ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನರಸಿಂಹರಾಜಪುರ | ಬೀಡಾಡಿ ದನಗಳ ಹಾವಳಿ: ಹೆಚ್ಚುತ್ತಿರುವ ವಾಹನ ಅಪಘಾತ

Published : 6 ಸೆಪ್ಟೆಂಬರ್ 2024, 7:17 IST
Last Updated : 6 ಸೆಪ್ಟೆಂಬರ್ 2024, 7:17 IST
ಫಾಲೋ ಮಾಡಿ
Comments

ನರಸಿಂಹರಾಜಪುರ: ಪಟ್ಟಣ ಹಾಗೂ ತಾಲ್ಲೂಕು ವ್ಯಾಪ್ತಿಯಲ್ಲಿ ಇತ್ತೀಚೆಗೆ ಬೀಡಾಡಿ ದನಗಳ ಹಾವಳಿ ಹೆಚ್ಚಾಗಿದ್ದು, ಅಪಘಾತಗಳು ಹೆಚ್ಚುತ್ತಿವೆ.

ರಾತ್ರಿ ವೇಳೆ ರಸ್ತೆಯ ಮಧ್ಯದಲ್ಲೇ ದನಗಳ ಹಿಂಡು ಠಿಕಾಣಿ ಹೂಡುತ್ತವೆ. ಅಂಬೇಡ್ಕರ್ ವೃತ್ತ, ಬಸ್ ನಿಲ್ದಾಣ, ಅಗ್ರಹಾರ, ಪಟ್ಟಣ ಪಂಚಾಯಿತಿ ಸಮೀಪದ ವೃತ್ತ, ಸುಂಕದಕಟ್ಟೆ, ಪ್ರವಾಸಿ ಮಂದಿರ ಸರ್ಕಲ್, ಜೈಲ್ ಬಿಲ್ಡಿಂಗ್ ಸುತ್ತಲಿನ ಪ್ರದೇಶಗಳು ಬೀಡಾಡಿ ದನಗಳಿಗೆ ನೆಚ್ಚಿನ ತಾಣಗಳು. ರಾತ್ರಿ ವೇಳೆ ವಾಹನ ಸವಾರರಿಗೆ ರಸ್ತೆ ಮಧ್ಯೆ ಜಾನುವಾರುಗಳು ಮಲಗಿರುವುದು ತೀರಾ ಹತ್ತಿರಕ್ಕೆ ಬಂದ ನಂತರವಷ್ಟೇ ತಿಳಿಯುತ್ತದೆ. ದಿಢೀರನೆ ಬ್ರೇಕ್‌ ಹಾಕಿದಾಗ ಅಥವಾ ಅಪಘಾತ ತಪ್ಪಿಸಲು ವಾಹನವನ್ನು ಇನ್ನೊಂದು ಬದಿಗೆ ತಿರುಗಿಸಿದಾಗ ಅಪಘಾತಗಳು ಸಂಭವಿಸುತ್ತಿವೆ. ಹಗಲು ವೇಳೆಯಲ್ಲೂ ಬೀಡಾಡಿ ದನಗಳು ವಾಹನಕ್ಕೆ ಅಡ್ಡವಾಗಿ ನುಗ್ಗುವುದರಿಂದ ಅಪಘಾತಗಳು ಸಂಭವಿಸುತ್ತಿವೆ. ದ್ವಿಚಕ್ರ ವಾಹನ ಸವಾರರು ಬೀಡಾಡಿ ದನಗಳಿಂದ ತೊಂದರೆ ಅನುಭವಿಸುತ್ತಿದ್ದಾರೆ.

ಕಳೆದೊಂದು ವರ್ಷದಲ್ಲಿ ನರಸಿಂಹರಾಜಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 20 ರಿಂದ 25 ಅಪಘಾತ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ಪ್ರಾಣಹಾನಿ ಆಗಿರುವ ಪ್ರಕರಣಗಳಲ್ಲಿ ಹೆಚ್ಚಿನವರು ಬಿಡಾಡಿ ದನ ಅಡ್ಡ ಬಂದು ಅಥವಾ ರಸ್ತೆ ಮಧ್ಯೆ ಮಲಗಿದ ಜಾನುವಾರುಗಳಿಗೆ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟವರಾಗಿದ್ದಾರೆ. ಇತ್ತೀಚೆಗೆ ಪಟ್ಟಣದ ಬಸ್ತಿಮಠದ ಸಮೀಪ ದಿಢೀರನೆ ವಾಹನಕ್ಕೆ ಎದುರು ಬಂದ ಜಾನುವಾರು ವಾಹನಕ್ಕೆ ಡಿಕ್ಕಿ ಹೊಡೆದು, ಸ್ಥಳದಲ್ಲೇ ಮೃತಪಟ್ಟಿದ ಘಟನೆ ನಡೆಯಿತು.

ಬೀಡಾಡಿ ದನಗಳು  ದ್ವಿಚಕ್ರ ವಾಹನದ ಚೀಲದಲ್ಲಿ ಇಟ್ಟ ತರಕಾರಿ, ದಿನಸಿ ಪದಾರ್ಥಗಳಿಗೂ ಬಾಯಿ ಹಾಕುತ್ತಿದ್ದು, ಚೀಲವನ್ನು ಎಳೆದು ರಸ್ತೆಗೆ ಹಾಕುತ್ತಿವೆ.

‘ಬೀಡಾಡಿ ದನಗಳನ್ನು ಹಿಡಿದು ಸಾಗಿಸಲು ದೊಡ್ಡಿ ಇಲ್ಲ, ಗೋಶಾಲೆಗಳು ಇಲ್ಲದಿರುವುದರಿಂದ ಸಮಸ್ಯೆಯಾಗಿದೆ. ದನಗಳನ್ನು ರಸ್ತೆಗೆ ಬಿಡದಂತೆ ಕಟ್ಟಿಹಾಕಿ ಸಾಕುವಂತೆ ಪಟ್ಟಣದ ವ್ಯಾಪ್ತಿಯಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗಿದೆ’ ಎಂದು ಪಟ್ಟಣ ಪಂಚಾಯಿತಿ ಆರೋಗ್ಯ ನಿರೀಕ್ಷಕ ವಿಜಯಕುಮಾರ್ ಹೇಳಿದರು.

ಬೀಡಾಡಿ ದನಗಳಿಂದ ಆಗುತ್ತಿರುವ ಸಮಸ್ಯೆಯ ಬಗ್ಗೆ ಪೊಲೀಸ್ ಠಾಣಾ ವ್ಯಾಪ್ತಿಯ ಎಲ್ಲಾ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗೆ  ಪತ್ರ ಬರೆದು ಕ್ರಮಕ್ಕೆ ಒತ್ತಾಯಿಸಲಾಗಿದೆ. ದನಗಳನ್ನು ರಸ್ತೆಗೆ ಬಿಡದಂತೆ ಅವುಗಳನ್ನು ಸಾಕುವವರಿಗೂ ಎಚ್ಚರಿಕೆ ನೀಡಲಾಗಿದೆ’ ಎಂದು ಸಬ್‌ಇನ್‌ಸ್ಪೆಕ್ಟರ್‌ ನಿರಂಜನ ಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

ನರಸಿಂಹರಾಜಪುರದ ಅಗ್ರಹಾರದ ವೃತ್ತದಲ್ಲಿ ಮುಖ್ಯ ರಸ್ತೆಯ ಪಕ್ಕದಲ್ಲಿಯೇ ಬಿಡು ಬೀಡುವ ಬೀಡಾಡಿ ದನಗಳು
ನರಸಿಂಹರಾಜಪುರದ ಅಗ್ರಹಾರದ ವೃತ್ತದಲ್ಲಿ ಮುಖ್ಯ ರಸ್ತೆಯ ಪಕ್ಕದಲ್ಲಿಯೇ ಬಿಡು ಬೀಡುವ ಬೀಡಾಡಿ ದನಗಳು
‘ಗೋಶಾಲೆ ಇಲ್ಲ’
‘ಬೀಡಾಡಿ ದನಗಳನ್ನು ಹಿಡಿದು ಸಾಗಿಸಲು ದೊಡ್ಡಿ ಇಲ್ಲ, ಗೋಶಾಲೆಗಳು ಇಲ್ಲದಿರುವುದರಿಂದ ಸಮಸ್ಯೆಯಾಗಿದೆ. ದನಗಳನ್ನು ರಸ್ತೆಗೆ ಬಿಡದಂತೆ ಪಟ್ಟಣದ ವ್ಯಾಪ್ತಿಯಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗಿದೆ’ ಎಂದು ಪಟ್ಟಣ ಪಂಚಾಯಿತಿ ಆರೋಗ್ಯ ನಿರೀಕ್ಷಕ ವಿಜಯಕುಮಾರ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT