ಬಾಳೆಹೊನ್ನೂರು: ‘ಇಲ್ಲಿನ ಆರೋಗ್ಯ ಕೇಂದ್ರದಲ್ಲಿ ನಡೆಸಿದ ಕೋವಿಡ್ ರ‍್ಯಾಪಿಡ್ ಆ್ಯಂಟಿಜೆನ್ ಪರೀಕ್ಷಾ ವರದಿ ಮತ್ತು ವೈದ್ಯರ ಸಲಹೆಯಂತೆ ವಿಶೇಷ ಚಿಕಿತ್ಸೆಗಾಗಿ ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ತೆರಳಿದ್ದು, ಭಕ್ತರು ಆತಂಕ ಪಡುವ ಕಾರಣವಿಲ್ಲ’ ಎಂದು ರಂಭಾಪುರಿ ಪೀಠದ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ.

‘ಜೀವಕ್ಕೆ ತೊಂದರೆಯಾಗುವಂತಹ ಯಾವ ಆರೋಗ್ಯ ಸಮಸ್ಯೆ ಇಲ್ಲದ ಕಾರಣ ಯಾರೂ ಆತಂಕ ಅಥವಾ ಉದ್ವೇಗಕ್ಕೆ ಒಳಗಾಗುವ ಅಗತ್ಯವಿಲ್ಲ. ಪೀಠದ ಪೂಜಾ ಕರ್ತೃತ್ವ ಶಕ್ತಿ ಬಹು ದೊಡ್ಡದು. ಉಜ್ಜಯಿನಿ ಸಿದ್ಧಲಿಂಗ ಸ್ವಾಮೀಜಿಯ ತಪೋಶಕ್ತಿ, ರಂಭಾಪುರಿ ವೀರಗಂಗಾಧರ ಸ್ವಾಮೀಜಿಯ ಶಿವಪೂಜಾ ಶಕ್ತಿ, ವೀರ ರುದ್ರಮುನಿದೇವ ಸ್ವಾಮೀಜಿಯ ವಾತ್ಸಲ್ಯಪೂರಿತವಾದ ಅಂತಃಕರಣದ ಆಶೀರ್ವಾದ ಇರುವ ತನಕ ಯಾವ ತೊಂದರೆಯಾಗುವುದಿಲ್ಲ ಎಂಬ ಆತ್ಮವಿಶ್ವಾಸವಿದೆ. ಶೀಘ್ರದಲ್ಲಿಯೇ ಗುಣಮುಖರಾಗಿ ಎಂದಿನಂತೆ ಭಕ್ತರ ಮಧ್ಯದಲ್ಲಿರುತ್ತೇವೆ. ಸಮಾನ ಪೀಠಾಚಾರ್ಯರ ಹಾರೈಕೆ, ನಾಡಿನ ಶ್ರೀಗಳ ಪ್ರಾರ್ಥನೆ, ಭಕ್ತ ಗಣ ತೋರುತ್ತಿರುವ ಪ್ರೀತಿ ವಿಶ್ವಾಸ ಮರೆಯುವಂತಿಲ್ಲ’ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.