ಚಳ್ಳಕೆರೆ: ಜುಲೈ 8ರ ಶನಿವಾರ ಬೆಂಗಳೂರಿನಿಂದ ಕಾಶಿ ತೀರ್ಥಯಾತ್ರೆಗೆ ಪಾದಯಾತ್ರೆ ಹೊರಟ 30 ಯಾತ್ರಾರ್ಥಿಗಳ ತಂಡ ಶುಕ್ರವಾರ ಪರಶುರಾಂಪುರ ಮಾರ್ಗದಿಂದ ಚಳ್ಳಕೆರೆಗೆ ಬಂದಿತು.
ಯಾತ್ರೆಯ ನೇತೃತ್ವ ವಹಿಸಿರುವ ಬೆಂಗಳೂರಿನ ಗುರು ಶ್ರೀಸ್ವಾಮಿ ದಾಸರು, ಮಾರ್ಗದ ಉದ್ದಕ್ಕೂ ಭಜನೆ, ವಾಸ್ತವ್ಯ ಹೂಡಿದ ಸ್ಥಳದಲ್ಲಿ ಪ್ರತಿದಿನ ರಾತ್ರಿ ಪ್ರವಚನ, ದೇವರಧ್ಯಾನ, ನಾಮಸಂಕೀರ್ತನೆ ಮುಂತಾದ ಕಾರ್ಯಕ್ರಮ ನಡೆಸಲಾಗುವುದು. ದಾರಿ ಉದ್ದಕ್ಕೂ ಭಕ್ತರು ನೀಡಿದ ಅನ್ನ-ಪ್ರಸಾದ ಸ್ವೀಕರಿಸಲಾಗುವುದು. ಹೊಸಪೇಟೆ, ಹುನಗುಂದ, ಆಲಮಟ್ಟಿ, ಬಿಜಾಪುರ, ಪುಣೆ, ಅಂಕೋಲ, ನಾಸಿಕ್, ಉಜ್ಜಯಿನಿ, ಭೂಪಾಲ್, ಅಲಹಬಾದ್, ಅಯೋಧ್ಯೆ ಮಾರ್ಗದ ಮೂಲಕ (ವಾರಾಣಸಿ) ಕಾಶಿ ತಲುಪಲಾಗುವುದು’ ಎಂದು ಹೇಳಿದರು.
ಚಳ್ಳಕೆರೆ ಹೊರ ವಲಯದ ಚಳ್ಳಕೇರಮ್ಮ ದೇವಸ್ಥಾನದ ಬಳಿ ಮಧ್ಯಾಹ್ನ ಸಾಮೂಹಿಕ ಅನ್ನಸಂತರ್ಪಣೆ ಕಾರ್ಯದ ನಂತರ ಯಲಹಂಕದ ಕೃಷ್ಣಪ್ಪ, ಎಸ್.ನಾಗರಾಜರೆಡ್ಡಿ, ರಾಮಮೂರ್ತಿ, ತುಳಸಿರಾಂ, ಚಂದ್ರಮೌಳಿಶಾಸ್ತ್ರಿ, ಶಿವರುದ್ರಯ್ಯ, ಹನುಮಂತರೆಡ್ಡಿ, ಗೌರಮ್ಮ, ಮುನಿರತ್ನ, ರಾಜೇಂದ್ರ ಪ್ರಸಾದ್ ಸೇರಿದಂತೆ 30 ಯಾತ್ರಾರ್ಥಿಗಳು ಹೊಸಪೇಟೆ ಮಾರ್ಗದತ್ತ ಪಾದಯಾತ್ರೆ ಬೆಳೆಸಿದರು.
ಡಿ.ಉಪ್ಪಾರಹಟ್ಟಿ ಈರಣ್ಣಸ್ವಾಮಿ, ಸಾಣಿಕೆರೆ ನಿಜಲಿಂಗಪ್ಪಸ್ವಾಮಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.