ಚಿತ್ರದುರ್ಗ: ಜಿಲ್ಲೆಯಲ್ಲಿ ಪೂರ್ವ ಮುಂಗಾರು ಮಳೆ ಚುರುಕು ಪಡೆದಿದ್ದು, ಕೃಷಿ ಚಟುವಟಿಕೆ ಗರಿಗೆದರಿದೆ. ಮುಂಗಾರು ಹಂಗಾಮು ಬಿತ್ತನೆಗೆ ರೈತರು ಭೂಮಿಯನ್ನು ಸಜ್ಜುಗೊಳಿಸುವ ಹಾಗೂ ಬೀಜ, ರಸಗೊಬ್ಬರ ದಾಸ್ತಾನು ಮಾಡಿಕೊಳ್ಳುವ ಕಾರ್ಯದಲ್ಲಿ ತೊಡಗಿದ್ದಾರೆ.

ಯುಗಾದಿ ಹಬ್ಬದ ಬಳಿಕ ಕಾಣಿಸಿಕೊಂಡ ಪೂರ್ವ ಮುಂಗಾರು ಮಳೆ, ಮೇ ಮೊದಲ ವಾರದಲ್ಲಿ ಚುರುಕಾಗಿದೆ. ಹಲವು ಹದ ಮಳೆಗಳು ಬಿದ್ದಿದ್ದು, ಭೂಮಿ ಉಳುಮೆ ಮಾಡಿಕೊಳ್ಳಲು ಸಹಕಾರಿಯಾಗಿದೆ. ಈರುಳ್ಳಿ, ಎಳ್ಳು ಬಿತ್ತನೆಗೂ ರೈತರು ಮುಂದಾಗಿದ್ದಾರೆ. ಲಾಕ್‌ಡೌನ್ ನಡುವೆಯೂ ಕೃಷಿ ಚಟುವಟಿಕೆ ನಿರಾತಂಕವಾಗಿ ಸಾಗಿದೆ.

ಪೂರ್ವ ಮುಂಗಾರು ಮಳೆ ಪ್ರತಿ ವರ್ಷ ವಾಡಿಕೆಯಷ್ಟು ಬೀಳುತ್ತಿದ್ದರು ಮುಂಗಾರು ಮಳೆ ಮಾತ್ರ ರೈತರ ನಿರೀಕ್ಷೆ ಹುಸಿಗೊಳಿಸುತ್ತಿದೆ. ಪ್ರಸಕ್ತ ವರ್ಷ ಪೂರ್ವ ಮುಂಗಾರು ಮಳೆ ರೈತರಲ್ಲಿ ಹಲವು ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಪ್ರತಿ ನಿತ್ಯ ಮಳೆ ಬೀಳುತ್ತಿದ್ದು, ಹೊಸದುರ್ಗ, ಹೊಳಲ್ಕೆರೆ, ಚಿತ್ರದುರ್ಗ, ಹಿರಿಯೂರು, ಮೊಳಕಾಲ್ಮುರು ಹಾಗೂ ಚಳ್ಳಕೆರೆ ತಾಲ್ಲೂಕಿನ ಹಲವು ಭಾಗಗಳಲ್ಲಿ ಉತ್ತಮ ಮಳೆಯಾಗಿದೆ.

ಮುಂಗಾರು ಹಂಗಾಮು ಬಿತ್ತನೆಗೆ ಸಜ್ಜಾಗುತ್ತಿರುವ ರೈತರಿಗೆ ನೆರವಾಗಲು ಕೃಷಿ ಇಲಾಖೆ ಕೂಡ ಸಿದ್ಧವಾಗಿದೆ. ಜಿಲ್ಲೆಯ ಎಲ್ಲ 22 ರೈತ ಸಂಪರ್ಕ ಕೇಂದ್ರಗಳು ಹಾಗೂ ಕೃಷಿ ಯಂತ್ರಧಾರೆ ಕೇಂದ್ರಗಳು ಸೇವೆ ಒದಗಿಸುತ್ತಿವೆ. ಬಿತ್ತನೆ ಬೀಜ ವಿತರಣೆಗೆ ಹೆಚ್ಚುವರಿ 29 ಕೇಂದ್ರ ತೆರೆಯಲು ಕೃಷಿ ಇಲಾಖೆ ನಿರ್ಧರಿಸಿದೆ. ಶೇಂಗಾ, ಮೆಕ್ಕೆಜೋಳ, ರಾಗಿ, ಹತ್ತಿ ಬಿತ್ತನೆ ಬೀಜಕ್ಕೆ ಬೇಡಿಕೆ ಬರಲಾರಂಭಿಸಿದೆ.

ಈರುಳ್ಳಿ, ಎಳ್ಳು ಬಿತ್ತನೆ ಆರಂಭ

ಈರುಳ್ಳಿ ಉತ್ಪಾದನೆಯಲ್ಲಿ ಕೋಟೆನಾಡು ರಾಜ್ಯದಲ್ಲೇ ಎರಡನೇ ಸ್ಥಾನದಲ್ಲಿದೆ. ಮುಂಗಾರು, ಹಿಂಗಾರು ಹಾಗೂ ಬೇಸಿಗೆ ಹಂಗಾಮು ಸೇರಿ ಮೂರು ಬೆಳೆ ಬೆಳೆಯಲು ಇಲ್ಲಿ ಅವಕಾಶವಿದೆ. ಮಳೆಯಾಶ್ರಿತ ಪ್ರದೇಶದಲ್ಲಿ ಮುಂಗಾರು ಹಂಗಾಮು ಈರುಳ್ಳಿ ಬಿತ್ತನೆಗೆ ಬೆಳೆಗಾರರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಈಚೆಗೆ ಸುರಿದ ಮಳೆಗೆ ಹೊಸದುರ್ಗ, ಚಿತ್ರದುರ್ಗ ತಾಲ್ಲೂಕಿನ ಹಲವೆಡೆ ಬಿತ್ತನೆ ಕಾರ್ಯ ನಡೆಯುತ್ತಿದೆ. ಇನ್ನೂ ಕೆಲವರು ಬಿತ್ತನೆ ಬೀಜ ಸಂಗ್ರಹದಲ್ಲಿ ತೊಡಗಿದ್ದಾರೆ.

ಹೊಸದುರ್ಗ ತಾಲ್ಲೂಕು ವ್ಯಾಪ್ತಿಯಲ್ಲಿ ಬೆಳೆಯುವ ಏಕದಳ ಧಾನ್ಯ ಎಳ್ಳು ಬಿತ್ತನೆ ನಡೆಯುತ್ತಿದೆ. ಹಿರಿಯೂರು ತಾಲ್ಲೂಕಿನಲ್ಲಿ ನೀರಾವರಿ ಹತ್ತಿ ಬಿತ್ತನೆ ಶುರುವಾಗಿದೆ. ಶೇಂಗಾ ಬಿತ್ತನೆ ಬೀಜ ವಿತರಣೆ ಪ್ರಾರಂಭವಾಗಿದ್ದು, ರೈತ ಸಂಪರ್ಕ ಕೇಂದ್ರಗಳಲ್ಲಿ ಬೀಜ ಖರೀದಿ ನಡೆಯುತ್ತಿದೆ.

3.62 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ

ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ 3,62,340 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಇದರಲ್ಲಿ ಮೆಕ್ಕೆಜೋಳ- 87,495 ಹೆಕ್ಟೇರ್, ಶೇಂಗಾ- 1,42,620 ಹೆಕ್ಟೇರ್, ರಾಗಿ-49,210 ಹೆಕ್ಟೇರ್, ಹೆಸರು-5,150 ಹೆಕ್ಟೇರ್, ಎಳ್ಳು-1,650 ಹೆಕ್ಟೇರ್, ಸೂರ್ಯಕಾಂತಿ-9,745 ಹೆಕ್ಟೇರ್, ಹತ್ತಿ-14,120 ಹೆಕ್ಟೇರ್, ಸಿರಿಧಾನ್ಯ-14,945 ಹೆಕ್ಟೇರ್ ಹಾಗೂ 37,405 ಹೆಕ್ಟೇರ್ ವಿಸ್ತೀರ್ಣದಲ್ಲಿ ಇತರ ಬೆಳೆಗಳನ್ನು ಬೆಳೆಯವ ನಿರೀಕ್ಷೆ ಇದೆ.

ಬೇಡಿಕೆಗೆ ಅನುಗುಣವಾಗಿ ರಸಗೊಬ್ಬರ ದಾಸ್ತಾನು ಮಾಡಿಕೊಳ್ಳಲಾಗಿದೆ. ಡಿಎಪಿ-5,520 ಮೆಟ್ರಿಕ್ ಟನ್, ಎಂಒಪಿ- 896 ಮೆಟ್ರಿಕ್ ಟನ್, ಯೂರಿಯಾ-3,442 ಮೆಟ್ರಿಕ್ ಟನ್, ಎನ್‍ಪಿಕೆ- 6,598 ಮೆಟ್ರಿಕ್ ಟನ್, ಎಸ್‍ಎಸ್‍ಪಿ-101 ಮೆಟ್ರಿಕ್ ಟನ್ ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 16,557 ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನು ಮಾಡಿಕೊಳ್ಳಲಾಗಿದೆ ಎಂದು ಕೃಷಿ ಇಲಾಖೆ ಮೂಲಗಳು ಮಾಹಿತಿ ನೀಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.