ಹೊಳಲ್ಕೆರೆ: ತಾಳ್ಯ ಹೋಬಳಿಯ ಎಲ್ಲಾ ಕೆರೆಗಳಿಗೂ ಭದ್ರಾ ನೀರು ಹರಿಸಲಾಗುವುದು ಎಂದು ಶಾಸಕ ಎಂ.ಚಂದ್ರಪ್ಪ ಹೇಳಿದರು.

ತಾಲ್ಲೂಕಿನ ಮತಿಘಟ್ಟದಲ್ಲಿ ₹ 31.14 ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಭಾನುವಾರ ಚಾಲನೆ ನೀಡಿದ ಬಳಿಕ ಮಾತನಾಡಿದರು.

ಪಟ್ಟಣದ ಚಿಕ್ಕ ಕೆರೆಯಲ್ಲಿ ಸುಮಾರು ₹ 100 ಕೋಟಿ ವೆಚ್ಚದಲ್ಲಿ ಜಾಕ್ ವೆಲ್ ನಿರ್ಮಿಸಲಾಗಿದೆ. ಅಲ್ಲಿಂದ ಟಿ.ಎಮ್ಮಿಗನೂರು ಗುಡ್ಡದಲ್ಲಿ ಹೊಸದಾಗಿ ನಿರ್ಮಿಸಿರುವ ಹೊಸಕೆರೆಗೆ ಏತ ನೀರಾವರಿ ಮೂಲಕ ನೀರು ಹರಿಸಲಾಗುವುದು. ಅಲ್ಲಿಂದ ಎಡದಂಡೆ ಹಾಗೂ ಬಲದಂಡೆ ಕಾಲುವೆಗಳ ಮೂಲಕ ತಾಳ್ಯ, ಶಿವಗಂಗಾ, ಟಿ.ಎಮ್ಮಿಗನೂರು, ಹೊರಕೆರೆ ದೇವರಪುರ, ಗುಂಡಿಕೆರೆ, ಕೆರೆಯಾಗಳ ಹಳ್ಳಿ ಕೆರೆಗಳಿಗೆ ನೀರು ಹರಿಸಲಾಗುವುದು. ನೀರು ಬಂದ ನಂತರ ಬರಪೀಡಿತ ಪ್ರದೇಶವಾಗಿರುವ ತಾಳ್ಯ ಹೋಬಳಿಯಲ್ಲಿ ಅಂತರ್ಜಲ ಹೆಚ್ಚಲಿದೆ ಎಂದರು.

ಮತಿಘಟ್ಟದಿಂದ ತಾಲ್ಲೂಕಿನ ಗಡಿ ಗ್ರಾಮ ತಿರುಮಲಾಪುರದವರೆಗೆ 13.10 ಕಿ.ಮೀ ರಸ್ತೆ ಅಭಿವೃದ್ಧಿ ಮಾಡಲಾಗುತ್ತಿದೆ. ಆಧುನಿಕ ಯಂತ್ರದಲ್ಲಿ ರಸ್ತೆ ಕಾಮಗಾರಿ ನಡೆಸುವುದರಿಂದ ಉತ್ತ,ಮ ಗುಣಮಟ್ಟದ ರಸ್ತೆ ನಿರ್ಮಾಣ ಆಗಲಿದೆ. ರಸ್ತೆ ನಿರ್ಮಿಸುವುದರಿಂದ ಮತಿಘಟ್ಟ, ಹೊರಕೆರೆ ದೇವರಪುರ, ನಂದನ ಹೊಸೂರು, ಬೂದಿಪುರ, ಉಪ್ಪರಿಗೇನಹಳ್ಳಿ ಸುತ್ತಲಿನ ನಿವಾಸಿಗಳು ಚಿತ್ರಹಳ್ಳಿ ಗೇಟ್ ಮೂಲಕ ಸುತ್ತಿ ಬಳಸಿ ಸಂಚರಿಸುವ ಬದಲು ನೇರವಾಗಿ ಟಿ.ನುಲೇನೂರು ಗೇಟ್ ಮೂಲಕ ಚಿತ್ರದುರ್ಗ ತಲುಪಬಹುದು. ಮತಿಘಟ್ಟದಿಂದ ತಾಳ್ಯದವರೆಗೆ ರಸ್ತೆ ಸಂಪರ್ಕ ಸಿಗಲಿದ್ದು, ಈ ಭಾಗದ ಜನ ನೇರವಾಗಿ ಹೋಬಳಿ ಕೇಂದ್ರ ತಾಳ್ಯಕ್ಕೂ ಹೋಗಬಹುದು ಎಂದರು.

‘ಶಾಸಕ ಎಂ.ಚಂದ್ರಪ್ಪ ಹೆಚ್ಚು ಅನುದಾನ ತಂದು ಕ್ಷೇತ್ರದ ಅಭಿವೃದ್ಧಿ ಮಾಡುತ್ತಿದ್ದಾರೆ. ಎಲ್ಲಾ ಕಡೆ ಚೆಕ್ ಡ್ಯಾಂ, ಹೊಸ ಕೆರೆಗಳನ್ನು ನಿರ್ಮಿಸುವ ಮೂಲಕ ರೈತರ ಬದುಕು ಹಸನು ಮಾಡುತ್ತಿದ್ದಾರೆ. ಕ್ಷೇತ್ರದ ಪ್ರತಿ ಗ್ರಾಮದಲ್ಲೂ ರಸ್ತೆ, ಶಾಲಾ ಕೊಠಡಿ ನಿರ್ಮಿಸಿದ್ದಾರೆ’ ಎಂದು ಹೊರಕೆರೆ ದೇವರಪುರ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನಂದನ ಹೊಸೂರು ಪ್ರವೀಣ್ ಹೇಳಿದರು.

ನಿವೃತ್ತ ಶಿಕ್ಷಕ ನಾಗಲಿಂಗಪ್ಪ, ಜಯಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಅಂಕಳಪ್ಪ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಪರಮೇಶ್ವರಪ್ಪ, ಎಲೆ ರಾಜಪ್ಪ, ಎಂ.ದಿವಾಕರ್, ರಾಘಣ್ಣ, ನಾಗಣ್ಣ, ಗುತ್ತಿಗೆದಾರ ಸಿದ್ದೇಶ್ ಹಾಗೂ ಗ್ರಾಮಸ್ಥರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.