ಚಿಕ್ಕಜಾಜೂರು: ಚಿಕ್ಕಜಾಜೂರಿನ ಮಾರುತಿನಗರ ಬಡಾವಣೆ ಹಾಗೂ ಕಾವಲುಹಟ್ಟಿ ಗ್ರಾಮಗಳ ಮಧ್ಯದಲ್ಲಿ ಕಡಿದಾದ ಬೆಟ್ಟದ ಇಳಿಜಾರು ಪ್ರದೇಶ ಹಾಗೂ ಹಳ್ಳದಲ್ಲಿ ಕರಡಿವಾಸಿಸುತ್ತಿದ್ದು, ರೈತರಲ್ಲಿ ಆತಂಕ ಮನೆ ಮಾಡಿದೆ.

ರೈತರು ಜಾನುವಾರುಗಳಿಗೆ ಮೇವು ತರಲು ಜಮೀನುಗಳಿಗೆ ಹೋಗುವಾಗ ಅಲ್ಲಿನ ರೈಲ್ವೆ ಹಳಿಯನ್ನು ಕರಡಿ ದಾಟುತ್ತಿದ್ದು, ಆ ದೃಶ್ಯವನ್ನು ರೈತರೊಬ್ಬರೊಬ್ಬರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಟ್ಟಿದ್ದಾರೆ.

ಜಮೀನುಗಳಲ್ಲಿ ಮೆಕ್ಕೆ ಜೋಳ ತೆನೆ ಬಿಟ್ಟಿದ್ದು, ಕರಡಿ ಕೂಡ ಅಲ್ಲೇ ಬೀಡು ಬಿಟ್ಟಿದೆ. ಇದರಿಂದಾಗಿ ನಾವು ಒಂಟಿಯಾಗಿ ಜಮೀನುಗಳಿಗೆ ಹೋಗಲು ಭಯ ಪಡುವಂತಾಗಿದೆ ಎನ್ನುತ್ತಾರೆ ರೈತರು.

ಜೇನು ಸಾಕಾಣೆ ಬಾಕ್ಸ್ಗೆ ಹಾನಿ: ಚಿಕ್ಕಜಾಜೂರಿನ ಎಚ್.ಎಂ. ದಯನಂದ್ ಅವರ ಮಗ ವೀರೇಶ್ ಅವರು ತಮ್ಮ ತೋಟದಲ್ಲಿ ಸಹಜ ಕೃಷಿ ಮಾಡುತ್ತಿದ್ದು, ವಿವಿಧ ಬಗೆಯ ಹಣ್ಣಿನ ಗಿಡಗಳಿಗೆ ಪರಾಗಸ್ಪರ್ಶ ಮಾಡಿಸಲು ಜೇನು ಹುಳುಗಳ ಪೆಟ್ಟಿಗೆಗಳನ್ನಿಟ್ಟು ಸಾಕಾಣಿಕೆ ಮಾಡುತ್ತಿದ್ದಾರೆ. ಕಳೆದ ರಾತ್ರಿ ಕರಡಿ ಈ ಜೇನು ಪೆಟ್ಟಿಗೆ ಕೆಡವಿ ಜೇನನ್ನು ತಿನ್ನುತ್ತಿರುವುದು ನಮ್ಮ ತೋಟದ ಮನೆಯ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎಂದು ರೈತ ವೀರೇಶ್ ತಿಳಿಸಿದ್ದಾರೆ.

ಸಂಬಂಧ ಪಟ್ಟ ಅರಣ್ಯ ಇಲಾಖೆಯವರು ಕರಡಿಯನ್ನು ಸೆರೆ ಹಿಡಿದು, ರೈತರ ಆತಂಕವನ್ನು ನಿವಾರಿಸಬೇಕೆಂದು ರೈತರಾದ ಎಚ್.ಎಸ್.ಪ್ರಕಾಶ್, ಹಗೇದ್ ಮಂಜು, ಹನುಮಂತಪ್ಪ, ಮಾರಣ್ಣ, ಶ್ರೀನಿವಾಸ ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.