ಗುರುವಾರ , ಅಕ್ಟೋಬರ್ 22, 2020
23 °C

ದುರ್ಗಾಪರಮೇಶ್ವರಿ ಮೂರ್ತಿ ಪ್ರತಿಷ್ಠಾಪನೆ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸದುರ್ಗ: ಶರನ್ನವರಾತ್ರಿ ದಸರಾ ಮಹೋತ್ಸವದ ಅಂಗವಾಗಿ ಶನಿವಾರ ಪಟ್ಟಣದ ಅಶೋಕ ರಂಗಮಂದಿರದ ದುರ್ಗಾದೇವಿ ಮಂಟಪದಲ್ಲಿ 3ನೇ ವರ್ಷದ ದುರ್ಗಾಪರಮೇಶ್ವರಿ ಮೂರ್ತಿ ಪ್ರತಿಷ್ಠಾಪನೆ ಸಂಭ್ರಮದಿಂದ ನಡೆಯಿತು.

ಬೆಳಿಗ್ಗೆಯಿಂದಲೂ ಗಂಗಾಪೂಜೆ, ಕ್ಷೀರಾಭಿಷೇಕ, ಕುಂಕುಮಾರ್ಚನೆ, ಮಹಾಮಂಗಳಾರತಿ, ಮಹಿಳಾ ಕಲಾವಿದರಿಂದ ಭಜನೆ ಸೇರಿ ವಿವಿಧ ಕಾರ್ಯಕ್ರಮಗಳು ಶ್ರದ್ಧಾಭಕ್ತಿಯಿಂದ ನೆರವೇರಿದವು. ಅ. 26ರ ವರೆಗೂ ಪ್ರತಿದಿನ ವಿಶೇಷ ಪೂಜೆ, ಭಜನೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ಕಾರ್ಯಕ್ರಮ ಜರುಗಲಿವೆ.

ಅ. 26ರ ಸೋಮವಾರ ವಿಜಯದಶಮಿಯಂದು ದುರ್ಗಾಪರಮೇಶ್ವರಿ ಮೂರ್ತಿಯ ರಾಜಬೀದಿ ಉತ್ಸವದ ಮೆರವಣಿಗೆ ನಂತರ ಇಲ್ಲಿನ ಐತಿಹಾಸಿಕ ಮಠದ ಹೊಂಡದಲ್ಲಿ ವಿಸರ್ಜನೆ ಮಾಡಲಾಗುವುದು. ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಕಾರಣ ಸೋಂಕು ನಿಯಂತ್ರಣದ ನಿಯಮ ಪಾಲನೆಯೊಂದಿಗೆ ಮಹೋತ್ಸವದ ಯಶಸ್ಸಿಗೆ ನಾಗರಿಕರು ಸಹಕರಿಸಬೇಕು ಎಂದು ದುರ್ಗಾ ಸೇವಾ ಸಮಿತಿ ಅಧ್ಯಕ್ಷ ಟಿ. ಮಂಜುನಾಥ್‌ ಮನವಿ ಮಾಡಿದರು.

ಪುರಸಭೆ ಸದಸ್ಯ ದಾಳಿಂಬೆ ಗಿರೀಶ್‌, ದುರ್ಗಾ ಸೇವಾ ಸಮಿತಿಯ ಕೆ.ಆರ್‌. ಪ್ರವೀಣ್‌, ಎಸ್‌.ಕೆ. ಮಂಜುನಾಥ್‌, ಡಿ. ರಾಮಚಂದ್ರ, ಎಚ್‌.ಬಿ. ಮಂಜುನಾಥ್‌, ಆರ್‌.ಜಿ. ಪ್ರಸನ್ನಕುಮಾರ್‌, ಫಕ್ರುದ್ದೀನ್‌, ಪಾಂಡುರಾಯ್ಕರ್‌, ರಾಘವೇಂದ್ರ, ಪ್ರದೀಪ್‌ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.