ಸೋಮವಾರ, ಅಕ್ಟೋಬರ್ 26, 2020
21 °C
ರಾಣಿಕೆರೆಗೆ 18 ಅಡಿ ನೀರು ಸಂಗ್ರಹ

3ನೇ ಬಾರಿ ಕೋಡಿ ಬಿದ್ದ ಚಿಕ್ಕಮದುರೆ ಕರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಳ್ಳಕೆರೆ: ಶುಕ್ರವಾರ ಮತ್ತು ಶನಿವಾರ ಎರಡು ರಾತ್ರಿ ಸುರಿದ ಭಾರಿ ಮಳೆಯಿಂದ ಚಿತ್ರದುರ್ಗ ಹಾಗೂ ಕಲ್ಲಹಳ್ಳಿ ಗ್ರಾಮದ ಸುತ್ತ ಇರುವ ಕೆರೆ, ಕಟ್ಟೆಗಳು ತುಂಬಿವೆ.

ರಭಸದಿಂದ ಹರಿದ ಹೆಚ್ಚುವರಿ ಮಳೆ ನೀರು ಹಳ್ಳದ ಮೂಲಕ ತಾಲ್ಲೂಕಿನ ಚಿಕ್ಕಮದುರೆ ಕೆರೆ ಸೇರಿದೆ. ಇದರಿಂದ ಭಾನುವಾರ ಚಿಕ್ಕಮದುರೆ ಕೆರೆ ಕೋಡಿ ಬಿದ್ದಿದೆ. ಈ ಕೆರೆಗೆ ಎರಡು ತಿಂಗಳಲ್ಲಿ ಮೂರು ಬಾರಿ ಕೋಡಿ ಬಿದ್ದಿದೆ.

ಕೋಡಿಯಲ್ಲಿ ಹರಿಯುತ್ತಿರುವ ಕರೆಯ ನೀರು ಗೋಪನಹಳ್ಳಿ ಹಾಗೂ ರೆಡ್ಡಿಹಳ್ಳಿ ಮಾರ್ಗದ ಗರಣಿ ಹಳ್ಳದ ಮೂಲಕ ಮೀರಾಸಾಬಿಹಳ್ಳಿ ಗ್ರಾಮದ ರಾಣಿಕೆರೆ ಮತ್ತು ದೊಡ್ಡೇರಿ ಕೆರೆಗೆ ಹರಿಯುತ್ತಿದೆ. ಈಗಾಗಲೇ ರಾಣಿಕೆರೆಗೆ 18 ಅಡಿಗಿಂತಲೂ ಹೆಚ್ಚು ನೀರು ಸಂಗ್ರಹವಾಗಿದೆ. ಇದರಿಂದ ಕೆರೆಯಂಚಿನ ಗ್ರಾಮದ ಜನರು ಸಂತಸಗೊಂಡಿದ್ದಾರೆ.

ಶಾಸಕರ ಮನವಿ: ಸೋಮಗುದ್ದು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಮದುರೆ ಕೆರೆ ಮೂರನೇ ಬಾರಿ ಕೋಡಿ ಬಿದ್ದ ಕಾರಣ ಶಾಸಕ ಟಿ.ರಘುಮುರ್ತಿ ಭಾನುವಾರ ಭೇಟಿ ನೀಡಿ ಕೆರೆ ವೀಕ್ಷಿಸಿದರು.

ಕೆರೆಯಲ್ಲಿ ಹೆಚ್ಚು ನೀರು ತುಂಬಿರುವ ಕಾರಣ ಕೆರೆ ಬಳಿ ಯಾರೂ ಸುಳಿಯಬಾರದು ಎಂದು ಗ್ರಾಮದ ಜನರಲ್ಲಿ ಶಾಸಕರು ಮನವಿ ಮಾಡಿದರು.

ಗೋಪನಹಳ್ಳಿ ಬಳಿ ಗರಣಿಹಳ್ಳದ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಎತ್ತುಗಳನ್ನು ಗ್ರಾಮದ ಜನ ರಕ್ಷಣೆ ಮಾಡಿದರು.

ಮಳೆಗೆ ಗೊರ್ಲಕಟ್ಟೆ ಗ್ರಾಮದ ಪುಟ್ಟು ಎಂಬುವರ ಮನೆ ಭಾಗಶಃ ಕುಸಿದು ಬಿದ್ದಿದೆ. ಇದರಿಂದ ₹ 15 ಸಾವಿರ ನಷ್ಟವಾಗಿದೆ ಎಂದು ಅಂದಾಜಿಸ ಲಾಗಿದೆ ಎಂದು ತಹಶೀಲ್ದಾರ್ ಎಂ.ಮಲ್ಲಿಕಾರ್ಜುನ ತಿಳಿಸಿದರು.

ಮಳೆ ವರದಿ: ನಾಯಕನಹಟ್ಟಿ 1.4 ಮಿ.ಮೀ, ದೇವರಮರಿಕುಂಟೆ 32.2 ಮಿ.ಮೀ, ತಳಕು 2.1 ಮಿ.ಮೀ, ಪರಶುರಾಂಪುರ 3.10 ಮಿ.ಮೀ, ಚಳ್ಳಕೆರೆ ಕಸಬಾ 6.2 ಮಿ.ಮೀ ಮಳೆಯಾಗಿರುವುದು ಮಳೆ ಮಾಪನ ಕೇಂದ್ರದಲ್ಲಿ ದಾಖಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.