ಅಂತರರರಾಷ್ಟ್ರೀಯ ಟ್ರೇಲ್ ರನ್ನರ್ಸ್ ಸಂಸ್ಥೆಯಿಂದ (ಐಟಿಆರ್‌ಎ) ಮಾನ್ಯತೆ ಪಡೆದಿರುವ ಭಾರತದ ಏಕೈಕ ರೇಸ್ ಇದು. ಈ ಬಾರಿ 1200 ಮಂದಿ ನೋಂದಣಿ ಮಾಡಿಕೊಂಡಿದ್ದಾರೆ
. ಶ್ಯಾಮ್ ಸುಂದರ್ ಪಾಣಿ ರೇಸ್ ನಿರ್ದೇಶಕ
ಇದೊಂದು ವಿಶಿಷ್ಟ ಓಟ. ದಾರಿಯಲ್ಲಿ ಎದುರಾಗುವ ಸಮಸ್ಯೆಗಳನ್ನು ಅಲ್ಲಲ್ಲಿ ಓಟಗಾರರೇ ಸ್ವತಃ ಪರಿಹರಿಸಿಕೊಂಡು ಮುಂದೆ ಸಾಗಬೇಕು. ನಗರ ಜೀವನದಲ್ಲಿ ಬೇಸತ್ತಿರುವವರಿಗೆ ಇಲ್ಲಿ ನವಚೇತನ ಸಿಗುತ್ತದೆ.
ಆನಂದ್ ಅಡ್ಕೋಳಿ ರೇಸ್ ನಿರ್ದೇಶಕ
ಏಷ್ಯಾಟಿಕ್ ಮಾಸ್ಟರ್ಸ್‌ನಲ್ಲಿ ಪಾಲ್ಗೊಂಡಿದ್ದೆ. ಭಾರತದಲ್ಲಿ ಇದು ನನ್ನ ಮೊದಲ ಓಟ. ಇಲ್ಲಿನ ಪ್ರಕೃತಿ ನನ್ನನ್ನು ಬೆರಗುಗೊಳಿಸಿದೆ. ಒಂದಿಷ್ಟು ನಿರೀಕ್ಷೆಯೊಂದಿಗೆ ಬಂದಿದ್ದೆ. ಈಗ ತುಂಬ ರೋಮಾಂಚನವಾಗಿದೆ.
ಸಿತಿ ಹಜಾ ಮಲೇಷ್ಯದ ಓಟಗಾರ್ತಿ
ಬೆಂಗಳೂರು ಮೌಂಟೇನ್ ಫೆಸ್ಟಿವಲ್‌ನಲ್ಲಿ ದೀರ್ಘದೂರ ಓಟದಲ್ಲಿ ಪಾಲ್ಗೊಂಡಿದ್ದೆ. ಮಲ್ನಾಡ್ ಅಲ್ಟ್ರಾ ರನ್‌ನಲ್ಲಿ ಪಾಲ್ಗೊಳ್ಳುತ್ತಿರುವುದು ಇದೇ ಮೊದಲು. ಖುಷಿಯೂ ಆತಂಕವೂ ಇದೆ.
ಸಿಂಧು ಬೆಂಗಳೂರಿನ ಕ್ರೀಡಾಪಟು
ಅಲ್ಟ್ರಾ ರೇಸ್‌ನಿಂದಾಗಿ ಸುತ್ತಮುತ್ತಲ ಹೋಂಸ್ಟೇಗಳಲ್ಲಿ ಬುಕ್ಕಿಂಗ್ ಹೆಚ್ಚಾಗುತ್ತದೆ. ಆಯೋಜಕರು ಸ್ಥಳೀಯ ಸರ್ಕಾರಿ ಶಾಲೆಗೆ ಕ್ರೀಡಾ ಕಿಟ್ ಕೊಡುವ ಯೋಜನೆ ಹಮ್ಮಿಕೊಡಿದ್ದಾರೆ.
ನಿಶ್ಚಿತ್ ಅರಳಗುಪ್ಪೆ ಸ್ಥಳೀಯ ಸಂಘಟಕ
ಈ ಓಟದಿಂದಾಗಿ ಇಲ್ಲಿನ ಸನ್ ಸೆಟ್ ಪಾಯಿಂಟ್ ಶೂಟಿಂಗ್ ಪಾಯಿಂಟ್ ಮುತ್ತೋಡಿ ಸಫಾರಿ ಮುಂತಾದ ಪ್ರವಾಸೋದ್ಯಮ ತಾಣಗಳ ಬಗ್ಗೆ ಹೆಚ್ಚು ಜನರು ತಿಳಿದುಕೊಳ್ಳುವಂತೆ ಆಗಿದೆ. ಅದು ಅಭಿವೃದ್ಧಿಗೆ ಪೂರಕವಾಗಿದೆ.