ಹೊಸದುರ್ಗ: ಲಾಕ್ಡೌನ್ನಿಂದಾಗಿ ವೀಳ್ಯದೆಲೆ ದರ ಕುಸಿತವಾಗಿದ್ದು, ಬೆಳೆಗಾರರು ಕಂಗಾಲಾಗಿದ್ದಾರೆ.

ತಾಲ್ಲೂಕಿನ ದೊಡ್ಡಕಿಟ್ಟದಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಲವು ಹಳ್ಳಿಗಳಲ್ಲಿ ನೂರಾರು ಮಂದಿ ರೈತರು ಹಲವು ವರ್ಷಗಳಿಂದಲೂ ವೀಳ್ಯದೆಲೆ ಬೆಳೆಯುತ್ತಿದ್ದಾರೆ. ಲಾಕ್ಡೌನ್ಗಿಂತ ಮೊದಲು ಬಳ್ಳಿಯಿಂದ ವೀಳ್ಯದೆಲೆ ಬಿಡಿಸಿ, ಪೆಂಡಿ ಕಟ್ಟಿಕೊಂಡು ಚಿತ್ರದುರ್ಗದ ಮಾರುಕಟ್ಟೆಗೆ ಸಾಗಿಸಿ ಮಾರಾಟ ಮಾಡುತ್ತಿದ್ದರು. ಆಗ ಒಂದು ಪೆಂಡಿ ವೀಳ್ಯದೆಲೆ ₹4,000ದಿಂದ
₹ 5,000ದವರೆಗೆ ದರ ಇತ್ತು. ಆದರೆ, ಲಾಕ್ಡೌನ್ ಆಗುತ್ತಿದ್ದಂತೆ ಸ್ಥಳೀಯ ಮಾರುಕಟ್ಟೆ ಬಂದ್ ಆಗಿದೆ.

ಒಂದೆಡೆ ಕೊರೊನಾ ಸೋಂಕು ಭೀತಿ, ಮತ್ತೊಂದೆಡೆ ಲಾಕ್ಡೌನ್ನಿಂದ ಮುಕ್ತ ಸಾರಿಗೆ ವ್ಯವಸ್ಥೆಗೆ ಅವಕಾಶ ಇಲ್ಲದಿರುವುದರಿಂದ ಇಲ್ಲಿನ ಬಡ ರೈತರು ಹೊರ ಜಿಲ್ಲೆ ಹಾಗೂ ರಾಜ್ಯದ ಮಾರುಕಟ್ಟೆಗೆ ವೀಳ್ಯದೆಲೆ ಸಾಗಿಸಲು ಪರದಾಡುವಂತಾಗಿದೆ.

ಹೊರಗಿನ ಮಾರುಕಟ್ಟೆಗೆ ತೆಗೆದುಕೊಂಡು ಹೋಗಿ ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ. ಸ್ಥಳೀಯ ಮಾರುಕಟ್ಟೆಯೂ ಇಲ್ಲ. ಇದರಿಂದಾಗಿ ಕೆಲವು ಬೆಳೆಗಾರರು ಕಟಾವಿಗೆ ಬಂದಿರುವ ವೀಳ್ಯದೆಲೆ ಬಿಡಿಸಿಲ್ಲ. ಬಳ್ಳಿಯಲ್ಲಿಯೇ ಕೊಳೆಯುತ್ತಿದೆ.

‘ವೀಳ್ಯದೆಲೆ ಖರೀದಿಗೆ ಗ್ರಾಮ ಹಾಗೂ ರೈತರ ಜಮೀನಿಗೆ ಬರುವ ಸ್ಥಳೀಯ ವ್ಯಾಪಾರಿಗಳು 1 ಪೆಂಡಿ ವೀಳ್ಯದೆಲೆ ₹ 1,500ದಿಂದ ₹ 2,000ಕ್ಕೆ ಕೇಳುತ್ತಿದ್ದಾರೆ. ಅರ್ಧಕ್ಕಿಂತ ಹೆಚ್ಚು ದರ ಕುಸಿತ ಆಗಿರುವುದರಿಂದ ಬೆಳೆಗಾರರಿಗೆ ದಿಕ್ಕು ತೋಚದಂತಾಗಿದೆ.ವೀಳ್ಯದೆಲೆ ಬೆಳೆಯಲು ಮಾಡಿರುವ ಖರ್ಚು ಸಹ ಕೈಸೇರದಂತಹ ಸ್ಥಿತಿ ನಿರ್ಮಾಣವಾಗಿದೆ. ಕಟಾವಿಗೆ ಬಂದಿರುವ ವೀಳ್ಯದೆಲೆ ಕೊಯ್ಯ
ದಿದ್ದರೆ ಕೊಳೆಯುತ್ತದೆ. ಇದರಿಂದಾಗಿ ಬಳ್ಳಿ ಹಾಳಾಗುತ್ತದೆ. ಆದ್ದರಿಂದ ರೈತರು ಅನಿವಾರ್ಯವಾಗಿ ಮಧ್ಯವರ್ತಿಗಳು ಕೇಳುವ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ’ ಎಂದು ಬೇಸರಿಸಿದರುಸಣ್ಣಕಿಟ್ಟದಹಳ್ಳಿ ಗ್ರಾಮದ ವೀಳ್ಯದೆಲೆ ಬೆಳೆಗಾರ ಈಶಣ್ಣ.

‘1 ಎಕರೆಯಲ್ಲಿ ವೀಳ್ಯದೆಲೆ ಬೆಳೆಯಲು ಸಗಣಿ ಹಾಗೂ ರಾಸಾಯನಿಕ ಗೊಬ್ಬರ ಹಾಕಿಸಿದ್ದು, ಔಷಧ ಸಿಂಪಡಣೆ, ಕಾರ್ಮಿಕರ ಕೂಲಿ, ಪ್ರತಿ ತಿಂಗಳು ಬಳ್ಳಿ ಕಟ್ಟಿಸುವುದು, ಪ್ರತಿವರ್ಷ ಬಳ್ಳಿಯನ್ನು ಗುಂಡಿಗೆ ಇಳಿಸುವುದು, ಇನ್ನಿತರ ಖರ್ಚು ಸೇರಿ ವರ್ಷಕ್ಕೆ ₹ 2.50 ಲಕ್ಷಕ್ಕೂ ಅಧಿಕ ಖರ್ಚು ಬರುತ್ತದೆ. ಬಳ್ಳಿ ನಾಟಿ ಮಾಡಿದ 1 ವರ್ಷಕ್ಕೆ ವೀಳ್ಯದೆಲೆ ಕಟಾವಿಗೆ ಬರುತ್ತದೆ.ವರ್ಷಕ್ಕೆ ಸುಮಾರು 100ರಿಂದ 120 ಪೆಂಡಿ ವೀಳ್ಯದೆಲೆ ಇಳುವರಿ ಬರಬಹುದು. ಈಗ ಸಿಗುತ್ತಿರುವ ದರದಿಂದ ಬೆಳೆಗೆ ಖರ್ಚು ಮಾಡಿರುವ ಹಣವೂ ಕೈಸೇರದಂತಾಗಿದೆ’ ಎಂದು ಬೆಳೆಗಾರ ರಂಗಸ್ವಾಮಿ ‘ಪ್ರಜಾವಾಣಿ’ ಬಳಿ ಅಳಲುತೋಡಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.