ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಹರೂ, ವಾಜಪೇಯಿ ಅವಹೇಳನ ನಿಲ್ಲಿಸಿ: ಬಿ.ಶ್ರೀರಾಮುಲು

ಸಾರಿಗೆ ಸಚಿವ ಬಿ.ಶ್ರೀರಾಮುಲು ಮನವಿ
Last Updated 15 ಆಗಸ್ಟ್ 2021, 13:06 IST
ಅಕ್ಷರ ಗಾತ್ರ

ಚಿತ್ರದುರ್ಗ: ಪ್ರಧಾನಿ ಹುದ್ದೆ ಅಲಂಕರಿಸಿದ್ದ ಜವಾಹರಲಾಲ್ ನೆಹರೂ ಹಾಗೂ ಅಟಲ್ ಬಿಹಾರಿ ವಾಜಪೇಯಿ ಅವರದು ಮೇರು ವ್ಯಕ್ತಿತ್ವ. ಇವರ ಬಗ್ಗೆ ಎರಡೂ ಪಕ್ಷಗಳ (ಕಾಂಗ್ರೆಸ್ ಮತ್ತು ಬಿಜೆಪಿ) ನಾಯಕರು ಅವಹೇಳನಕಾರಿಯಾಗಿ ಮಾತನಾಡುವುದನ್ನು ನಿಲ್ಲಿಸಬೇಕು ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಹೇಳಿದರು.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವಾಜಪೇಯಿ ಮತ್ತು ನೆಹರೂ ಹಿರಿಯ ನಾಯಕರು. ರಾಜಕಾರಣಕ್ಕೆ ಇಂಥ ದೊಡ್ಡ ನಾಯಕರ ಹೆಸರು ಎಳೆದು ತರುವುದು ಸರಿಯಲ್ಲ. ಇಬ್ಬರ ಹೆಸರಿನಲ್ಲಿ ನಡೆಯುತ್ತಿರುವ ವಿವಾದಕ್ಕೆ ತೆರೆ ಎಳೆಯಬೇಕಿದೆ’ ಎಂದು ಹೇಳಿದರು.

‘ನೆಹರೂ ಬಗ್ಗೆ ವಾಜಪೇಯಿ ಅವರಿಗೆ ಅಪಾರ ಗೌರವವಿತ್ತು. ಮೊರಾರ್ಜಿ ದೇಸಾಯಿ ಸಚಿವ ಸಂಪುಟದಲ್ಲಿ ಸಚಿವರಾಗಿದ್ದ ವಾಜಪೇಯಿ, ನೆಹರೂ ಅವರ ಪ್ರತಿಮೆ ಪುನರ್ ಸ್ಥಾಪನೆ ಆಗುವಂತೆ ನೋಡಿಕೊಂಡರು. ಈ ಇಬ್ಬರೂ ನಾಯಕರ ಬಗ್ಗೆ ಆಡುತ್ತಿರುವ ಮಾತುಗಳು ರಾಜಕಾರಣಿಗಳಿಗೆ ಶೋಭೆ ತರುವುದಿಲ್ಲ. ಯಾರನ್ನು ಬೇಕಾದರೂ ಟೀಕೆ ಮಾಡಬಹುದು ಎಂಬುದು ಸರಿಯಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT