ಚಿತ್ರದುರ್ಗ: ಶೇಂಗಾ, ಮೆಕ್ಕೆಜೋಳ ಸೇರಿ ಪ್ರಮುಖ ವಾಣಿಜ್ಯ ಬೆಳೆಗಳ ಖರೀದಿ ಕೇಂದ್ರಕ್ಕೆ ಸಂಬಂಧಿಸಿದಂತೆ ಸರ್ಕಾರ ಯಾವುದೇ ತೀರ್ಮಾನ ಕೈಗೊಳ್ಳದೇ ಇರುವುದರಿಂದ ಬೆಂಬಲ ಬೆಲೆ ಸಿಗುವುದು ಅನುಮಾನವಾಗಿದೆ. ಕೃಷಿ ಉತ್ಪನ್ನ ಮಾರುಕಟ್ಟೆಗೆ (ಎಪಿಎಂಸಿ) ವಾಣಿಜ್ಯ ಬೆಳೆಗಳ ಆವಕ ಹೆಚ್ಚಾಗಿದೆ.

ಶೇಂಗಾ, ಮೆಕ್ಕೆಜೋಳ ಸೇರಿ ಇತರ ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸಿ ಖರೀದಿ ಕೇಂದ್ರ ತೆರೆಯುವಂತೆ ಡಿಸೆಂಬರ್ ಮೊದಲ ವಾರದಲ್ಲಿ ಕೃಷಿ ಉತ್ಪನ್ನ ಮಾರಾಟ ಸಮಿತಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿತ್ತು. ಜಿಲ್ಲೆಯ ಎರಡು ಪ್ರಮುಖ ಬೆಳೆಗಳಿಗೆ ಸಂಬಂಧಿಸಿದಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರ ಇನ್ನೂ ತೀರ್ಮಾನ ಕೈಗೊಂಡಿಲ್ಲ. ಹೀಗಾಗಿ, ಶೇಂಗಾ ಬೆಳೆಗಾರರಲ್ಲಿ ಆತಂಕ ಮೂಡಿದೆ.

ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ 84 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ ಬಿತ್ತನೆಯಾಗಿದೆ. ಆರಂಭದಲ್ಲಿ ಸಮಯಕ್ಕೆ ಸರಿಯಾಗಿ ಮಳೆ ಬಾರದೇ ಇದ್ದರೂ ಬಳಿಕ ಕೈಹಿಡಿದಿದೆ. ನಿರೀಕ್ಷೆ ಮೀರಿ ಬೆಳೆ ಕೈಸೇರಿದ್ದರಿಂದ ರೈತರು ಹರ್ಷಗೊಂಡಿದ್ದಾರೆ. ಕೃಷಿ ಉತ್ಪನ್ನ ಮಾರುಕಟ್ಟೆಗೂ ಹೆಚ್ಚಿನ ಪ್ರಮಾಣದಲ್ಲಿ ಶೇಂಗಾ ಬರುತ್ತಿದೆ. ಆದರೆ, ಖರೀದಿ ಕೇಂದ್ರ ಮಾತ್ರ ಇನ್ನೂ ಆರಂಭವಾಗಿಲ್ಲ.

‘ಐದಾರು ವರ್ಷ ಸರಿಯಾದ ಮಳೆ ಇಲ್ಲದೇ ಯಾವ ಬೆಳೆಯೂ ಕೈಸೇರಿಲ್ಲ. ಭೀಕರ ಬರ ಪರಿಸ್ಥಿತಿಗೆ ಪ್ರತಿ ವರ್ಷ ಸಂಕಷ್ಟ ಎದುರಿಸಿದ್ದೇವೆ. ಮುಂಗಾರು ಹಂಗಾಮಿನಲ್ಲಿ ಉತ್ತಮ ಶೇಂಗಾ ಫಸಲು ಬಂದಿದ್ದರೂ, ಬೆಂಬಲ ಬೆಲೆ ಸಿಗುತ್ತಿಲ್ಲ. ಶೇಂಗಾ ಕಿತ್ತು ಬಿಸಿಲಿಗೆ ಒಣಗಿಸಿ ಖರೀದಿ ಕೇಂದ್ರಕ್ಕೆ ಕಾಯುತ್ತಿದ್ದೇವೆ. ಸರ್ಕಾರದಿಂದ ಸಕಾರಾತ್ಮಕ ಪ್ರತಿಸ್ಪಂದನೆ ಸಿಗುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ರೈತ ರವೀಂದ್ರ.

ಪ್ರಸಕ್ತ ವರ್ಷದಲ್ಲಿ ಡಿ.16ರಂದು ಅತಿ ಹೆಚ್ಚು ಶೇಂಗಾ ಮಾರುಕಟ್ಟೆಗೆ ಬಂದಿದೆ. ಒಂದೇ ದಿನ 9,762 ಕ್ವಿಂಟಲ್ ಶೇಂಗಾ ಖರೀದಿಯಾಗಿದೆ. ಕ್ವಿಂಟಲ್‌ಗೆ ಸರಾಸರಿ ₹ 4,572 ಬೆಲೆ ಸಿಕ್ಕಿದೆ. ಇದೇ ದಿನ 2019ರಲ್ಲಿ 1,700 ಕ್ವಿಂಟಲ್ ಶೇಂಗಾ ಆವಕವಾಗಿತ್ತು. 2018–19ನೇ ಆರ್ಥಿಕ ವರ್ಷದಲ್ಲಿ 47,339 ಕ್ವಿಂಟಲ್ ಶೇಂಗಾ ಖರೀದಿಯಾಗಿತ್ತು. ಪ್ರಸಕ್ತ ಏಪ್ರೀಲ್‌ನಿಂದ ಡಿ.17ರವರೆಗೆ 25,063 ಕ್ವಿಂಟಲ್ ಶೇಂಗಾ ಆವಕವಾಗಿದೆ.

ಆಹಾರ ಧಾನ್ಯದ ವ್ಯಾಪ್ತಿಯಲ್ಲಿ ಮೆಕ್ಕೆಜೋಳ ಇಲ್ಲದೇ ಇರುವುದರಿಂದ ಬೆಂಬಲ ಬೆಲೆ ಘೋಷಣೆ ಮಾಡುವುದನ್ನು ಕೇಂದ್ರ ಸರ್ಕಾರ ಕೈಬಿಟ್ಟಿದೆ. ಬೆಲೆ ಕುಸಿತದ ಭೀತಿಯಲ್ಲಿರುವ ರೈತರು ಖರೀದಿ ಕೇಂದ್ರ ತೆರೆಯುವಂತೆ ಒತ್ತಡ ಹೇರುತ್ತಲೇ ಇದ್ದಾರೆ. ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ 78,092 ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆಯಾಗಿದೆ. ಈವರೆಗೆ ಮಾರುಕಟ್ಟೆಯಲ್ಲಿ 57,761 ಕ್ವಿಂಟಲ್ ಮೆಕ್ಕೆಜೋಳ ಖರೀದಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.