ಚಿತ್ರದುರ್ಗ: ಸಿಬಿಐನ ನಿವೃತ್ತ ಎಸ್ಪಿ ಕೆ.ವೈ.ಗುರುಪ್ರಸಾದ್ ಅವರ ₹ 97 ಲಕ್ಷ ಹಣವನ್ನು ಅಪಹರಿಸಿ ಪರಾರಿಯಾಗಿದ್ದ ಚಾಲಕ ರಮೇಶ್ನನ್ನು ಚಳ್ಳಕೆರೆ ಠಾಣೆ ಪೊಲೀಸರು 24 ಗಂಟೆಯೊಳಗೆ ಬಂಧಿಸಿದ್ದಾರೆ.

ಬೆಂಗಳೂರಿನ ಗುರುಪ್ರಸಾದ್ ಅವರು ಆ.25ರಂದು ಬಳ್ಳಾರಿಯಲ್ಲಿದ್ದ ತಮ್ಮ ಜಮೀನನ್ನು ಮಾರಾಟ ಮಾಡಿದ್ದರು. ಆ ಹಣವನ್ನು ಬಾಡಿಗೆ ಕಾರ್ನಲ್ಲಿಟ್ಟುಕೊಂಡು ಹೊರಟಿದ್ದರು. ಚಳ್ಳಕೆರೆ ಬಳಿ ಊಟ ಮಾಡಲು ಹೋಟೆಲ್ವೊಂದಕ್ಕೆ ತೆರಳಿದ್ದರು. ಈ ವೇಳೆ ಚಾಲಕ ರಮೇಶ್ ಹಣದೊಂದಿಗೆ ಪರಾರಿಯಾಗಿದ್ದ.

ಗುರುಪ್ರಸಾದ್ ತಕ್ಷಣವೇ ಈ ಕುರಿತು ಚಳ್ಳಕೆರೆ ಠಾಣೆಗೆ ಮಾಹಿತಿ ನೀಡಿದ್ದರು. ಮೂರು ತಂಡಗಳೊಂದಿಗೆ ಆರೋಪಿಯ ಬೆನ್ನು ಹತ್ತಿದ್ದ ಪೊಲೀಸರು ಆ.26ರಂದು ಪಾವಗಡ ಬಳಿ ಆರೋಪಿಯನ್ನು ಬಂಧಿಸಿದ್ದಾರೆ.

ಈತ ಪಾವಗಡದ ಅಜ್ಜಿಯ ಮನೆಯಲ್ಲಿಟ್ಟಿದ್ದ ₹ 97 ಲಕ್ಷ ಮೊತ್ತವನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.