಳೆ ನೀರು ಮನೆಗೆ ನುಗ್ಗಿತ್ತು. ಮನೆಯಲ್ಲಿದ್ದ ಹಾಸಿಗೆ, ಹೊದಿಗೆ ತೊಯ್ದು, ದಿನಸಿ ವಸ್ತುಗಳು ಹಾಳಾಗಿವು. ಮನೆಯಿಂದ ನೀರು ಹೊರ ಹಾಕುವುದೇ ಸವಾಲಾಯಿತು. ರಾತ್ರಿಯೆಲ್ಲ ನಿದ್ರೆಯಿಲ್ಲದೇ ಪರದಾಡುವಂತಾಯಿತು. ಮಳೆ ಬಂದಾಗಲೆಲ್ಲಾ ಈ ಸಮಸ್ಯೆ ಅನುಭವಿಸುತ್ತಿದ್ದೇವೆ ಎಂದು ನಿವಾಸಿ ಜಯಮ್ಮ ಅಳಲು ತೋಡಿಕೊಂಡರು.

ಕೆಪಿಸಿಸಿ ಸದಸ್ಯ ಜಿ. ನಟರಾಜ್ ಮಾತನಾಡಿ, ‘ಹೊಸದಾಗಿ ನಿರ್ಮಾಣಗೊಂಡಿರುವ ಲೇಔಟ್‌ಗೆ ಸಂಪರ್ಕ ಕಲ್ಪಿಸಿರುವ ಸೇತುವೆ ಅವೈಜ್ಞಾನಿಕವಾಗಿದೆ. ಇದರಿಂದ ಮಳೆ ನೀರು ಸರಾಗವಾಗಿ ಹರಿದು ಹೋಗದೆ ಮನೆಗಳಿಗೆ ನುಗ್ಗುತ್ತಿದೆ. ಕೂಡಲೇ ಸೇತುವೆ ತೆರವುಗೊಳಿಸಿ, ನೀರಿನ ಸರಾಗ ಹರಿವಿಗೆ ಅನುಕೂಲವಾಗುವಂತೆ ಪುನರ್ ನಿರ್ಮಿಸಬೇಕು’ ಎಂದು ಮನವಿ ಮಾಡಿದರು.

ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ತಿಪ್ಪೇಶ್ ಮಡಿವಾಳ್ ಮಾತನಾಡಿ, ‘ಕೆಲವರು ಕೋರ್ಟ್‌ಗೆ ಹೋದ ಪರಿಣಾಮ, ರೈಲ್ವೆ ಗೇಟ್‌ವರೆಗೆ ರಸ್ತೆ ಅಭಿವೃದ್ದಿ ಸ್ಥಗಿತಗೊಂಡಿದೆ. ಇದರಿಂದ ಸಮಸ್ಯೆ ಆಗಿದೆ. ಕೋರ್ಟ್ ಮೆಟ್ಟಿಲೇರಿದವರು, ಸಾರ್ವಜನಿಕರ ಹಿತದೃಷ್ಠಿಯಿಂದ ಪ್ರಕರಣ ಹಿಂಪಡೆಯಬೇಕು. ರಸ್ತೆ ಚರಂಡಿ ನಿರ್ಮಾಣಕ್ಕೆ ಅವಕಾಶ ಮಾಡಿಕೊಡಬೇಕು. ಆಗ ಸಮಸ್ಯೆ ಪರಿಹಾರವಾಗಲಿದೆ’ ಎಂದು ಮನವಿ ಮಾಡಿದರು.

‘ಹೊಸ ಲೇಔಟ್‌ನ ಸೇತುವೆಗೆ ಮರದ ದಿಮ್ಮಿ ಸಿಲುಕಿದ್ದರಿಂದ ನೀರಿನ ಹರಿವು ಸ್ಥಗಿತಗೊಂಡು, ಮನೆಗಳಿಗೆ ನುಗ್ಗಿತ್ತು. ಗುರುವಾರ ರಾತ್ರಿ ಜೆಸಿಬಿ ಬಳಸಿ, ನೀರು ಹೊರ ಹರಿಯಲು ವ್ಯವಸ್ಥೆ ಮಾಡಲಾಯಿತು’ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ರಮೇಶ್ ತಿಳಿಸಿದರು.

‘ಹೊಸ ಲೇಔಟ್ ಹಾಗೂ ಕಾಲುವೆಯ ಸರ್ವೆ ನಡೆಸುವಂತೆ ಜತೆಗೆ ಅಜ್ಜಂಪುರ-ಬೀರೂರು ರಾಜ್ಯ ಹೆದ್ದಾರಿಯಲ್ಲಿ ನೀರು ಹರಿವಿನ ಕಾಲುವೆ ಅಥವಾ ನೀರು ಹರಿಯುವ ಸರ್ಕಾರಿ ಭೂಮಿ ಒತ್ತುವರಿ ಆಗಿದ್ದರೆ ಮಾಹಿತಿ ನೀಡಿ ಎಂದು ಉಪ ವಿಭಾಗಾಕಾರಿ ಕಾಂತರಾಜ್ ಸರ್ವೆ ಇಲಾಖೆಯವರಿಗೆ ಸೂಚಿಸಿದರು.

ಅಜ್ಜಂಪುರದಲ್ಲಿ ಮಳೆ ನೀರು ಮನೆಗಳಿಗೆ ಹರಿಯಲು ಕಾರಣವಾಗಿದ್ದ ಸೇತುವೆಯನ್ನು ಉಪ ವಿಭಾಗಾಧಿಕಾರಿ ಕಾಂತರಾಜ್ ಶುಕ್ರವಾರ ವೀಕ್ಷಿಸಿದರು.
ಅಜ್ಜಂಪುರದಲ್ಲಿ ಮಳೆ ನೀರು ಮನೆಗಳಿಗೆ ಹರಿಯಲು ಕಾರಣವಾಗಿದ್ದ ಸೇತುವೆಯನ್ನು ಉಪ ವಿಭಾಗಾಧಿಕಾರಿ ಕಾಂತರಾಜ್ ಶುಕ್ರವಾರ ವೀಕ್ಷಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT