ಹೊಸದುರ್ಗ: ತಾಲ್ಲೂಕಿನ ಗುಡ್ಡದನೇರಲಕೆರೆ ಗ್ರಾಮದ ದೊಡ್ಡವಜ್ರದಲ್ಲಿ ಬುಧವಾರ ನಸುಕಿನಲ್ಲಿ ದಶರಥರಾಮೇಶ್ವರ ಸ್ವಾಮಿಯ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.

ರಥೋತ್ಸವದ ಅಂಗವಾಗಿ ಮಾರ್ಚ್ 8 ರಿಂದ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಬುಧವಾರ ಬ್ರಾಹ್ಮೀ ಮುಹೂರ್ತದಲ್ಲಿ ಕಂಚೀ ವರದರಾಜಸ್ವಾಮಿಯು ಕುಣಿದು ಕುಪ್ಪಳಿಸುತ್ತಾ ರಥದತ್ತ ಸಾಗಿತು. ದಶರಥರಾಮೇಶ್ವರ ಸ್ವಾಮಿ ಹಾಗೂ ದಸೂಡಿ ಆಂಜನೇಯ ಸ್ವಾಮಿಯೂ ರಥದತ್ತ ಸಾಗಿದವು. ಈ ಮಧ್ಯೆ ರಥಕ್ಕೆ ವಿವಿಧ ಪೂಜಾ ಕಾರ್ಯಗಳು ನಡೆದವು. ದಶರಥರಾಮೇಶ್ವರ ಸ್ವಾಮಿಯು ಮೂರು ಸುತ್ತು ಪ್ರದಕ್ಷಿಣೆ ಹಾಕಿ ರಥವೇರಿ ಗದ್ದುಗೆ ಅಲಂಕರಿಸಿತು. ಭಕ್ತರ ಜಯಘೋಷಗಳ ನಡುವೆ ರಥೋತ್ಸವ ನಡೆಯಿತು. ಈ ದೃಶ್ಯ ಕಣ್ತುಂಬಿಕೊಂಡ ಅಪಾರ ಭಕ್ತರು ಇಷ್ಟಾರ್ಥ ಪೂರೈಸುವಂತೆ ಪ್ರಾರ್ಥಿಸಿದರು.

ಶಿವರಾತ್ರಿಯ ನಂತರ ಸ್ವಾಮಿಯ ರಥೋತ್ಸವ ನಡೆಯುತ್ತದೆ. ನಸುಕಿನಲ್ಲಿ ನಡೆಯುವ ದಶರಥರಾಮೇಶ್ವರ ಸ್ವಾಮಿಯ ರಥೋತ್ಸವಕ್ಕೆ ದೂರದ ಜಿಲ್ಲೆಗಳಿಂದಲೂ ಅಪಾರ ಭಕ್ತರು ಆಗಮಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.