ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪ | ಹರಿಹರಪುರದಲ್ಲಿ ನ. 11ಕ್ಕೆ ಸಮಾನ ಸಂಸ್ಕಾರ ಹಬ್ಬ

ಸನಾತನ ಹಿಂದೂ ಸಮಾಜ ಪರಿಷತ್ ಪ್ರಾಂತ್ಯ ಸಂಚಾಲಕ ವಾಸಪ್ಪ
Last Updated 9 ನವೆಂಬರ್ 2022, 6:32 IST
ಅಕ್ಷರ ಗಾತ್ರ

ಕೊಪ್ಪ: ‘ನ.11 ರಂದು ಹರಿಹರಪುರ ಮಠದ ಆವರಣದಲ್ಲಿ ಸಮಾನ ಸಂಸ್ಕಾರ ಸಮಾವೇಶ ‘ಸಂಸ್ಕಾರ ಹಬ್ಬ’ ಆಯೋಜಿಸಲಾಗಿದೆ’ ಎಂದು ಸನಾತನ ಹಿಂದೂ ಸಮಾಜ ಪರಿಷತ್‌ನ ಮಲೆನಾಡು ಪ್ರಾಂತ್ಯ ಸಂಚಾಲಕ ವಾಸಪ್ಪ ಕುಂಚೂರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ‘ಹಿಂದೂ ಧರ್ಮದವರನ್ನು ಒಗ್ಗೂಡಿಸುವ ಉದ್ದೇಶದಿಂದ ಹರಿಹರಪುರ ಸ್ವಾಮೀಜಿ ಮಾರ್ಗದರ್ಶನದೊಂದಿಗೆ ಹಬ್ಬ ಆಯೋಜಿಸಲಾಗಿದೆ’ ಎಂದರು.

ಪರಿಷತ್‌ನ ವ್ಯವಸ್ಥಾಪಕ ನಿರ್ದೇಶಕ ಡಾ.ದೀಪಕ್ ಮಾತನಾಡಿ, ‘ಸಂಸ್ಕಾರ ಹಬ್ಬವನ್ನು ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಉದ್ಘಾಟಿಸುವರು. 5 ಸಾವಿರ ವಿದ್ಯಾರ್ಥಿಗಳು, 15 ಸಾವಿರ ಮಾತೆಯರು ಭಗವದ್ಗೀತೆಯ ಭಕ್ತಿ ಯೋಗದ ಶ್ಲೋಕಗಳನ್ನು ಪಾರಾಯಣ ಮಾಡಲಿದ್ದಾರೆ. 25 ಸಾವಿರಕ್ಕೂ ಹೆಚ್ಚು ಮಂದಿ ಆಗಮಿಸಲಿದ್ದಾರೆ’ ತಿಳಿಸಿದರು.

ಪರಿಷತ್ ನ ಜಿಲ್ಲಾ ಸಹ ಸಂಚಾಲಕ ಚೇತನ್ ಕುಮಾರ್ ಮಾತನಾಡಿ, ‘ಸಂಕಲ್ಪ ಮುಷ್ಟಿ ಅಕ್ಕಿ ಕಾಣಿಕೆಯನ್ನು 22 ಸಾವಿರ ಮನೆಗಳಿಂದ ಸಂಗ್ರಹಿಸಲಾಗಿದ್ದು, ಧರ್ಮಸ್ಥಳಕ್ಕೆ ಅನ್ನ ಪ್ರಸಾದ ಬಳಕೆಗೆ ಕಳುಹಿಸಿಕೊಡಲಾಗುತ್ತಿದೆ’ ಎಂದರು.

ಪರಿಷತ್ ಕಾರ್ಯಕರ್ತ ನಾರ್ವೆ ಹರೀಶ್ ಮಾತನಾಡಿ, ‘ತಾಲ್ಲೂಕಿನ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ಮತ್ತು ಭಗವದ್ಗೀತಾ ಕಂಠಪಾಠ ಸ್ಪರ್ಧೆ ಏರ್ಪಡಿಸಲಾಗಿತ್ತು’ ಎಂದರು.

ಪರಿಷತ್ ನ ತಾಲ್ಲೂಕು ಸಂಚಾಲಕಿ ಡಿ.ಪಿ.ಅನುಸೂಯ ಕೃಷ್ಣಮೂತಿ ಮಾತನಾಡಿ, ‘ಪಂಚಪ್ರಾಣ ವಿಧಿಗಳಾದ ಸಂಧ್ಯಾ ವಂದನೆ, ಸ್ವಾಧ್ಯಾಯ, ಸದಾಚಾರ ಜೀವನ, ಸಮೈಕ್ಯತೆ, ಸಹಯೋಗವನ್ನು ತಿಳಿಸುವ ಪ್ರಯತ್ನ ಮಾಡಲಾಗುತ್ತಿದೆ’ ಎಂದು ತಿಳಿಸಿದರು.

ಮುಖಂಡ ಅನಿಲ್ ಕುಮಾರ್ ನಾರ್ವೆ, ಪರಿಷತ್ ನ ಕೊಪ್ಪ ಪಟ್ಟಣ ಸಂಚಾಲಕಿ ಗಾಯತ್ರಿ ಶೆಟ್ಟಿ, ಸಂಯೋಜಕಿ ಮಲ್ಲಿಕಾ, ಶಾಂತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT