ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಡೂರು: ಪುಷ್ಪ ಕೃಷಿಕರಿಗೆ ಸಂಕಷ್ಟ ತಂದ ಬಿಸಿಲು

Published 12 ಮೇ 2024, 5:17 IST
Last Updated 12 ಮೇ 2024, 5:17 IST
ಅಕ್ಷರ ಗಾತ್ರ

ಕಡೂರು: ಬರಗಾಲವು ಹೂ ಬೆಳೆಗಾರರಿಗೆ ತೀವ್ರ ಸಂಕಷ್ಟ ತಂದೊಡ್ಡಿದೆ. ಎಷ್ಟೇ ನೀರುಣಿಸಿದರೂ ಹೆಚ್ಚುತ್ತಿರುವ ತಾಪಮಾನದಿಂದ ಹೂವಿನ ಗಿಡಗಳು ಸಾಯುತ್ತಿರುವುದು ಬೆಳೆಗಾರರಿಗೆ ನಿರಾಸೆ ಉಂಟುಮಾಡಿದೆ.

ಪಟ್ಟಣ ಸಮೀಪದ ಗ್ರಾಮಗಳಾದ ಲಕ್ಕಡಿಕೋಟೆ, ಸಿಗೇಹಡ್ಲು, ವಿ.ಸಿದ್ದರಹಳ್ಳಿ, ಕಾಮನಕೆರೆ ಭಾಗಗಳಲ್ಲಿ ಪುಷ್ಪ ಕೃಷಿ ಪ್ರಧಾನವಾಗಿದೆ. ಎರಡು ವಾರಗಳಿಂದ ಹೂವಿನ ಬೆಲೆ ಗಗನಕ್ಕೇರಿದ್ದರೂ ಅದರ ಲಾಭ ಬೆಳೆಗಾರರಿಗೆ ಸಿಗುತ್ತಿಲ್ಲ. 39 ಡಿಗ್ರಿಗೂ ಹೆಚ್ಚಿದ ಬಿಸಿಲನ್ನು ಹೂವಿನ ಗಿಡಗಳು ತಡೆಯತ್ತಿಲ್ಲ. ಆದ್ದರಿಂದ ಅರಳುವ ಸಂದರ್ಭದಲ್ಲಿ ಹೂಗಳು ಮುದುಡುತ್ತಿವೆ.

ಸ್ಥಳೀಯವಾಗಿ ಗುಣಮಟ್ಟದ ಹೂ ದೊರೆಯುತ್ತಿಲ್ಲ. ಗ್ರಾಹಕರ ಬೇಡಿಕೆಗೆ ತಕ್ಕಂತೆ ತುಮಕೂರು ದಾವಣಗೆರೆ ಭಾಗದಿಂದ ಹೂಗಳನ್ನು ತರಿಸಿಕೊಂಡು ಮಾರಾಟ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಲೋಹಿತ್, ಹೂವಿನ ವ್ಯಾಪಾರಿ ಕಡೂರು

ಮಲ್ಲಿಗೆ, ಕನಕಾಂಬರ, ಸೇವಂತಿಗೆ, ಕಲರ್ ಬಟನ್ಸ್, ಚೆಂಡು ಹೂ ಪ್ರಮುಖವಾಗಿ ಇಲ್ಲಿ ಬೆಳೆಯಲಾಗುತ್ತಿದೆ. ಸುಮಾರು 60 ಎಕರೆ ಪ್ರದೇಶದಲ್ಲಿ ಸೇವಂತಿಗೆ ಹೂ ಬೆಳೆಯಲಾಗುತ್ತಿತ್ತು. ಇಲ್ಲಿ ಬೆಳೆದ ಹೂಗಳು ಶಿವಮೊಗ್ಗ, ಮೈಸೂರು, ಮಂಗಳೂರು ಮತ್ತಿತರ ಭಾಗಗಳಿಗೆ ರವಾನೆಯಾಗುತ್ತದೆ.

ಸಣ್ಣ ಹಾರದ ಬೆಲೆ ₹ 250, ದೊಡ್ಡ ಹಾರಕ್ಕೆ ₹ 350, ತೋಮಾಲೆ ₹ 1300, ಒಂದು ಮಾರು ಸೇವಂತಿಗೆ ₹ 120ರಿಂದ 150, ದುಂಡು ಮಲ್ಲಿಗೆಗೆ ₹ 80ರಷ್ಟು ಬೆಲೆ ಇದೆ.

ಹೂವಿನ ದರ ಕೆಜಿಗೆ ₹ಗಳಲ್ಲಿ

ದುಂಡುಮಲ್ಲಿಗೆ;500

ಕನಕಾಂಬರ;1300

ಗುಲಾಬಿ;200-300

ಕಾಕಡಾ ಮಲ್ಲಿಗೆ;600-800

ಕಲರ್ ಶಾವಂತಿಗೆ;600

ಸುಗಂಧರಾಜ;150-170

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT