ಸಿರಿಗೆರೆ: ಸಮೀಪದ ವಿಜಾಪುರ ಗ್ರಾಮದ ಮರುಳಸಿದ್ದಪ್ಪ ಎಂಬುವರ ತೋಟದಲ್ಲಿ ಈಚೆಗೆ 33ರಿಂದ 40 ಕ್ವಿಂಟಲ್ ಹಸಿ ಅಡಿಕೆಯನ್ನು ರಾತ್ರೋರಾತ್ರಿ ಕದ್ದು ಒಯ್ದಿದ್ದ ನಾಲ್ವರನ್ನು ಭರಮಸಾಗರ ಪೊಲೀಸರು ಶುಕ್ರವಾರ ಮಧ್ಯರಾತ್ರಿ ಬಂಧಿಸಿದ್ದಾರೆ.

ಭರಮಸಾಗರ ಸಮೀಪದ ಗೊಲ್ಲರಹಟ್ಟಿಯ ಮೋಹನ್ ಕುಮಾರ್, ಭರಮಸಾಗರದ ಉಮೇಶ್ ಕೊಳ್ಳಿ, ಚೌಲಿಹಳ್ಳಿ ಗ್ರಾಮದ ಕರಿಬಸಪ್ಪ ಮತ್ತು ಹೆಗ್ಗೆರೆ ಗ್ರಾಮದ ಅಂಜಿನಪ್ಪ ಬಂಧಿತರು.

‘ಇವರು ಬಳಸುತ್ತಿದ್ದ ಮೊಬೈಲ್ ಫೋನ್ನ ಸಂಕೇತಗಳನ್ನು ಆಧರಿಸಿ ಬಂಧಿಸಲಾಗಿದೆ. ಆರೋಪಿಗಳು ಕಳೆದೆರಡು ತಿಂಗಳಿಂದ ಭರಮಸಾಗರ, ಹೆಗ್ಗೆರೆ, ಕೊಳಹಾಳ್, ಅರಬಘಟ್ಟ, ಯಳಗೋಡು, ಬಸವನಶಿವನಕೆರೆ ಸೇರಿ ಸುತ್ತಮುತ್ತಲಿನ ಗ್ರಾಮಗಳ ಅಡಿಕೆ ತೋಟಗಳಲ್ಲಿ 15ರಿಂದ 20 ಕಡೆ ಅಡಿಕೆ ಕಳವು ಮಾಡಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ.

ಶನಿವಾರ ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಪೊಲೀಸರ ಈ ಕ್ರಮಕ್ಕೆ ಸುತ್ತಲಿನ ಅಡಿಕೆ ಕೃಷಿಕರು ಅಭಿನಂದನೆ ಸಲ್ಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.