ಶುಕ್ರವಾರ, ಜನವರಿ 27, 2023
27 °C

ಕೊಪ್ಪ| ನಗ್ನ ಚಿತ್ರ ವೈರಲ್ ಬೆದರಿಕೆ: ಯುವತಿಯಿಂದ ದೂರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಪ್ಪ: ‘ಮಹಮ್ಮದ್ ರೋಫ್ ಎಂಬಾತ ಸ್ನೇಹದ ಹೆಸರಿನಲ್ಲಿ ವಂಚಿಸಿದ್ದಾನೆ. ನನ್ನ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ಆತನ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಯುವತಿಯೊಬ್ಬರು ತಾಲ್ಲೂಕಿನ ಹರಿಹರಪುರ ಪೊಲೀಸ್ ಠಾಣೆಗೆ ಭಾನುವಾರ ದೂರು ನೀಡಿದ್ದಾರೆ.

‘ಈ ಹಿಂದೆ ಕಾಲೇಜು ವ್ಯಾಸಂಗ ಮಾಡುತ್ತಿದ್ದಾಗ ಮಹಮ್ಮದ್ ರೋಫ್ ಇನ್‌ಸ್ಟಾ ಗ್ರಾಂನಲ್ಲಿ ಪರಿಚಯವಾಗಿದ್ದಾನೆ. ಆತನ ಭೇಟಿಗೆ ಒಪ್ಪದಿದ್ದಾಗ ವಾಟ್ಸ್‌ಆ್ಯಪ್‌ಗೆ ಎಡಿಟ್ ಮಾಡಿದ ಖಾಸಗಿ ಚಿತ್ರ ಕಳುಹಿಸಿ, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವುದಾಗಿ ಬೆದರಿಸಿದ್ದ. ನಂತರ ರೋಫ್, ಆತನ ಸ್ನೇಹಿತರು ಅಮಲು ಪದಾರ್ಥ ಕೊಟ್ಟು ಖಾಸಗಿ ಚಿತ್ರ, ವಿಡಿಯೊ ಮಾಡಿಕೊಂಡಿದ್ದರು’ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾರೆ.

ಸಹೋದರನಿಂದ ದೂರು: ‘ಸಹೋದರಿ ಖಾಸಗಿ ಚಿತ್ರವನ್ನು ಮಹಮ್ಮದ್ ರೋಫ್ ಎಂಬಾತ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ. ಆತನ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಯುವತಿಯ ಸಹೋದರ ಸೈಬರ್ ಪೊಲೀಸ್ ಠಾಣೆಗೆ (ಸಿಇಎನ್), ಹರಿಹರಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು