ಕೊಪ್ಪ: 'ಕೊಪ್ಪದಲ್ಲಿ ವಿದ್ಯುತ್ ಪರಿವರ್ತಕ ದುರಸ್ತಿ ಕೇಂದ್ರ ಮಾಡಲು ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ಇದರಿಂದ ಕೊಪ್ಪ, ಶೃಂಗೇರಿ, ಎನ್.ಆರ್.ಪುರ ತಾಲ್ಲೂಕುಗಳಿಗೆ ಅನುಕೂಲವಾಗುತ್ತದೆ' ಎಂದು ಮೆಸ್ಕಾಂನ ಚಿಕ್ಕಮಗಳೂರು ಅಧೀಕ್ಷಕ ಎಂಜಿನಿಯರ್ ಮಂಜುನಾಥ್ ತಿಳಿಸಿದರು.

ಬಾಳಗಡಿಯಲ್ಲಿರುವ ಮೆಸ್ಕಾಂ ವಿಭಾಗಿಯ ಕಚೇರಿಯಲ್ಲಿ ಸೋಮವಾರ ನಡೆದ ಜನಸಂಪರ್ಕ ಸಭೆಯಲ್ಲಿ ಕೆಡಿಪಿ ಸದಸ್ಯ ಬಿ.ಪಿ.ಚಿಂತನ್ ಬೆಳಗೊಳ ಅವರು, 'ಪರಿವರ್ತಕ ದುರಸ್ತಿ ಕೇಂದ್ರ ಆರಂಭಿಸಬೇಕು ಎಂದು ಈ ಹಿಂದೆ ಮನವಿ ಕೊಟ್ಟಿದ್ದೆವು, ಅದು ಏನಾಯಿತು' ಎಂಬ ಪ್ರಶ್ನೆಗೆ ಅಧೀಕ್ಷಕ ಎಂಜಿನಿಯರ್ ಉತ್ತರಿಸಿದರು.

ಶಾನುವಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ನವೀನ್ ಕರುವಾನೆ, '₹10 ಲಕ್ಷ ಮೇಲಿನ ಕಾಮಗಾರಿಗಳ ಸಾಕಷ್ಟು ಕಡತಗಳು ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರ ಬಳಿ ಬಾಕಿ ಇವೆ. ಮಲೆನಾಡಿನ ಬಗ್ಗೆ ಅವರಿಗೆ ಕಾಳಜಿ ಇಲ್ಲ' ಎಂದು ಆರೋಪಿಸಿದರು.

'ಅನುಮತಿಗೆ ಕೋರಿದ್ದೇವೆ. ಹಂತ ಹಂತವಾಗಿ ಕಾಮಗಾರಿಗಳು ನಡೆಯುತ್ತವೆ. ಮಳೆಗಾಲ ಆರಂಭಕ್ಕೂ ಮುನ್ನ ಕಾಮಗಾರಿ ನಡೆಸುತ್ತೇವೆ' ಎಂದು ಮೆಸ್ಕಾಂ ಕಾರ್ಯ ನಿರ್ವಾಹಕ ಎಂಜಿನಿಯರ್ ಸಿದ್ದೇಶ್ ಉತ್ತರಿಸಿದರು.

ಕೆಸವೆ ಗ್ರಾಮ ಪಂಚಾಯಿತಿ ಸದಸ್ಯ ಪ್ರವೀಣ್, ‘ಜನವರಿಯಿಂದ ಪ್ರತಿ ಗ್ರಾಮ ಪಂಚಾಯಿತಿ ಕಡೆಯಿಂದ 8 ರಿಂದ 10 ಮನೆಗಳಿಗೆ ಹೊಸದಾಗಿ ಸಂಪರ್ಕ ಸಿಗುತ್ತಿಲ್ಲ. ಪಂಚಾಯಿತಿ ಕಡೆಯಿಂದ ಎನ್ಒಸಿ ಕೊಡಲು ಸಾಧ್ಯವಾಗುತ್ತಿಲ್ಲ. ಈ ಹಿಂದೆ ಕೈ ಬರಹದಿಂದ ಕೊಡುತ್ತಿದ್ದೆವು, ಇದೀಗ ಆನ್ ಲೈನ್ ಆಗಿರುವುದತಿಂದ ಹೀಗೆ ಆಗುತ್ತಿದೆ. ನಿಮ್ಮ ಇಲಾಖೆ ಕಡೆಯಿಂದ ಯಾವುದಾದರು ಯೋಜನೆಯಿಂದ ಸಂಪರ್ಕ ಕಲ್ಪಿಸಬಹುದೇ’ ಎಂದು ಪ್ರಶ್ನಿಸಿದರು.

ಅಧೀಕ್ಷಕ ಎಂಜಿನಿಯರ್ ಮಂಜುನಾಥ್, 'ದಾಖಲೆ ಇಲ್ಲದ ಮನೆಗಳಿಗೆ, ಒನ್ ಟೈಮ್ ಹೊಸ ಸಂಪರ್ಕ ಕಲ್ಪಿಸಲು ಮುಖ್ಯಮಂತ್ರಿ ಹೇಳಿದ್ದಾರೆ. ಅದು ಅಧಿಕೃತ ಪ್ರಕಟಣೆ ಬಂದ ಕೂಡಲೇ ಸಮಸ್ಯೆ ಬಗೆಹರಿಯುತ್ತದೆ’ ಎಂದರು. ಇದೇ ವೇಳೆ ಮಾತನಾಡಿದ ಕಾರ್ಯ ನಿರ್ವಾಹಕ ಎಂಜಿನಿಯರ್ ಸಿದ್ದೇಶ್, 'ಬೆಳಕು ಯೋಜನೆ ಅಡಿ ಕೊನೆಯ ಹಂತದಲ್ಲಿ ಅರ್ಜಿಗಳು ಬಂದವು. ಆದ್ದರಿಂದ ಉಳಿಕೆಯಾಗಿವೆ' ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರವೀಂದ್ರ ಕುಕ್ಕುಡಿಗೆ, ‘ಮಳೆಗಾಲ ಮುಂಚಿತವಾಗಿ ಜಂಗಲ್ ಕ್ಲಿಯರ್ ಮಾಡುತ್ತಿಲ್ಲ. ಹಳ್ಳಿ ಕಡೆಯಲ್ಲಿ ಜನ ಸಮಸ್ಯೆ ಎದುರಿಸುತ್ತಾರೆ. ನಿಮ್ಮ ಜವಾಬ್ದಾರಿ ಏನು' ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧೀಕ್ಷಕ ಎಂಜಿನಿಯರ್ ಮಂಜುನಾಥ್, 'ಈ ಬಾರಿ ಹೆಚ್ಚು ಮಂದಿ ನೇಮಿಸಿಕೊಂಡು ಮುಂಚಿತವಾಗಿ ಜಂಗಲ್ ಕ್ಲಿಯರ್ ಮಾಡಲು ಕ್ರಮ ವಹಿಸುತ್ತೇವೆ’ ಎಂದರು.

'ಸಿದ್ದರಮಠ ಸಮೀಪದ ಬಾಂದ್ ಹಡ್ಲು ಎಂಬಲ್ಲಿ ಲೈನ್ ತುಂಡಾಗಿ ಬೀಳುತ್ತಿವೆ' ಎಂದು ಆ ಭಾಗದ ವ್ಯಕ್ತಿಯೊಬ್ಬರು ಹೇಳಿದರು. ಆಗ, ಎ.ಇ ಶಶಿಕಾಂತ್ ರಾಥೋಡ್, 'ತಂತಿ ಬದಲಾವಣೆ ಮಾಡಲಾಗುವುದು' ಎಂದರು.

ಕೆಡಿಪಿ ಸದಸ್ಯ ರಾಜಶಂಕರ್, ‘ಎಸ್ಸಿಪಿ ಯೋಜನೆ ಅಡಿ 500 ಮೀಟರ್ ಮೀರಿದ ಲೈನ್ ಅಳವಡಿಸಲು ಅವಕಾಶ ಕೊಡುತ್ತಿಲ್ಲ. ಪರಿಶಿಷ್ಟರಿಗೆ ಅಂಬೇಡ್ಕರ್ ಅಭಿವೃದ್ಧಿ ನಿಗಮ ಸಹಕಾರದೊಂದಿಗೆ ಯೋಜನೆ ಕಾರ್ಯಗತಗೊಳಿಸಲು ಸಾಧ್ಯವಿದೆ. ಈ ಬಗ್ಗೆ ಒಂದು ವರ್ಷದಿಂದ ನಿಮ್ಮ ಗಮನಕ್ಕೆ ತಂದಿದ್ದರೂ ಕ್ರಮ ವಹಿಸಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಇ.ಇ ಸಿದ್ದೇಶ್, 'ಸರ್ಕಾರಿ ನಿಯಮ ಅನುಸರಿಸಲಾಗುತ್ತಿದೆ. ಸಭೆಯಲ್ಲಿ ಚರ್ಚೆಗೊಂಡ ವಿಷಯಗಳ ಸಂಬಂಧ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸುತ್ತೇವೆ’ ಎಂದರು.

ಇಲಾಖೆಯ ಎಂಜಿನಿಯರ್ಗಳಾದ ಸುಧೀರ್ ಪಟೇಲ್, ಜೆ.ಇ ಪ್ರಶಾಂತ್, ಸೋಮಶೇಖರ್, ಕೆಡಿಪಿ ಸದಸ್ಯ ಅಶೋಕ್ ನಾರ್ವೆ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಓಣಿತೋಟ ರತ್ನಾಕರ್, ಮುಖಂಡ ವಾಸಪ್ಪ ಕುಂಚೂರು, ಲ್ಯಾಂಪ್ಸ್ ಸೊಸೈಟಿ ನಿರ್ದೇಶಕ ಮರಿಯಪ್ಪ ಇದ್ದರು.

'ಚರಂಡಿಯಲ್ಲಿ ವಿದ್ಯುತ್ ಕಂಬ

ಅಳವಡಿಕೆಗೆ ಆಕ್ಷೇಪ' ಮುಖಂಡ ನುಗ್ಗಿ ಮಂಜುನಾಥ್ 'ಮೇಲ್ಪಾಲ್ ರಸ್ತೆಯ ಚರಂಡಿಯಲ್ಲಿ 7 ವಿದ್ಯುತ್ ಕಂಬಗಳನ್ನು ಹಾಕಲಾಗಿದೆ. ಕಂಬ ಅಳವಡಿಸುವ ಸಂದರ್ಭದಲ್ಲಿಯೇ ನಾನು ಪೋನ್ ಮಾಡಿ ತಿಳಿಸಿದ್ದೆ. ಕೆಡಿಪಿ ಸಭೆಯಲ್ಲೂ ಆಕ್ಷೇಪವಾಗಿತ್ತು. ಪಿಡಬ್ಲ್ಯೂಡಿ ಇಲಾಖೆಯಿಂದ ಪತ್ರ ಬರೆದಿದ್ದಾರೆ. ಒಂದೂವರೆ ವರ್ಷವಾಯಿತು. ಈವರೆಗೂ ಯಾಕೆ ಕ್ರಮವಾಗಿಲ್ಲ ಚರಂಡಿ ಮುಚ್ಚುತ್ತೀರಾ' ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಕಾರ್ಯ ನಿರ್ವಾಹಕ ಎಂಜಿನಿಯರ್ ಸಿದ್ದೇಶ್ ‘ಕಲ್ಲಿನ ಜಾಗ ಇಕ್ಕಟ್ಟಾಗಿದೆ ರಸ್ತೆ ಕಿರಿದಾಗಿದೆ. ಆದ್ದರಿಂದ ಅಲ್ಲಿ ಅಳವಡಿಸಬೇಕಾದ ಪರಿಸ್ಥಿತಿ ಇತ್ತು. ಇನ್ನೊಮ್ಮೆ ಸ್ಥಳ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ' ಎಂದರು. ಇದೇ ಸಂದರ್ಭದಲ್ಲಿ ಹಿರೇಕೊಡಿಗೆ ಗ್ರಾಮ ಪಂಚಾಯಿತಿ ಸದಸ್ಯ ತ್ರಿಪುರೇಂದ್ರ 'ಬೊಮ್ಮಲಾಪುರ ಗ್ರಾಮದಲ್ಲಿ ಜೆಜೆಎಂ ಕಾಮಗಾರಿಗೆ ಚರಂಡಿಯಲ್ಲಿ ವಿದ್ಯುತ್ ಕಂಬ ಅಳವಡಿಸಲಾಗಿದೆ. ಚರಂಡಿ ಕಟ್ಟಿಕೊಂಡಿದೆ' ಎಂದು ಅಕ್ಷೇಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.