ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಡಿಗೆರೆ | ಕುಡಿದ ಮತ್ತಿನಲ್ಲಿ ರಾತ್ರಿ ನಡು ರಸ್ತೆಯಲ್ಲೇ ಮಲಗಿದ ಭೂಪ

Published 11 ಜನವರಿ 2024, 15:36 IST
Last Updated 11 ಜನವರಿ 2024, 15:36 IST
ಅಕ್ಷರ ಗಾತ್ರ

ಮೂಡಿಗೆರೆ: ತಾಲ್ಲೂಕಿನ ಹಳಸೆ ಗ್ರಾಮದ ತಿರುವಿನಲ್ಲಿ ಬುಧವಾರ ಮಧ್ಯರಾತ್ರಿ ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ರಸ್ತೆಯಲ್ಲಿ ಮಲಗಿದ್ದು,  ವಾಹನ ಸವಾರರು ತೊಂದರೆ ಅನುಭವಿಸಿದರು.  ನಡುರಾತ್ರಿಯಲ್ಲಿ ರಸ್ತೆ ಮೇಲೆ ಮಲಗಿರುವ ವ್ಯಕ್ತಿಯನ್ನು ಕಂಡು ವಾಹನ ಸವಾರರು ಆತಂಕಗೊಂಡರು.

ಕೆಲವು ವಾಹನಗಳ ಸವಾರರು ವಾಹನದಿಂದ ಇಳಿದು, ವ್ಯಕ್ತಿಯನ್ನು ಎತ್ತಿ ರಸ್ತೆಯ ಒಂದು ಬದಿಗೆ ಮಲಗಿಸಿ ಪ್ರಯಾಣ ಮುಂದುವರಿಸಿದರು. ಪೊಲೀಸ್ ಗಸ್ತು ವಾಹನವು ಇಂತಹ ಪರಿಸ್ಥಿತಿ ಎದುರಾದಾಗ ನೆರವಿಗೆ ಬರಬೇಕು ಎಂದು ಸಮಸ್ಯೆ ಎದುರಿಸಿದ ಮಂಜುನಾಥ್ ಹಾನಬಾಳ್ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT