ಕಾರಿಗೆ ಲಾರಿ ಡಿಕ್ಕಿ: ಸಾಣೇಹಳ್ಳಿ ಸ್ವಾಮೀಜಿ ಪಾರು

7

ಕಾರಿಗೆ ಲಾರಿ ಡಿಕ್ಕಿ: ಸಾಣೇಹಳ್ಳಿ ಸ್ವಾಮೀಜಿ ಪಾರು

Published:
Updated:

ಚಿತ್ರದುರ್ಗ: ಹೊಳಲ್ಕೆರೆ ತಾಲ್ಲೂಕಿನ ಸಾಸಲು ಗ್ರಾಮದ ಬಳಿ ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಚಲಿಸುತ್ತಿದ್ದ ಕಾರಿಗೆ ಲಾರಿ ಡಿಕ್ಕಿ ಹೊಡೆದಿದ್ದು, ಸ್ವಾಮೀಜಿ ಅಪಾಯದಿಂದ ಪಾರಾಗಿದ್ದಾರೆ.

ಸ್ವಾಮೀಜಿ ಅವರು ಶನಿವಾರ ಬೆಳಿಗ್ಗೆ ಸಿರಿಗೆರೆಯಿಂದ ಸಾಸಲು ಮಾರ್ಗವಾಗಿ ಭದ್ರಾವತಿ ಕಡೆ ಕಾರಿನಲ್ಲಿ ಸಾಗುತ್ತಿದ್ದರು. ಸಾಸಲು ರೈಲ್ವೆ ಮೇಲ್ಸೇತುವೆ ಸಮೀಪ ವಿರುದ್ಧ ದಿಕ್ಕಿನಿಂದ ಬಂದ ಲಾರಿ ಡಿಕ್ಕಿ ಹೊಡೆದಿದೆ ಎಂದು ಚಿಕ್ಕಜಾಜೂರು ಠಾಣೆಯ ಪೊಲೀಸರು ಮಾಹಿತಿ ನೀಡಿದ್ದಾರೆ.

ಅಪಘಾತ ಭೀಕರವಾಗಿದ್ದು, ಕಾರು ಸಂಪೂರ್ಣ ಜಖಂಗೊಂಡಿದೆ. ಡಿಕ್ಕಿಯ ರಭಸಕ್ಕೆ ಲಾರಿ ಪಲ್ಟಿಯಾಗಿದೆ. ಸ್ವಾಮೀಜಿ ಸೇರಿದಂತೆ ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ.


ಅಪಘಾತದಿಂದ ನುಜ್ಜುಗುಜ್ಜಾಗಿರುವ ಕಾರು


ಉರುಳಿಬಿದ್ದ ಲಾರಿ

 

ಬರಹ ಇಷ್ಟವಾಯಿತೆ?

 • 11

  Happy
 • 0

  Amused
 • 0

  Sad
 • 0

  Frustrated
 • 7

  Angry

Comments:

0 comments

Write the first review for this !