ಚಿತ್ರದುರ್ಗ: ಮೊಳ ಮಲ್ಲಿಗೆ ಹೂವು ₹ 100, ಮಾರು ಸೇವಂತಿಗೆ ಹೂವು ₹ 150, ಕೆ.ಜಿ ಏಲಕ್ಕಿ ಬಾಳೆಹಣ್ಣು ₹ 120, ಕೆ.ಜಿ ಸೇಬು ₹ 250...ಹೀಗೆ ಅಗತ್ಯ ವಸ್ತುಗಳ ಬೆಲೆ ಏರಿಕೆಯ ನಡುವೆಯೂ ಜಿಲ್ಲೆಯಾದ್ಯಂತ ಸಾರ್ವಜನಿಕರ ಮನೆ, ಮನಗಳಲ್ಲಿ ಯುಗಾದಿ ಹಬ್ಬದ ಸಂಭ್ರಮ ಮನೆ ಮಾಡಿದೆ.

ಹಿಂದೂ ಧರ್ಮೀಯರು ಹೊಸ ವರ್ಷವನ್ನು ಸ್ವಾಗತಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಯುಗಾದಿ ಜೊತೆ ಮುಸ್ಲಿಮರ ಪವಿತ್ರ ರಂಜಾನ್ ಆಚರಣೆಯೂ ಬಂದಿರುವ ಕಾರಣ ಮಾರುಕಟ್ಟೆಗಳಲ್ಲಿ ಭರ್ಜರಿ ಖರೀದಿ ನಡೆದಿದೆ. ಹೀಗಾಗಿ ವಸ್ತುಗಳ ಬೆಲೆಗಳು ಗಗನಮುಖಿಯಾಗಿ ಸಾಗುತ್ತಿವೆ. ನಗರದ ಲಕ್ಷ್ಮಿ ಬಜಾರ್, ಸಂತೆ ಹೊಂಡ, ಆನೆಬಾಗಿಲು, ವಾಸವಿ ಮಹಲ್ ಬಳಿ ಶನಿವಾರ ಜನಸಂದಣಿ ಅಧಿಕವಾಗಿತ್ತು.

ಬೇಸಿಗೆ ಬಿಸಿಲಿನ ತೀವ್ರತೆಯ ಕಾರಣ ಬಹುತೇಕ ಮಂದಿ ಸಂಜೆ ವೇಳೆಗೆ ಮಾರುಕಟ್ಟೆಗೆ ಬಂದು ಅಗತ್ಯ ವಸ್ತು ಖರೀದಿ ಮಾಡಿದರು. ಬಟ್ಟೆ ಅಂಗಡಿ, ಬಂಗಾರದ ಅಂಗಡಿಗಳಲ್ಲೂ ಗ್ರಾಹಕ ಸಂಖ್ಯೆ ಹೆಚ್ಚಾಗಿತ್ತು. ಕೆಲವರು ಮಧ್ಯಾಹ್ನದ ಉರಿ ಬಿಸಿಲಿನಲ್ಲೇ ಗಾಂಧಿ ವೃತ್ತ, ಆನೆಬಾಗಿಲು ರಸ್ತೆ, ಸಂತೆ ಹೊಂಡ, ಮೆದೇಹಳ್ಳಿ ರಸ್ತೆ ಹಾಗೂ ನ್ಯೂ ಸಂತೆ ಮೈದಾನ ಸೇರಿ ಮತ್ತಿತರ ಪ್ರದೇಶಗಳಲ್ಲಿ ಹಬ್ಬಕ್ಕೆ ಅಗತ್ಯವಾದ ಪೂಜಾ ಸಾಮಗ್ರಿ, ಹೂವು, ಹಣ್ಣು, ಮಾವು, ಬೇವು, ಬಾಳೆ ಎಲೆ, ತರಕಾರಿ ಖರೀದಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಪೂಜೆಗೆ ಬೇಕಾದ ಸೇಬು, ದಾಳಿಂಬೆ, ಕಿತ್ತಳೆ, ಮೋಸಂಬಿ, ಬಾಳೆಹಣ್ಣು, ದ್ರಾಕ್ಷಿ ಹಣ್ಣುಗಳ ದರ ಏರಿಕೆಯಾಗಿದ್ದರೂ ಖರೀದಿ ಮಾಡಿದರು. ದುಂಡು ಮಲ್ಲಿಗೆ ಕೆ.ಜಿ.ಗೆ ₹ 1,000 ಇದ್ದು, ಸೂಜಿಮಲ್ಲಿಗೆ ಕೆ.ಜಿಗೆ ₹ 800ವರೆಗೂ ಮಾರಾಟವಾದವು.

ಮಲ್ಲಾಪುರ, ಮೆದೇಹಳ್ಳಿ, ಮದಕರಿಪುರ, ಹುಣಸೆಕಟ್ಟೆ, ಹಾಯ್ಕಲ್, ಬೆಳಗಟ್ಟ, ಅನ್ನೇಹಾಳ್, ದೊಡ್ಡ ಸಿದ್ದವ್ವನಹಳ್ಳಿ, ಜೆ.ಎನ್. ಕೋಟೆ, ಎಣ್ಣೆಗೆರೆ, ಕುಂಚಿಗನಾಳ್, ಬೊಮ್ಮಕ್ಕನಹಳ್ಳಿ, ನೆಲಗೇತನಹಟ್ಟಿ, ಸಜ್ಜನಕೆರೆ, ಬೊಮ್ಮೇರಹಳ್ಳಿ, ರಾಮದುರ್ಗ, ಜೋಡಿ ಚಿಕ್ಕೇನಹಳ್ಳಿ, ಕಕ್ಕೇರು, ಪಲ್ಲವಗೆರೆ, ಪಾಪೇನಹಳ್ಳಿ ಸೇರಿದಂತೆ ಚಿತ್ರದುರ್ಗ, ಹಿರಿಯೂರು, ಚಳ್ಳಕೆರೆ ಭಾಗದಿಂದ ಅತಿ ಹೆಚ್ಚಿನ ಪ್ರಮಾಣದಲ್ಲಿ ಹೂವು ಮಾರುಕಟ್ಟೆಗೆ ಬಂದಿತ್ತು.

ಹಬ್ಬದ ಸಂಭ್ರಮದಲ್ಲಿ ಮನೆಗಳಿಗೆ ಅಲಂಕಾರ ಮಾಡುವ ಉದ್ದೇಶಕ್ಕೆ ಮಹಿಳೆಯರು ಆಲಂಕಾರಿಕ ಸಾಮಗ್ರಿಗಳನ್ನು ಖರೀದಿ ಮಾಡಿದರು. ಖರೀದಿ ಭರಾಟೆಯಿಂದಾಗಿ ನಗರದ ವಿವಿಧೆಡೆ ವಾಹನ ದಟ್ಟಣೆ ಉಂಟಾಗಿತ್ತು. ಪೊಲೀಸರು ವಾಹನಗಳ ಸಂಚಾರ ಮಾರ್ಗ ಬದಲಾವಣೆ ಮಾಡಿದ್ದರೂ ಟ್ರಾಫಿಕ್ ನಿಯಂತ್ರಿಸಲು ಹರಸಾಹಸಪಟ್ಟರು. ಯುಗಾದಿ ಖರೀದಿಗಾಗಿಯೇ ಮಾರುಕಟ್ಟೆಯನ್ನು ಹಳೇ ಮಾಧ್ಯಮಿಕ ಶಾಲಾ ಮೈದಾನಕ್ಕೆ ಸ್ಥಳಾಂತರ ಮಾಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.