ಕಡೂರು: ‘ಸ್ಪರ್ಧಾತ್ಮಕ ಜಗತ್ತಿನಲ್ಲಿ ಉತ್ತಮ ಶಿಕ್ಷಣವಿಲ್ಲದೆ ಬದುಕುವುದು ಕಷ್ಟವಾಗಿದ್ದು, ಬದುಕಿನ ಏಳಿಗೆಗೆ ಶಿಕ್ಷಣವೇ ಶಕ್ತಿಯಾಗಿದೆ’ ಎಂದು ಶಾಸಕ ಕೆ.ಎಸ್.ಆನಂದ್ ಅಭಿಪ್ರಾಯ ವ್ಯಕ್ತಪಡಿಸಿದರು.

ಕಡೂರು ಪಟ್ಟಣದ ಗಣಪತಿ ಪೆಂಡಾಲ್ ಆವರಣದಲ್ಲಿ ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ 64ನೇ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ದೇಶ ಕಟ್ಟುವಲ್ಲಿ ಶಿಕ್ಷಕರು ಪ್ರಮುಖ ಪಾತ್ರ ವಹಿಸುತ್ತಾರೆ. ಹಂತ ಹಂತವಾಗಿ ಶಿಕ್ಷಣ ವ್ಯವಸ್ಥೆಯೂ ಬದಲಾಗುತ್ತಿದೆ, ಶಾಲೆ ಇಲ್ಲದ ಹಳ್ಳಿಗಳಿಲ್ಲ ಎನ್ನುವ ವಾತಾವರಣವಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಮಕ್ಕಳ ಕೊರತೆಯಿಂದ ಶಾಲೆಗಳು ಮುಚ್ಚುತ್ತಿರುವ, ಮಕ್ಕಳ ಕಲಿಕಾ ಗುಣಮಟ್ಟ ಕುಸಿಯುತ್ತಿರುವ ವರದಿಗಳು ಬರುತ್ತಿವೆ. ಪೋಷಕರು ಮಕ್ಕಳನ್ನು ಎಲ್ಲ ಸೌಲಭ್ಯವಿರುವ ಸರ್ಕಾರಿ ಶಾಲೆಗಳಿಗೆ ಬದಲಾಗಿ, ಖಾಸಗಿ ಶಾಲೆಗಳಿಗೆ ಸೇರಿಸುವ ಒಲವು ತೋರಿಸುತ್ತಿರುವುದು ಆತಂಕಕಾರಿ ಬೆಳವಣಿಗೆ. ಆದ್ದರಿಂದ ಸರ್ಕಾರಿ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಶಿಕ್ಷಕರು ಮಹತ್ವದ ಪಾತ್ರ ವಹಿಸಬೇಕಾದ ಹಾಗೂ ಎಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಸಮಯ ಇದಾಗಿದೆ’ ಎಂದು ನುಡಿದರು.

ಕಡೂರು ತಾಲ್ಲೂಕಿನಲ್ಲಿ 2010ರಿಂದ ಈಚೆಗೆ 32 ಶಾಲೆಗಳು ಮುಚ್ಚಲ್ಪಟ್ಟಿವೆ. ಅಲ್ಲಿ ಗ್ರಾಮಸ್ಥರು ಶಾಲೆ ಪುನರಾರಂಭ ಮಾಡಿ ಎಂದು ಒತ್ತಾಯಿಸುತ್ತಾರೆ. ಆದರೆ, ಶಾಲೆಗೆ ಬರುವ ಮಕ್ಕಳು ಇಲ್ಲ. ಕೆಲವು ಅನುದಾನಿತ ಶಾಲೆಗಳಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಗಳಲ್ಲಿ ಶೇ 7 ಫಲಿತಾಂಶ ಲಭಿಸಿದೆ. 7ನೇ ತರಗತಿ ವಿದ್ಯಾರ್ಥಿಗಳಿಗೆ ಕನ್ನಡ ಓದಲು ಬರುವುದಿಲ್ಲ, 20ರವರೆಗೆ ಮಗ್ಗಿ ಹೇಳಲು ಬರುವುದಿಲ್ಲ ಎಂದರೆ ಮಕ್ಕಳ ಭವಿಷ್ಯವೇನು? ಈ ಬಗ್ಗೆ ಶಿಕ್ಷಕರು ಯೋಚಿಸಬೇಕು. ಶಿಕ್ಷಕರ ಆತ್ಮಗೌರವ ಹೆಚ್ಚಿಸುವ ಸಲುವಾಗಿ ಶ್ರಮಿಸಿದ ಎಸ್.ರಾಧಾಕೃಷ್ಣನ್ ಅವರಂತೆ ಸಮಾಜವನ್ನು ಪ್ರಭಾವಿಸುವವರಾಗಿ ಎಂದು ಅವರು ಆಶಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಬಿಇಒ ಎಂ.ಎಚ್.ತಿಮ್ಮಯ್ಯ, ‘ಶಿಕ್ಷಕರು ವೃತ್ತಿ, ಬೋಧಿಸುವ ವಿಷಯ ಮತ್ತು ಮಕ್ಕಳನ್ನು ಪ್ರೀತಿಸಬೇಕು. ಬೇರೆಯವರು ತಪ್ಪು ಮಾಡಿದರೆ ಆಗುವ ಹಾನಿಗೆ ಹೋಲಿಸಿದರೆ ಶಿಕ್ಷಕರು ತಪ್ಪು ಮಾಡಿದರೆ ಪೀಳಿಗೆಯೇ ಹಾಳಾಗುತ್ತದೆ. ಮುಂದಿನ ದಿನಗಳಲ್ಲಿ ಕ್ಲಸ್ಟರ್ನಲ್ಲಿ ಒಂದು ಉತ್ತಮ ಶಾಲೆ ಗುರುತಿಸಿ, ಗೌರವಿಸುವ ಚಿಂತನೆ ಇದೆ’ ಎಂದರು.

ಪುರಸಭೆ ಉಪಾಧ್ಯಕ್ಷೆ ಮಂಜುಳಾ ಚಂದ್ರು, ಕೆ.ಡಿ.ಪಿ ಸದಸ್ಯ ಅಶೋಕ್ ಗುಮ್ಮನಹಳ್ಳಿ ಮಾತನಾಡಿದರು. ಶಿಕ್ಷಕರ ದಿನಾಚರಣೆ ಪ್ರಯುಕ್ತ ಡಾ.ಎಸ್.ರಾಧಾಕೃಷ್ಣನ್ ಅವರ ಭಾವಚಿತ್ರವನ್ನು ಸಾಂಸ್ಕೃತಿಕ ಕಲಾ ತಂಡಗಳ ಉಪಸ್ಥಿತಿಯಲ್ಲಿ ಶಿಕ್ಷಕರು ಪಟ್ಟಣದಲ್ಲಿ ಸಾರೋಟಿನ ಮೂಲಕ ಮೆರವಣಿಗೆ ಮಾಡಿದರು. ಪ್ರೌಢಶಾಲೆ, ಪ್ರಾಥಮಿಕ ಶಾಲೆಗಳ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು.

ಸಮನ್ವಯಾಧಿಕಾರಿ ಪ್ರೇಮ್ಕುಮಾರ್, ಅಕ್ಷರ ದಾಸೋಹ ಅಧಿಕಾರಿ ದೇವರಾಜ್, ಯುವಜನ ಸೇವಾ ಕ್ರೀಡಾಧಿಕಾರಿ ಮುರಳೀಧರ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮಂಜುನಾಥ್, ಪ್ರಾಥಮಿಕ, ಪ್ರೌಢಶಾಲಾ ಶಿಕ್ಷಕರ ಸಂಘದ ಧನಪಾಲ ನಾಯ್ಕ, ಜಗದೀಶ್, ಪ್ರಶಾಂತ್ಕುಮಾರ್, ಪ್ರಭಾಕರ್, ಹರೀಶ್, ನಾಗರತ್ನ, ಶಾರದಮ್ಮ, ಲತಾಮಣಿ ಇದ್ದರು.

ಸಮಾಜಕ್ಕೆ ಉತ್ತಮ ಪ್ರಜೆಗಳನ್ನು ನೀಡುವ ಶಿಕ್ಷಕರು ಶಾಲೆಗಳ ಉಳಿವಿಗೂ ದಾನಿಗಳ ಹಾಗೂ ಹಿರಿಯ ವಿದ್ಯಾರ್ಥಿಗಳ ನೆರವು ಪಡೆದು ಕ್ರಮ ವಹಿಸಲು ಮುಂದಾಗಬೇಕು.
– ಸಿ.ಆರ್.ಪ್ರವೀಣ್, ತಾಲ್ಲೂಕು ಪಂಚಾಯಿತಿ ಇಒ

‘ಶಾಲೆಗಳು ಮುಚ್ಚದಿರಲು ಎಲ್ಲರೂ ಕೈ ಜೋಡಿಸಿ’

ಎಸ್.ರಾಧಾಕೃಷ್ಣನ್ ಮತ್ತು ಸಾವಿತ್ರಿಬಾಯಿ ಫುಲೆ ಅವರ ಭಾವಚಿತ್ರಕ್ಕೆ ಪುಷ್ಪಾಂಜಲಿ ನೆರವೇರಿಸಿದ ಪುರಸಭಾಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ ‘ಶಿಕ್ಷಣ ಮತ್ತು ಶಿಕ್ಷಕರಿಗೆ ಸಮಾಜದಲ್ಲಿ ಅತಿ ಹೆಚ್ಚು ಗೌರವವಿದೆ. ತಂದೆ ತಾಯಿ ಮತ್ತು ಶಿಕ್ಷಕರು ನಮ್ಮ ಏಳಿಗೆಯ ಶಿಲ್ಪಿಗಳು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶಿಕ್ಷಣ ಮತ್ತು ಆರೋಗ್ಯ ಸೇವೆಗಳಿಗೆ ಹೆಚ್ಚಿನ ಒತ್ತು ನೀಡುತ್ತಿದ್ದು ಕಡೂರು ವಲಯದಲ್ಲಿ ಶಾಲೆಗಳು ಮುಚ್ಚದಿರಲು ಎಲ್ಲರೂ ಕೈ ಜೋಡಿಸಬೇಕು. ಪುರಸಭೆ ವತಿಯಿಂದ ಅಂಬೇಡ್ಕರ್ ಬಡಾವಣೆಯ ಶಾಲೆ ದತ್ತು ತೆಗೆದುಕೊಂಡು ಮೂಲಸೌಕರ್ಯ ಕಲ್ಪಿಸಲಾಗಿದೆ. ದಾನಿಗಳು ಇಂತಹ ಕ್ರಮಕ್ಕೆ ಮುಂದಾಗಬೇಕು’ ಎಂದು ಸಲಹೆ ನೀಡಿದರು.

ವಿದ್ಯಾರ್ಥಿಗಳಿಂದ ಸಿಗುವ ಗೌರವವೇ ಶಿಕ್ಷಕರ ಆಭರಣ

ತಹಶೀಲ್ದಾರ್ ಸಿ.ಎಸ್.ಪೂರ್ಣಿಮಾ ಮಾತನಾಡಿ ‘ಶಿಕ್ಷಕರು ನಾಲ್ಕು ಗೋಡೆಗಳ ನಡುವೆ ಕೇವಲ ಮಕ್ಕಳಿಗೆ ಕಲಿಸುವವರಲ್ಲ ಅವರೂ ನಿರಂತರ ಕಲಿಕೆಯಲ್ಲಿ ತೊಡಗಿಕೊಂಡಿರುತ್ತಾರೆ. ಎಲ್ಲ ವೃತ್ತಿಗಳೂ ಶಿಕ್ಷಕರಿಂದಲೇ ಸೃಷ್ಟಿಯಾಗುತ್ತವೆ. ಆದ್ದರಿಂದಲೇ ಶಿಕ್ಷಕರನ್ನು ದೇವರಿಗೆ ಹೋಲಿಕೆ ಮಾಡಲಾಗಿದೆ. ಉತ್ತಮ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದ್ದು ಶಿಕ್ಷಕರ ಮುಂದೆ ಎಲ್ಲ ಮಕ್ಕಳೂ ಸಮಾನರು. ವಿದ್ಯಾರ್ಥಿಗಳಿಂದ ಸಿಗುವ ಗೌರವವೇ ಶಿಕ್ಷಕರ ಆಭರಣವಾಗಿದ್ದು ನಿಮ್ಮ ಜವಾಬ್ದಾರಿಯನ್ನು ಪರಿಪೂರ್ಣವಾಗಿ ನಿರ್ವಹಿಸಿ ಮಕ್ಕಳ ಸೃಜನಾತ್ಮಕ ಕಲಿಕೆಗೆ ನೆರವಾಗಿ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.